2190… ಅತ್ಯಂತ ಹೀನಾಯ ಸೋಲುಂಡ CSK
IPL 2025 RCB vs CSK; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಿದೆ. ಅದು ಕೂಡ 2190 ದಿನಗಳ ಬಳಿಕ ಅತ್ಯಂತ ಹೀನಾಯವಾಗಿ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದೆ. ಅಂದರೆ ಸಿಎಸ್ಕೆ ತಂಡವನ್ನು ತವರು ಮೈದಾನದಲ್ಲಿ ಯಾವುದೇ ತಂಡ 50 ರನ್ಗಳಿಂದ ಸೋಲಿಸಿರಲಿಲ್ಲ. ಆದರೀಗ ಆರ್ಸಿಬಿ ಚೆಪಾಕ್ ಕೋಟೆಯನ್ನು ಸಿಎಸ್ಕೆಯನ್ನು ಬಗ್ಗು ಬಡಿದಿದೆ.
Updated on: Mar 29, 2025 | 8:09 AM

IPL 2025: ಬರೋಬ್ಬರಿ 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೆನ್ನೈನ ಚೆಪಾಕ್ ಮೈದಾನದಲ್ಲಿ ರಾಯಲ್ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.

ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಆರಂಭಿಕರಾದ ವಿರಾಟ್ ಕೊಹ್ಲಿ (31) ಹಾಗೂ ಫಿಲ್ ಸಾಲ್ಟ್ (32) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಬಳಿಕ ಬಂದ ರಜತ್ ಪಾಟಿದಾರ್ 32 ಎಸೆತಗಳಲ್ಲಿ 51 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ಪರ ರಚಿನ್ ರವೀಂದ್ರ 41 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಈ ಮೂಲಕ ಆರ್ಸಿಬಿ 50 ರನ್ಗಳ ಜಯ ಸಾಧಿಸಿದೆ.

ವಿಶೇಷ ಎಂದರೆ ಇದು ಆರ್ಸಿಬಿ ಪಾಲಿಗೆ ಅತ್ಯಂತ ಮಹತ್ವದ ಗೆಲುವಾದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಅತ್ಯಂತ ಹೀನಾಯ ಸೋಲು. ಏಕೆಂದರೆ ಸಿಎಸ್ಕೆ ತಂಡವು ಕಳೆದ 17 ವರ್ಷಗಳಲ್ಲಿ ಚೆಪಾಕ್ ಮೈದಾನದಲ್ಲಿ 50 ರನ್ಗಳಿಂದ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ.

2019 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 46 ರನ್ಗಳಿಂದ ಪರಾಜಯಗೊಂಡಿದ್ದೇ ಹೀನಾಯ ಸೋಲಾಗಿತ್ತು. ಆದರೀಗ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚೆನ್ನೈನಲ್ಲೇ ಆರ್ಸಿಬಿ 50 ರನ್ಗಳಿಂದ ಬಗ್ಗು ಬಡಿದಿದೆ. ಈ ಮೂಲಕ ಸಿಎಸ್ಕೆ ತಂಡದ ತವರು ಮೈದಾನದಲ್ಲಿ ಅತ್ಯಧಿಕ ರನ್ಗಳ ಅಂತರಿಂದ ಗೆದ್ದ ತಂಡವೆಂಬ ಹಿರಿಮೆಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿದೆ.



















