ನರೇಂದ್ರ ಮೋದಿಯ ಭೇಟಿಯಾದ ಕಪೂರ್ ಕುಟುಂಬ, ಕೊಟ್ಟರು ವಿಶೇಷ ಉಡುಗೊರೆ

Kapoor Family: ಕಪೂರ್ ಕುಟುಂಬದ ಪ್ರಮುಖ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಒಂದು ಅಮೂಲ್ಯ ಉಡುಗೊರೆಯನ್ನೂ ನೀಡಿದ್ದಾರೆ. ರಾಜ್ ಕಪೂರ್ ಅವರ 100ನೇ ವರ್ಷದ ಜಯಂತಿಯನ್ನು ಕಪೂರ್ ಕುಟುಂಬ ಆಚರಿಸುತ್ತಿದ್ದು, ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ.

ಮಂಜುನಾಥ ಸಿ.
|

Updated on:Dec 11, 2024 | 2:18 PM

ಕಪೂರ್ ಕುಟುಂಬದ ಪ್ರಮುಖ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ ಕಪೂರ್ 100ನೇ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಒಂದು ಅಮೂಲ್ಯ ಉಡುಗೊರೆಯನ್ನೂ ನೀಡಿದ್ದಾರೆ.

1 / 10
ಭಾರತೀಯ ಚಿತ್ರರಂಗಕ್ಕೆ ಕಪೂರ್ ಕುಟುಂಬ ಕೊಟ್ಟಿರುವ ಕೊಡುಗೆ ಅಪಾರವಾದುದು. ಈಗ ಹೆಮ್ಮರವಾಗಿ ಬೆಳೆದಿರುವ ಬಾಲಿವುಡ್​ಗೆಅಡಿಪಾಯ ಹಾಕಿದ್ದೆ ಕಪೂರ್ ಕುಟುಂಬದ ಪೃಥ್ವಿರಾಜ್ ಕಪೂರ್.

2 / 10
ಪೃಥ್ವಿರಾಜ್ ಕಪೂರ್ ಪುತ್ರ ರಾಜ್ ಕಪೂರ್, ಭಾರತದ ಮೊದಲ ಸೂಪರ್ ಸ್ಟಾರ್ ಎನಿಸಿಕೊಂಡರು. ಹಿಂದಿ ಚಿತ್ರರಂಗದ ಏಳ್ಗೆಗೆ ಅವರು ನೀಡಿದ ಕೊಡುಗೆ ಅಪಾರವಾದುದು.

3 / 10
ಇದೀಗ ರಾಜ್ ಕಪೂರ್ ಅವರ ನೂರನೇ ಜಯಂತಿಯನ್ನು ಕಪೂರ್ ಕುಟುಂಬ ಬಲು ಅದ್ಧೂರಿಯಾಗಿ, ಸ್ಮರಣಾರ್ಥವಾಗಿ ಆಚರಿಸಲು ಸಿದ್ದವಾಗಿದ್ದು, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

4 / 10
ರಾಜ್ ಕಪೂರ್ ಅವರು ಬಳಸಿದ ವಸ್ತುವೊಂದನ್ನು ಕಪೂರ್ ಕುಟುಂಬ ಹಾಗೆಯೇ ಕಾಯ್ದಿರಿಸಿಕೊಂಡಿತ್ತು. ಇದೀಗ ವಸ್ತುವನ್ನು ನರೇಂದ್ರ ಮೋದಿ ಅವರಿಗೆ ಕಾಣಿಕೆಯಾಗಿ ನೀಡಿ, 100 ಇಯರ್ಸ್ ಆಫ್ ರಾಜ್​ಕಪೂರ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.

5 / 10
ಡಿಸೆಂಬರ್ 13 ರಿಂದ 15ರ ವರೆಗೆ ರಾಜ್ ಕಪೂರ್ ಅವರ ಸಿನಿಮಾ ಉತ್ಸವ ನಡೆಯಲಿದ್ದು, 135 ಸ್ಕ್ರೀನ್​ಗಳಲ್ಲಿ ರಾಜ್ ಕಪೂರ್ ಅವರ ವಿವಿಧ ಐಕಾನಿಕ್ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಕಪೂರ್ ಅಭಿಮಾನಿಗಳು ಮತ್ತೊಮ್ಮೆ ರಾಜ್ ಕಪೂರ್ ಅವರ ಸಿನಿಮಾಗಳನ್ನು ನೋಡಬಹುದಾಗಿದೆ.

6 / 10
ರಾಜ್ ಕಪೂರ್ ಅವರ 100ನೇ ಜಯಂತಿ ಪ್ರಯುಕ್ತ ರಾಜ್ ಕಪೂರ್ ಸಿನಿಮಾ ಉತ್ಸವವನ್ನು ಕಪೂರ್ ಕುಟುಂಬ ಆಯೋಜಿಸಿದೆ. ಮುಂಬೈ ಸೇರಿದಂತೆ ಭಾರತದ ಸುಮಾರು 40 ನಗರಗಳಲ್ಲಿ ಈ ಸಿನಿಮಾ ಉತ್ಸವ ನಡೆಯಲಿದೆ.

7 / 10
ರಣ್​ಬೀರ್ ಕಪೂರ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ನೀತು ಕಪೂರ್, ಆಲಿಯಾ ಭಟ್, ರಿಧಿಮಾ ಕಪೂರ್ ಇನ್ನೂ ಹಲವರು ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದು, ಅವರೊಟ್ಟಿಗೆ ಸಂವಾದ ಸಹ ನಡೆಸಿದ್ದಾರೆ.

8 / 10
ರಾಜ್ ಕಪೂರ್ ನಟನೆಯ ಐಕಾನಿಕ್ ಸಿನಿಮಾಗಳಾದ, ‘ಬರ್ಸಾತ್’, ‘ಶ್ರೀ 420’, ‘ಆವಾರ’,  ‘ಮೇರಾ ನಾಮ್ ಜೋಕರ್’, ಜಾಗ್ತೆ ರಹೋ, ಜಿಸ್ ದೇಶ್​ ಮೆ ಗಂಗಾ ಬೆಹತಿ ಹೇ, ಇನ್ನೂ ಹಲವಾರು ಸಿನಿಮಾಗಳು ರಾಜ್ ಕಪೂರ್ ಸಿನಿಮಾ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

9 / 10
ರಾಜ್ ಕಪೂರ್ ಅವರನ್ನು ಭಾರತೀಯ ಚಿತ್ರರಂಗದ ಶೋ ಮ್ಯಾನ್ ಎಂದು ಕರೆಯಲಾಗುತ್ತದೆ. ತಮ್ಮ ವೃತ್ತಿ ಜೀವನದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಲವು ಅದ್ಭುತವಾದ ಸಿನಿಮಾಗಳನ್ನು ಅವರು ನೀಡಿದ್ದಾರೆ. ಸಿನಿಮಾಕ್ಕಾಗಿ ಸ್ಟುಡಿಯೋ ಸಹ ನಿರ್ಮಾಣ ಮಾಡಿದ್ದಾರೆ.

10 / 10

Published On - 2:18 pm, Wed, 11 December 24

Follow us