Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗಿಂತ ಮೂಗೇ ಮೊದಲು ಬರುತ್ತೆ’; ಪೂಜಾ ಗಾಂಧಿಗೆ ನೇರವಾಗಿ ಹೇಳಿದ್ದ ಯೋಗರಾಜ್ ಭಟ್

ಪೂಜಾ ಗಾಂಧಿ ಅವರು ‘ಮಜಾ ಟಾಕೀಸ್’ ವೇದಿಕೆಯಲ್ಲಿ ‘ಮುಂಗಾರು ಮಳೆ’ ಚಿತ್ರದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರು ಪೂಜಾ ಅವರ ಮೂಗು ಫ್ರೇಮ್‌ಗೆ ಬರುವ ಮೊದಲು ಕಾಣುತ್ತದೆ ಎಂದು ಹೇಳಿದ್ದ ವಿಶೇಷ ಪ್ರಶಂಸೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ಈ ಚಿತ್ರವು ಅವರ ವೃತ್ತಿಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.

‘ನಿಮಗಿಂತ ಮೂಗೇ ಮೊದಲು ಬರುತ್ತೆ’; ಪೂಜಾ ಗಾಂಧಿಗೆ ನೇರವಾಗಿ ಹೇಳಿದ್ದ ಯೋಗರಾಜ್ ಭಟ್
‘ನಿಮಗಿಂತ ಮೂಗೇ ಮೊದಲು ಬರುತ್ತೆ’; ಪೂಜಾ ಗಾಂಧಿಗೆ ನೇರವಾಗಿ ಹೇಳಿದ್ದ ಯೋಗರಾಜ್ ಭಟ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Mar 29, 2025 | 10:27 AM

ಕಲಾವಿದರಾದ ಪೂಜಾ ಗಾಂಧಿ, ಗಣೇಶ್ (Ganesh) ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರ ವೃತ್ತಿ ಜೀವನವನ್ನೇ ಬದಲಿಸಿದ್ದು ‘ಮುಂಗಾರು ಮಳೆ’ ಸಿನಿಮಾ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ನಟಿಸಿದ್ದ ಪೂಜಾ ಗಾಂಧಿ ಅವರು ಈಗ ‘ಮಜಾ ಟಾಕೀಸ್’ ವೇದಿಕೆಗೆ ಬಂದಿದ್ದಾರೆ. ಪೂಜಾ ಗಾಂಧಿ ಅವರು ಈ ವೇಳೆ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ಹೇಳಿದ ಮಾತನ್ನು ಅವರು ಹೇಳಿದ್ದಾರೆ. ಇದನ್ನು ಅವರು ಕಾಂಪ್ಲಿಮೆಂಟ್ ಎಂದು ಕರೆದಿದ್ದಾರೆ.

ಪೂಜಾ ಗಾಂಧಿ ಮೂಲತಃ ಉತ್ತರ ಪ್ರದೇಶದ ಮೀರತ್​ನವರು. ಅವರು ನಟಿಸಿದ ಮೊದಲ ಸಿನಿಮಾ ‘ಮುಂಗಾರು ಮಳೆ’. ಈ ಸಿನಿಮಾ 2006ರಲ್ಲಿ ರಿಲೀಸ್ ಆಯಿತು. ನಂದಿನಿ ಹೆಸರಿನ ಪಾತ್ರವನ್ನು ಇದರಲ್ಲಿ ಮಾಡಿದರು. ಈ ಚಿತ್ರದಿಂದ ಅವರ ಬದುಕು ಬದಲಾಯಿತು. ಇತ್ತೀಚೆಗೆ ಪೂಜಾ ಗಾಂಧಿ ಅವರು ಯಾವುದೇ ನಾಯಕಿಯಾಗಿ ಯಾವುದೇ ಹೊಸ ಸಿನಿಮಾ ಮಾಡಿಲ್ಲ. ಸಂಸಾರದಲ್ಲಿ ಬ್ಯುಸಿ ಇರೋ ಅವರು, ರಿಯಾಲಿಟಿ ಶೋಗಳಿಗೆ ಅತಿಥಿ ಆಗಿ ಬರುತ್ತಾ ಇರುತ್ತಾರೆ.

ಇದನ್ನೂ ಓದಿ
Image
ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿದ್ದ ಅಜಯ್​ ರಾವ್​ಗೆ ಈಗ ಕೋಟಿ ರೂ. ಸಾಲ
Image
ಉತ್ತಮ TRP ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಈ ಸೂಪರ್ ಹಿಟ್ ಧಾರಾವಾಹಿ?
Image
ದಂಡಿಗೆ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ
Image
ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ, ದೇವರಿಗೆ ಬಿಟ್ಟಿದ್ದು: ಸಲ್ಮಾನ್ ಖಾನ್

‘ಯೋಗರಾಜ್ ಭಟ್ ಹೇಳಿದ ಒಂದು ಕಾಂಪ್ಲಿಮೆಂಟ್ ಈಗಲೂ ನೆನಪಿದೆ. ಫ್ರೇಮ್​ಗೆ ಹೋರೋಯಿನ್ ಬರೋ ಮೊದಲು ಅವರ ಮೂಗು ಬರುತ್ತದೆ ಎಂದು ಹೇಳಿದ್ದರು. ಆಗ ನಾನು ತೆಳ್ಳಗೆ ಇದ್ದೆ. ಹೀಗಾಗಿ, ಮೂಗು ಎದ್ದು ಕಾಣುತ್ತಿತ್ತು’ ಎಂದು ಪೂಜಾ ಗಾಂಧಿ ಅವರು ಹೇಳಿದ್ದಾರೆ.

‘ಮುಂಗಾರು ಮಳೆ’ ಸಿನಿಮಾದಲ್ಲಿ ಪದ್ಮಜಾ ರಾವ್ ಹಾಗೂ ಸುಧಾ ಬೆಳವಾಡಿ ಅವರು ತಾಯಂದಿರ ಪಾತ್ರ ಮಾಡಿದ್ದರು. ಸುಧಾ ಅವರು ಗಣೇಶ್ ತಾಯಿಯಾಗಿ, ಪದ್ಮಜಾ ಅವರು ಪೂಜಾ ಗಾಂಧಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡರು. ‘ಕನ್ನಡ ಚಿತ್ರರಂಗಕ್ಕೆ ಎರಡು ಮುದ್ದಾದ ತಾಯಂದಿರನ್ನು ಕೊಟ್ಟಿದ್ದು ಮುಂಗಾರು ಮಳೆ’ ಸಿನಿಮಾ ಎಂದು ಸೃಜನ್ ಲೋಕೇಶ್ ಅವರು ಬಾಯ್ತುಂಬ ಹೊಗಳಿದರು.

ಇದನ್ನೂ ಓದಿ:  ಮತ್ತದೇ ಶೈಲಿಯಲ್ಲಿ ಮೂಡಿಬಂದ ಯೋಗರಾಜ್ ಭಟ್ ಸಿನಿಮಾ ‘ಮನದ ಕಡಲು’

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾ ಮಾರ್ಚ್ 28ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರವೂ ಈ ವೇದಿಕೆ ಮೇಲೆ ಆಗಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಈ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Sat, 29 March 25

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!