AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗಿಂತ ಹೆಚ್ಚು ಟಿಆರ್​ಪಿ ಪಡೆದ ‘ಲಕ್ಷ್ಮೀ ಬಾರಮ್ಮ’ ಈಗ ನಂಬರ್ 1 ಧಾರಾವಾಹಿ

2024ನೇ ಇಸವಿಯ 49ನೇ ವಾರದ ಕನ್ನಡ ಟಿವಿ ಟಿಆರ್​ಪಿ ವರದಿ ಬಿಡುಗಡೆಯಾಗಿದೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಟಾಪ್ ಸ್ಥಾನದಲ್ಲಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 11 ಉತ್ತಮ ರೇಟಿಂಗ್ ಪಡೆದಿದೆ. ‘ಲಕ್ಷ್ಮೀ ನಿವಾಸ’,‘ಪುಟ್ಟಕ್ಕನ ಮಕ್ಕಳು’, ‘ಭಾಗ್ಯಲಕ್ಷ್ಮೀ’, ಮತ್ತು ‘ಅಮೃತಧಾರೆ’ ಧಾರಾವಾಹಿಗಳು ಕೂಡ ಉತ್ತಮ ರೇಟಿಂಗ್ ಪಡೆದಿವೆ.

ಬಿಗ್ ಬಾಸ್​ಗಿಂತ ಹೆಚ್ಚು ಟಿಆರ್​ಪಿ ಪಡೆದ ‘ಲಕ್ಷ್ಮೀ ಬಾರಮ್ಮ’ ಈಗ ನಂಬರ್ 1 ಧಾರಾವಾಹಿ
ಬಿಗ್ ಬಾಸ್​ಗಿಂತ ಹೆಚ್ಚು ಟಿಆರ್​ಪಿ ಪಡೆದ ‘ಲಕ್ಷ್ಮೀ ಬಾರಮ್ಮ’ ಈಗ ನಂಬರ್ 1
ರಾಜೇಶ್ ದುಗ್ಗುಮನೆ
|

Updated on: Dec 12, 2024 | 2:55 PM

Share

ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ಟಿಆರ್​ಪಿ ವಾರದಿಂದ ವಾರಕ್ಕೆ ಭಿನ್ನತೆ ಕಾಣುತ್ತಲೇ ಇರುತ್ತದೆ. ಕೆಲವು ಧಾರಾವಾಹಿಗಳ ಟಿಆರ್​ಪಿ ಒಮ್ಮೆ ಭರ್ಜರಿ ಏರಿಕೆ ಕಂಡರೆ, ಇನ್ನೂ ಕೆಲವು ಸಂದರ್ಭದಲ್ಲಿ ಇಳಿಕೆ ಕಾಣುತ್ತವೆ. ರಿಯಾಲಿಟಿ ಶೋಗಳ ರೇಟಿಂಗ್ ವಿಚಾರ ಕೂಡ ಇದಕ್ಕೆ ಹೊರತಾಗಿಲ್ಲ. ಈಗ 2024ರ 49ನೇ ವಾರದ ಧಾರಾವಾಹಿ ಟಿಆರ್​ಪಿ ಹೊರ ಬಿದ್ದಿದೆ. ಯಾವ ಧಾರಾವಾಹಿ ಎಷ್ಟು ಟಿಆರ್​ಪಿ ಪಡೆದಿದೆ? ಬಿಗ್ ಬಾಸ್ ಟಿಆರ್​ಪಿ ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಭರ್ಜರಿ ಟಿಆರ್​ಪಿ ಸಿಗುತ್ತಿದೆ. ಈ ಶೋಗೆ ವಾರದ ದಿನ ಹಾಗೂ ವೀಕೆಂಡ್​ನಲ್ಲಿ ಒಳ್ಳೆಯ ಟಿಆರ್​ಪಿ ಸಿಗುತ್ತಿದೆ. ವಾರದ ದಿನಗಳಲ್ಲಿ ನಗರ ಭಾಗದಲ್ಲಿ 8.4 ಟಿವಿಆರ್​ ಸಿಕ್ಕಿದೆ. ಶನಿವಾರ ನಗರ ಭಾಗದಲ್ಲಿ 9.5 ಟಿಆರ್​ಪಿ ಹಾಗೂ ಭಾನುವಾರ 10.8 ಟಿಆರ್​ಪಿ ಸಿಕ್ಕಿದೆ. ವಾರ ಕಳೆದಂತೆ ಟಿಆರ್​ಪಿ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ:‘ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೇಕೆ ಅಷ್ಟೊಂದು ಅವಕಾಶ?’; ವೀಕ್ಷಕರಿಗೆ ಮೂಡಿದೆ ಪ್ರಶ್ನೆ 

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದಿದೆ. ಬ್ರೋ ಗೌಡ ನಟಿಸುತ್ತಿರುವ ಈ ಧಾರಾವಾಹಿ ಹಲವು ಟ್ವಿಸ್ಟ್​ಗಳನ್ನು ಪಡೆದುಕೊಂಡು ಸಾಗುತ್ತಿದೆ. ಇದು ಧಾರಾವಾಹಿಗೆ ಸಹಕಾರಿ ಆಗಿದೆ. ಈ ಧಾರಾವಾಹಿ ವಾರದ ದಿನಗಳ ಬಿಗ್ ಬಾಸ್ ಟಿಆರ್​ಪಿ​ಗಿಂತ ಹೆಚ್ಚಿನ ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ನಂಬರ್ 1 ಸೀರಿಯಲ್ ಎನಿಸಿಕೊಂಡಿದೆ.

ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ಎರಡು ಧಾರಾವಾಹಿಗಳು ಸ್ಥಾನ ಪಡೆದುಕೊಂಡಿವೆ. ‘ಪುಟ್ಟಕ್ಕನ ಮಕ್ಕಳು’ ಹಾಗೂ ‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ನಂತರ ‘ಅಣ್ಣಯ್ಯ’ ಧಾರಾವಾಹಿ ಇದೆ. ‘ಸೀತಾ ರಾಮ’ ಧಾರಾವಾಹಿ ತಂಡದವರು ಎಷ್ಟೇ ಸರ್ಕಸ್ ಮಾಡಿದರೂ ಉತ್ತಮ ಟಿಆರ್​ಪಿ ಸಿಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.