‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ ಕೊನೆಯ ದಿನದ ಶೂಟ್; ಫೋಟೋ ವೈರಲ್
ಸದ್ಯ ಕಲರ್ಸ್ ಧಾರಾವಾಹಿಗಳನ್ನಷ್ಟೇ ನೋಡೋದಾದರೆ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯೇ ಟಾಪ್ನಲ್ಲಿದೆ! ಹೌದು, 11ನೇ ವಾರದ ಟಿಆರ್ಪಿ ಲೆಕ್ಕಾಚಾರದ ಪ್ರಕಾರ ಕಲರ್ಸ್ ಸೀರಿಯಲ್ಗಳ ಪೈಕಿ ಅತಿ ಹೆಚ್ಚು ಟಿಆರ್ಪಿ ಸಿಕ್ಕಿರೋದು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ. ಆ ಬಳಿಕ ‘ನಿನಗಾಗಿ’, ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಗಳು ಇವೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಲಕ್ಷ್ಮೀ ಬಾರಮ್ಮ’ (Lakshmi Baramma Serial) ಧಾರಾವಾಹಿ ಕೊನೆಯ ಹಂತಕ್ಕೆ ಬಂದಿದೆ. ಉತ್ತಮ ಟಿಆರ್ಪಿ ಇರುವ ಮಧ್ಯೆಯೂ ಧಾರಾವಾಹಿಯನ್ನು ಕೊನೆ ಮಾಡಲಾಗುತ್ತಿದೆ. ಈ ವಿಚಾರ ಈ ಧಾರಾವಾಹಿಯ ವೀಕ್ಷಕರಿಗೆ ಬೇಸರ ಮೂಡಿಸಿದೆ. ‘ಲಕ್ಷ್ಮೀ ಬಾರಮ್ಮ’ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಕಾಣುತ್ತಿದೆ. ಶೀಘ್ರವೇ ಈ ಧಾರಾವಾಹಿ ಕೊನೆ ಆಗಲಿದ್ದು, ಈ ಸ್ಥಾನಕ್ಕೆ ಹೊಸ ಧಾರಾವಾಹಿಯ ಆಗಮನ ಆಗಲಿದೆ.
ಆರಂಭದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಬರೋಬ್ಬರಿ ಒಂದು ಗಂಟೆ ಪ್ರಸಾರ ಕಾಣುತ್ತಾ ಇತ್ತು. ಆ ಬಳಿಕ ಅಕ್ಕ ಭಾಗ್ಯಾಳ ಕಥೆ ಬೇರೆ ಹಾಗೂ ತಂಗಿ ಲಕ್ಷ್ಮೀ ಕಥೆ ಬೇರೆಯಾಗಿ ಸಾಗಲು ಆರಂಭಿಸಿತು. ಈಗ ‘ಭಾಗ್ಯ ಲಕ್ಷ್ಮೀ’ ರಾತ್ರಿ 7 ಗಂಟೆಗೆ ಪ್ರಸಾರ ಕಾಣುತ್ತಿದ್ದರೆ, ‘ಲಕ್ಷ್ಮೀ ಬಾರಮ್ಮ’ 7.30ಕ್ಕೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯ ಕೊನೆಯ ದಿನದ ಶೂಟ್ ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ.
ಅನೇಕರು ಕಮೆಂಟ್ ಬಾಕ್ಸ್ನಲ್ಲಿ ಬೇಸರ ಹೊರಹಾಕಿದ್ದಾರೆ. ಈ ಧಾರಾವಾಹಿ ಇನ್ನಷ್ಟು ದಿನ ಪ್ರಸಾರ ಕಾಣಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ, ಭೂಮಿಕಾ ರಮೇಶ್ ಮೊದಲಾದವರು ನಟಿಸುತ್ತಿದ್ದಾರೆ. ಧಾರಾವಾಹಿ ಹ್ಯಾಪಿ ಎಂಡಿಂಗ್ ಕಾಣಲು ಇನ್ನು ಕೆಲವೇ ದಿನಗಳು ಬಾಕಿ ಇವೆ.
View this post on Instagram
ಕಲರ್ಸ್ ವಾಹಿನಿಯ ಸೀರಿಯಲ್ಗಳ ಪೈಕಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಟಾಪ್ನಲ್ಲಿದೆ. ಆ ಬಳಿಕ ‘ನಿನಗಾಗಿ’, ‘ಭಾಗ್ಯಲಕ್ಷ್ಮೀ’ ಧಾರಾವಾಹಿಗಳು ಬರುತ್ತವೆ. ಇಷ್ಟೊಳ್ಳೆಯ ಟಿಆರ್ಪಿ ಇದ್ದ ಹೊರತಾಗಿಯೂ ಇದನ್ನು ಪೂರ್ಣಗೊಳಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.
ಇದನ್ನೂ ಓದಿ: ಬಿಗ್ ಬಾಸ್ಗಿಂತ ಹೆಚ್ಚು ಟಿಆರ್ಪಿ ಪಡೆದ ‘ಲಕ್ಷ್ಮೀ ಬಾರಮ್ಮ’ ಈಗ ನಂಬರ್ 1 ಧಾರಾವಾಹಿ
ಹೊಸ ಧಾರಾವಾಹಿ ಯಾವುದು?
‘ಲಕ್ಷ್ಮೀ ಬಾರಮ್ಮ’ ಬಳಿಕ ಆ ಸ್ಥಾನದಲ್ಲಿ ತ್ರಿವಿಕ್ರಂ ನಟನೆಯ ‘ಮುದ್ದು ಸೊಸೆ’ ಪ್ರಸಾರ ಕಾಣಬಹುದು. ಈ ಧಾರಾವಾಹಿ ಪ್ರತಿ ದಿನ ರಾತ್ರಿ 7.30ಕ್ಕೆ ಪ್ರಸಾರ ಕಾಣುವ ಸಾಧ್ಯತೆ ಇದೆ. ಈ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.