‘ಬಿಗ್ ಬಾಸ್ನಲ್ಲಿ ಐಶ್ವರ್ಯಾಗೇಕೆ ಅಷ್ಟೊಂದು ಅವಕಾಶ?’; ವೀಕ್ಷಕರಿಗೆ ಮೂಡಿದೆ ಪ್ರಶ್ನೆ
ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯಾ ಶಿಂಧೋಗಿ ಅವರು ಎರಡು ವಾರಗಳ ಕಾಲ ನಾಮಿನೇಷನ್‌ನಲ್ಲಿದ್ದರೂ, ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಇದರಿಂದ ವೀಕ್ಷಕರಲ್ಲಿ ಗೊಂದಲ ಮೂಡಿದೆ. ಶೋಭಾ ಅವರ ನಿರ್ಗಮನದ ನಂತರ ಐಶ್ವರ್ಯಾ ಅಥವಾ ಶಿಶಿರ್ ಅವರನ್ನು ಎಲಿಮಿನೇಟ್ ಮಾಡಬಹುದಿತ್ತು ಎಂಬ ಅಭಿಪ್ರಾಯವಿದೆ. ಸೋಶಿಯಲ್ ಮಿಡಿಯಾದಲ್ಲಿರೋ ಚರ್ಚೆ ಬಗ್ಗೆ ಇಲ್ಲಿದೆ ವಿವರ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯಾ ಶಿಂಧೋಗಿ ಅವರು ಇಷ್ಟೊತ್ತಿಗಾಗಲೇ ಎಲಿಮಿನೇಟ್ ಆಗಿರುತ್ತಿದ್ದರು. ಆದರೆ, ಅವರು ಅದೃಷ್ಟ ರೀತಿಯಲ್ಲಿ ಬಚಾವ್ ಆದರು. ಅವರನ್ನು ಇಷ್ಟೊಂದು ಸೇವ್ ಮಾಡ್ತಿರೋದು ಏಕೆ ಎಂಬ ಪ್ರಶ್ನೆ ಮೂಡಿದೆ. ಎರಡು ವಾರ ನಾಮಿನೇಷನ್ ಲಿಸ್ಟ್ನಲ್ಲಿ ಅವರಿದ್ದರು. ಆದರೆ, ಈ ವಾರ ಅವರ ಹೆಸರು ನಾಮಿನೇಷನ್ ಪಟ್ಟಿಯಲ್ಲೇ ಇಲ್ಲ. ಹೀಗಾಗಿ, ಅವರು ನಿರಂತರವಾಗಿ ಸೇವ್ ಆಗುತ್ತಾ ಬರುತ್ತಿದ್ದಾರೆ.
ಎರಡು ವಾರಗಳ ಹಿಂದೆ ಐಶ್ವರ್ಯಾ ಹಾಗೂ ಶಿಶಿರ್ ಅಂತಿಮ ಸ್ಥಾನದಲ್ಲಿ ಇದ್ದರು. ಆಗ ಶೋಭಾ ಅವರು ಹೊರ ಹೋಗುತ್ತೇನೆ ಎನ್ನುವ ಹಠ ಹಿಡಿದರು. ಅವರು ಹೊರ ಹೋಗಿದ್ದು ವೈಯಕ್ತಿಕ ನಿರ್ಧಾರ. ಆದರೆ, ಆ ದಿನ ಐಶ್ವರ್ಯಾ ಅಥವಾ ಶಿಶಿರ್ ಪೈಕಿ ಒಬ್ಬರನ್ನು ಎಲಿಮಿನೇಟ್ ಮಾಡಬಹುದಿತ್ತಲ್ಲ, ಈ ಮೂಲಕ ವೀಕ್ಷಕರ ವೋಟ್ಗೆ ಬೆಲೆ ಕೊಡಬಹುದಿತ್ತಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.
ಕಳೆದ ಎರಡು ವಾರಗಳ ನಾಮಿನೇಷನ್ ಲಿಸ್ಟ್ ನೋಡಿದರೆ ಅತ್ಯಂತ ದುರ್ಬಲ ಸ್ಪರ್ಧಿ ಎಂಬ ಹಣೆಪಟ್ಟಿ ಐಶ್ವರ್ಯಾ ಅವರಿಗೆ ಇದ್ದಿತ್ತು. ಇದು ಐಶ್ವರ್ಯಾ ಅವರಿಗೂ ತಿಳಿದಿತ್ತು. ಶೋಭಾ ಎಲಿಮಿನೇಟ್ ಆಗುವುದಕ್ಕೂ ಮೊದಲು ಐಶ್ವರ್ಯಾ ತಾವೇ ಮನೆಯಿಂದ ಹೊರ ಹೋಗುವುದು ಎಂದು ಕಣ್ಣೀರು ಹಾಕುತ್ತಿದ್ದರು. ಆದರೆ, ಆ ವಾರ ಅವರ ಅದೃಷ್ಟದ ಬಾಗಿಲು ತೆರೆಯಿತು.
View this post on Instagram
ಹಿಂದಿನ ವಾರ ಕೂಡ ಅವರು ಅಂತಿಮ ಹಂತದಲ್ಲಿ ಇದ್ದರು. ಆದರೆ, ಆ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಈ ವಾರ ಅವರು ನಾಮಿನೇಟ್ ಆಗಿಲ್ಲ. ಇದರಿಂದ ವೀಕ್ಷಕರಿಗೆ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಅವರನ್ನು ಅಷ್ಟೊಂದು ಅವಕಾಶ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಗಳ ಬಳಿ ವಿಶೇಷ ಮನವಿ ಮಾಡಿದ ನಮ್ರತಾ ಗೌಡ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಐಶ್ವರ್ಯಾನ ಅಷ್ಟೊಂದು ಸೇವ್ ಮಾಡುವ ಅವಶ್ಯಕತೆ ಏನಿತ್ತು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ದೊಡ್ಮನೆಯಲ್ಲಿ ಅವರಿಗೆ ಮೂರು ವಾರಗಳ ಹೆಚ್ಚಿನ ಕಾಲಾವಕಾಶ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:00 pm, Wed, 11 December 24