- Kannada News Photo gallery Cricket photos Check out the fact that CSK Fan Trolled RCB on Ee Sala Cup Lollipop
RCBಗೆ ಕಪ್… ಲಾಲಿಪಾಪ್: CSK ಅಭಿಮಾನಿಗಳ ಗೇಲಿ ಹಿಂದಿರುವ ಅಸಲಿಯತ್ತೇನು?
IPL 2025 CSK vs RCB: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ 8ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 196 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 146 ರನ್ ಬಾರಿಸಿ 50 ರನ್ಗಳಿಂದ ಸೋಲೊಪ್ಪಿಕೊಂಡಿದೆ.
Updated on:Mar 29, 2025 | 10:54 AM

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೀಯಾಳಿಸಿದ್ರಾ? ಅದು ಸಹ ಲಾಲಿಪಾಪ್ ಹಿಡಿದುಕೊಂಡು..! ನಿಮಗೆ ಕಪ್ ಸಿಗಲ್ಲ, ಲಾಲಿಪಾಪೇ ಗತಿ ಎನ್ನುವ ಮೂಲಕ RCBಯನ್ನು ಟ್ರೋಲ್ ಮಾಡಲಾಗಿದೆ ಎಂಬ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಫೋಟೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಇದು ಫೇಕ್ ಎಂದು ತಿಳಿದು ಬಂದಿದೆ. ಅಲ್ಲದೆ ಈ ಫೋಟೋಗಳನ್ನು AI ಸಹಾಯದಿಂದ ರೂಪಿಸಲಾಗಿದೆ. ಇದೇ ಫೋಟೋಗಳನ್ನು ಬಳಸಿ ಚೆಪಾಕ್ನಲ್ಲಿ ಆರ್ಸಿಬಿಯನ್ನು ಸಿಎಸ್ಕೆ ಬಹಿರಂಗವಾಗಿ ಟ್ರೋಲ್ ಮಾಡಿದೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಈ ಹಿಂದೆ ಆರ್ಸಿಬಿ ಅಭಿಮಾನಿಗಳನ್ನು ಈ ಸಲ ಕಪ್ ನಿಮಗೆ ಲಾಲಿಪಾಪ್ ಎನ್ನುವ ಘೋಷವಾಕ್ಯದೊಂದಿಗೆ ಬಹಿರಂಗವಾಗಿ ಹೀಯಾಳಿಸಿರುವುದು ನಿಜ. ಐಪಿಎಲ್ 2024 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಒಟ್ಟುಗೂಡಿದ ಸಿಎಸ್ಕೆ ಫ್ಯಾನ್ಸ್ ಈ ಸಲ ಕಪ್ ಲಾಲಿಪಾಪ್ ಎಂದು ಘೋಷಣೆ ಕೂಗುತ್ತಾ ಆರ್ಸಿಬಿಯನ್ನು ಟ್ರೋಲ್ ಮಾಡಿದ್ದರು.

ಆದರೆ ಚೆಪಾಕ್ ಸ್ಟೇಡಿಯಂನಲ್ಲಿ ಸಿಎಸ್ಕೆ ಅಭಿಮಾನಿಗಳು ಲಾಲಿಪಾಪ್ ಅನ್ನು ಹಿಡಿದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾಲೆಳೆದಿಲ್ಲ. ಬದಲಾಗಿ ಇಂದೊಂದು ಸಂಪೂರ್ಣ ಫೇಕ್ ನ್ಯೂಸ್. ಅಲ್ಲದೆ ಪ್ರಸ್ತುತ ವೈರಲ್ ಆಗಿರುವ ಫೋಟೋಗಳು ಎಐ ಮೂಲಕ ರೂಪಿಸಿರುವುದು ಎಂದು ತಿಳಿದು ಬಂದಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 196 ರನ್ ಕಲೆಹಾಕಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 146 ರನ್ಗಳಿಸಿ 50 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಅದು ತವರು ಮೈದಾನದಲ್ಲಿ ಸಿಎಸ್ಕೆ ತಂಡದ ಅತ್ಯಂತ ಹೀನಾಯ ಸೋಲು ಎಂಬುದು ವಿಶೇಷ.
Published On - 10:53 am, Sat, 29 March 25



















