15 ಲಕ್ಷ ರೂ.ನಲ್ಲಿ ರೆಡಿಯಾದ ಶಿವಣ್ಣನ ಸಿನಿಮಾ; ಮಾಡಿತ್ತು 13 ಪಟ್ಟು ಲಾಭ
ಶಿವರಾಜ್ಕುಮಾರ್ ಅವರ ಸಿನಿಮಾ ಒಂದು ಕೇವಲ 15 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡು, 2 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು. ಇದು 13 ಪಟ್ಟು ಲಾಭವನ್ನು ಗಳಿಸಿದ ಅಪರೂಪದ ಯಶಸ್ವಿ ಚಿತ್ರ. ಈ ಚಿತ್ರದ ಯಶಸ್ಸು ಮತ್ತು ಶಿವರಾಜ್ ಕುಮಾರ್ ಅವರ ವೃತ್ತಿಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತು.

ಶಿವರಾಜ್ಕುಮಾರ್ (Shivarajkumar) ನಟನೆಯ ಸಿನಿಮಾಗಳು ಈಗಲೂ ಒಳ್ಳೆಯ ಬಿಸ್ನೆಸ್ ಮಾಡುತ್ತವೆ. ಹಲವು ವರ್ಷಗಳಿಂದ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಅವರು ಕ್ಯಾನ್ಸರ್ ಮುಕ್ತರಾಗಿದ್ದು, ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಸಂದರ್ಶನ ಒಂದರಲ್ಲಿ ಅವರು ತಮ್ಮ ಸೂಪರ್ ಹಿಟ್ ಚಿತ್ರದ ಬಗ್ಗೆ ಮಾತನಾಡಿದ್ದರು. ಕೇವಲ 15 ಲಕ್ಷ ರೂಪಾಯಿನಲ್ಲಿ ಸಿದ್ಧವಾದ ಈ ಚಿತ್ರ ಬರೋಬ್ಬರಿ 13 ಪಟ್ಟು ಹೆಚ್ಚಿನ ಲಾಭ ಕಂಡಿತ್ತು ಎಂಬುದನ್ನು ಅವರು ರಿವೀಲ್ ಮಾಡಿದ್ದರು.
ಶಿವರಾಜ್ಕುಮಾರ್ ಅವರು 1974ರಲ್ಲಿ ರಿಲೀಸ್ ಆದ ‘ಶ್ರೀ ಶ್ರೀನಿವಾಸ ಕಲ್ಯಾಣ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದರು. ಇದು ಅವರು ನಟಿಸಿದ ಮೊದಲ ಸಿನಮಾ. ಅವರು ಹೀರೋ ಆಗಿ ನಟಿಸಿದ್ದು ‘ಆನಂದ್’ (1986) ಸಿನಿಮಾದಲ್ಲಿ. ಈ ಚಿತ್ರ ರಿಲೀಸ್ ಆಗಿ 39 ವರ್ಷಗಳು ಕಳೆದಿವೆ. ಸಿಂಗೀತಂ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಶಿವರಾಜ್ಕುಮಾರ್ ಹಾಗೂ ಸುಧಾರಾಣಿ ಈ ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ‘ಟುವ್ವಿ ಟುವ್ವಿ’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡಿನ ಜೊತೆ ಸಿನಿಮಾ ಕೂಡ ಗೆಲುವು ಕಂಡಿತು.
View this post on Instagram
ಈ ಚಿತ್ರಕ್ಕೆ ಆಗಿನ ಕಾಲದಲ್ಲಿ ಖರ್ಚಾಗಿದ್ದು ಕೇವಲ 15 ಲಕ್ಷ ರೂಪಾಯಿ. ಇದು ಈಗ ಸಣ್ಣ ಮೊತ್ತ ಇರಬಹುದು. ಆದರೆ, ಆಗಿನ ಕಾಲಕ್ಕೆ ಇದು ದೊಡ್ಡ ಮೊತ್ತವೇ ಸರಿ. ಈ ಚಿತ್ರ ಬರೋಬ್ಬರಿ 2 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. 15 ಲಕ್ಷ ರೂಪಾಯಿ ಎಲ್ಲಿ, 2 ಕೋಟಿ ರೂಪಾಯಿ ಎಲ್ಲಿ. ಅಂದರೆ ಬರೋಬ್ಬರಿ 13 ಪಟ್ಟು ಹೆಚ್ಚು ಗಳಿಕೆಯನ್ನು ಈ ಚಿತ್ರ ಮಾಡಿತ್ತು.
ಇದನ್ನೂ ಓದಿ: ಗೀತಾ ಶಿವರಾಜ್ಕುಮಾರ್ಗೆ ಸರ್ಜರಿ; ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ಶಿವರಾಜ್ಕುಮಾರ್ ಅವರು ಸದ್ಯ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ಬರ್ತ್ಡೇ ಪ್ರಯುಕ್ತ ಚಿತ್ರದ ಟೈಟಲ್ ರಿಲೀಸ್ ಆಗಿದೆ. ಇದರ ಜೊತೆಗೆ ಅವರು ಒಂದು ತಮಿಳು ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಅವರ ನಟನೆಯ ‘45’ ಚಿತ್ರ ಈ ವರ್ಷ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಯುಗಾದಿ ಪ್ರಯುಕ್ತ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.