ಮುನಿಸು ಮರೆತು ಮತ್ತೆ ಒಂದಾದ ಮೋಕ್ಷಿತಾ-ಗೌತಮಿ; ಮಂಜುನ ದೂರ ಇಟ್ಟ ಜೋಡಿ

ಬಿಗ್ ಬಾಸ್ ಕನ್ನಡದಲ್ಲಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾಧವ್ ಅವರ ಗೆಳೆತನದಲ್ಲಿ ಮಂಜು ಕಾರಣದಿಂದ ಬಿರುಕು ಉಂಟಾಗಿತ್ತು. ಆದರೆ ಈಗ ಅವರು ಮತ್ತೆ ಒಂದಾಗಿದ್ದಾರೆ. ಮಂಜು ಮತ್ತು ಗೌತಮಿ ನಡುವಿನ ವೈಮನಸ್ಸಿನಿಂದಾಗಿ ಮೋಕ್ಷಿತಾ, ಗೌತಮಿಯನ್ನು ಬೆಂಬಲಿಸಿದ್ದಾರೆ. ತಂಡ ರಚನೆಯಲ್ಲಿ ಮೋಕ್ಷಿತಾ ಗೌತಮಿಯ ತಂಡವನ್ನು ಆಯ್ಕೆ ಮಾಡಿದ್ದಾರೆ.

ಮುನಿಸು ಮರೆತು ಮತ್ತೆ ಒಂದಾದ ಮೋಕ್ಷಿತಾ-ಗೌತಮಿ; ಮಂಜುನ ದೂರ ಇಟ್ಟ ಜೋಡಿ
ಗೌತಮಿ-ಮೋಕ್ಷಿತಾ
Follow us
ರಾಜೇಶ್ ದುಗ್ಗುಮನೆ
|

Updated on: Dec 12, 2024 | 6:57 AM

ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡಿದವರು. ಒಂದೇ ವಾಹಿನಿ ಎಂಬ ಕಾರಣದಿಂದಲೇ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಮಂಜು ಕಾರಣದಿಂದ ಮೋಕ್ಷಿತಾ ಅವರು ಗೆಳೆತನ ಮುರಿದುಕೊಂಡು ಹೊರಕ್ಕೆ ಬಂದರು. ಈಗ ಮೋಕ್ಷಿತಾ ಹಾಗೂ ಗೌತಮಿ ಮತ್ತೆ ಒಂದಾಗಿದ್ದಾರೆ. ಯಾವಾಗ ಗೌತಮಿ ಅವರು ಮಂಜು ಅವರಿಂದ ದೂರ ಆದರೋ ಆಗಲೇ ಮೋಕ್ಷಿತಾ ಹಾಗೂ ಗೌತಮಿ ಮತ್ತೆ ಒಂದಾಗಿದ್ದಾರೆ.

ಮೋಕ್ಷಿತಾ, ಗೌತಮಿ ಹಾಗೂ ಮಂಜು ಮೊದಲು ಒಂದಾಗಿದ್ದರು. ಇವರು ಏನೇ ಮಾಡೋದಾದರೂ ಪ್ಲ್ಯಾನ್ ಮಾಡಿಯೇ ಮಾಡುತ್ತಿದ್ದರು. ಆದರೆ, ದಿನ ಕಳೆದಂತೆ ಮಂಜು ಬಗ್ಗೆ ಮೋಕ್ಷಿತಾಗೆ ಅಸಮಾಧಾನ ಮೂಡಿತು. ಸ್ವಲ್ಪ ದಿನಗಳ ಹಿಂದೆ ಮೋಕ್ಷಿತಾ ಅವರು ಗೌತಮಿ ಹಾಗೂ ಮಂಜುನ ವೈರಿ ನೋಡಿದಂತೆ ನೋಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ.

ಗೌತಮಿ ಹಾಗೂ ಮಂಜು ಮಧ್ಯೆ ವೈಮನಸ್ಸು ಮೂಡುತ್ತಿದೆ. ಎಲ್ಲಾ ವಿಚಾರಗಳಲ್ಲೂ ಮಂಜು ಅವರೇ ಮೇಲುಗೈ ತೋರಿಸಲು ಪ್ರಯತ್ನಿಸುತ್ತಾರೆ ಎನ್ನುವುದು ಗೌತಮಿಗೆ ಸ್ಪಷ್ಟವಾಗಿದೆ. ಈ ಕಾರಣದಿಂದಲೇ, ಮಂಜು ಬಗ್ಗೆ ಗೌತಮಿ ಅಸಮಾಧಾನ ಹೊರಹಾಕಿದ್ದು, ನಿಮ್ಮಜೊತೆ ಇನ್ಮುಂದೆ ಗೆಳೆತನ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಮೋಕ್ಷಿತಾಗೆ ಸ್ಪಷ್ಟವಾದಂತಿದೆ. ಈ ಕಾರಣಕ್ಕೆ ಅವರು ಗೌತಮಿ ತಂಡ ಸೇರಿಕೊಂಡಿದ್ದಾರೆ.

ತಂಡ ರಚನೆ ಮಾಡುವ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದ್ದರು. ಒಂದು ತಂಡಕ್ಕೆ ಗೌತಮಿ ಕ್ಯಾಪ್ಟನ್ ಆದರೆ, ಮತ್ತೊಂದು ತಂಡಕ್ಕೆ ಹನುಮಂತ ನಾಯಕ. ಹನುಮಂತ ಹಾಗೂ ಗೌತಮಿ ಇಬ್ಬರೂ ಮೋಕ್ಷಿತಾನ ತಮ್ಮ ತಂಡಕ್ಕೆ ಸೇರಿಸಬೇಕು ಎಂದು ಬಯಸಿದರು. ಮೋಕ್ಷಿತಾ ಅವರು ಹನುಮಂತನ ತಂಡ ಸೇರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಚ್ಚರಿ ಎಂಬಂತೆ ಅವರು ಗೌತಮಿಯನ್ನು ಆಯ್ಕೆ ಮಾಡಿಕೊಂಡರು.

ಇದನ್ನೂ ಓದಿ: ಮುಖಕ್ಕೆ ಹೊಡೆದಂತೆ ಮಾತಾಡಿದ ಗೌತಮಿ; ಸ್ನೇಹ ಮಾಡಿದ್ದಕ್ಕೆ ಮಂಜುಗೆ ಸಿಕ್ಕಿದ್ದು ಇಷ್ಟೇ

ಮೋಕ್ಷಿತಾ ಹಾಗೂ ಗೌತಮಿ ಒಂದಾದರೆ ಮಂಜು ಅವರಿಗೆ ಹಿನ್ನಡೆ ಉಂಟಾಗುವುದು ಪಕ್ಕಾ ಆಗಿದೆ. ಮಂಜು ಅವರು ಗೌತಮಿ ಇಲ್ಲದೆ ಒಬ್ಬಂಟಿ ಭಾವನೆ ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ