Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಗೆ ನಾನು ಮುದ್ದು ರಾಕ್ಷಸಿ ಎನ್ನುತ್ತೇನೆ: ‘ವಾಮನ’ ಟ್ರೇಲರ್ ನೋಡಿ ಮಾತಾಡಿದ ದರ್ಶನ್

ನಟ ದರ್ಶನ್ ಅವರ ಆಪ್ತ ಬಳಗದಲ್ಲಿ ಧನ್ವೀರ್ ಗೌಡ ಗುರುತಿಸಿಕೊಂಡಿದ್ದಾರೆ. ಈಗ ಧನ್ವೀರ್ ನಟನೆಯ ‘ವಾಮನ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು (ಮಾರ್ಚ್​ 27) ಈ ಚಿತ್ರದ ಟ್ರೇಲರ್​ ಅನ್ನು ದರ್ಶನ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಅವರು ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಹೆಂಡತಿಗೆ ನಾನು ಮುದ್ದು ರಾಕ್ಷಸಿ ಎನ್ನುತ್ತೇನೆ: ‘ವಾಮನ’ ಟ್ರೇಲರ್ ನೋಡಿ ಮಾತಾಡಿದ ದರ್ಶನ್
Darshan Thoogudeepa
Follow us
ಮದನ್​ ಕುಮಾರ್​
|

Updated on: Mar 27, 2025 | 6:37 PM

‘ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ (Dhanveer Gowda) ‘ವಾಮನ’ನಾಗಿ ಏಪ್ರಿಲ್ 10ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೇಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆಯ ಕನ್ನಡ ಸಿನಿಮಾಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ’ ಎಂದು ದರ್ಶನ್ (Darshan) ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ‘ವಾಮನ’ ಟ್ರೇಲರ್ (Vaamana Movie Trailer)​ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ನಾನು ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ‘ಬಜಾರ್’ ಸಿನಿಮಾದಲ್ಲಿ ಒಂದು ರೀತಿ ನೋಡಿದೆ, ‘ಬೈಟು ಲವ್’ ಚಿತ್ರದಲ್ಲಿ ಬೇರೆ ರೀತಿ ನೋಡಿದೆ. ಅವರ ‘ಕೈವ’ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ವಾಮನ ನೋಡುತ್ತೇವೆ. ಈ ನಾಲ್ಕು ಸಿನಿಮಾಗಳಲ್ಲಿ ಖುಷಿ ವಿಷಯ ಏನೆಂದರೆ ಎಲ್ಲಿಯೂ ರಿಪೀಟ್ ಇಲ್ಲ. ನಾಲ್ಕು ಸಬ್ಜೆಕ್ಟ್ ಕೂಡ ಬೇರೆ ಬೇರೆ ರೀತಿ ಇದೆ. ಈಗ ‘ವಾಮನ’ ತಾಯಿ ಸೆಂಟಿಮೆಂಟ್ ಇರುವ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ಒಬ್ಬ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಇದರಲ್ಲಿದೆ’ ಎಂದಿದ್ದಾರೆ ದರ್ಶನ್.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ನನಗೆ ಈ ಸಿನಿಮಾದಲ್ಲಿ ಮುದ್ದು ರಾಕ್ಷಸಿ ಸಾಂಗ್ ಇಷ್ಟ. ಎಲ್ಲಿಂದ ಹುಡುಕಿದ್ದೀರಿ, ತುಂಬ ಚೆನ್ನಾಗಿದೆ ಅಂತ ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಮನೆಯಲ್ಲಿ ನನ್ನ ಹೆಂಡತಿ ಕೋಪ ಮಾಡಿಕೊಂಡರೆ ನಾನು ಕೂಡ ರೇಗಿಸುತ್ತೇನೆ. ಮುದ್ದು ರಾಕ್ಷಸಿ ಥರ ಇದ್ದೀಯ ಅಂತ ಹೇಳುತ್ತೇನೆ. ಇದು ಒಳ್ಳೆಯ ಮನರಂಜನೆ ಇರುವ ಸಿನಿಮಾ’ ಎಂದು ದರ್ಶನ್ ಅವರು ಹೇಳಿದ್ದಾರೆ.

ವಾಮನ ಸಿನಿಮಾ ಟ್ರೇಲರ್:

‘ದಯಮಾಡಿ ಕನ್ನಡ ಸಿನಿಮಾಗಳನ್ನು ಬೆಳೆಸಿ. ಯಾಕೆಂದರೆ, ಎಲ್ಲರೂ ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ನಾವು ಕೆಲವರು ಮಾತ್ರ ಕನ್ನಡಕ್ಕೆ ಸೀಮಿತ ಎಂದುಕೊಂಡಿರುತ್ತೇವೆ. ಕನ್ನಡ ಸಿನಿಮಾ ನೋಡಲಿಲ್ಲ ಎಂದರೆ ನಾವು ಇಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗಲ್ಲ. ನೀವು ಕೊಟ್ಟ ಆಶೀರ್ವಾದದಿಂದ ತೋಟ, ಹಸು ಮಾಡಿಕೊಂಡಿದ್ದೇವೆ. ಯಾವತ್ತಿದ್ದರೂ ನಾವು ಕನ್ನಡದಲ್ಲೇ ಸಿನಿಮಾ ಮಾಡುವುದು. ಈ ಚಿತ್ರರಂಗ ಬಿಟ್ಟು ನಮಗೆ ಬೇರೆ ಗೊತ್ತಿಲ್ಲ’ ಎಂದಿದ್ದಾರೆ ಡಿ ಬಾಸ್.

ಇದನ್ನೂ ಓದಿ: ರಾಜಸ್ಥಾನದಲ್ಲಿ ‘ದಿ ಡೆವಿಲ್’ ಶೂಟಿಂಗ್; ದರ್ಶನ್ ಅಭಿಮಾನಿಗಳಿಗೆ ಅಪ್​ಡೇಟ್ ನೀಡಿದ ತಂಡ

‘ನಾವು ನಂಬಿಕೊಂಡಿರುವುದೇ ಕನ್ನಡ ಪ್ರೇಕ್ಷಕರನ್ನು. ಚಿತ್ರಮಂದಿರದವರು ನಂಬಿಕೊಂಡಿರುವುದು ಕೂಡ ಕನ್ನಡ ಸಿನಿಮಾಗಳನ್ನು. ಇದು ಒಂದು ರೀತಿಯ ಚೈನ್ ಲಿಂಕ್. ಹುಳವನ್ನು ಕಪ್ಪೆ ತಿನ್ನುತ್ತೆ, ಕಪ್ಪೆಯನ್ನು ಹಾವು ತಿನ್ನುತ್ತೆ, ಹಾವನ್ನು ಹದ್ದು ಹಿಡಿಯುತ್ತದೆ. ಹದ್ದು ಸತ್ತು ಕೆಳಗೆ ಬಿದ್ದಾಗ ಮತ್ತೆ ಹುಳವೇ ತಿನ್ನುತ್ತದೆ. ಹಾಗೆ ಚಿತ್ರರಂಗ ಕೂಡ ಚೈನ್ ಲಿಂಕ್. ಹಾಗಾಗಿ ಎಲ್ಲರೂ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ. ವಾಮನ ಸಿನಿಮಾಗೆ ಒಳ್ಳೆಯದಾಗಲಿ’ ಎಂದು ದರ್ಶನ್ ಅವರು ಶುಭ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.