Travel Tips: 2023ರ ನಿಮ್ಮ ಪ್ರವಾಸವನ್ನು ಅರ್ಥಪೂರ್ಣ ಮತ್ತು ಸ್ಮರಣೀಯವಾಗಿರಿಸಲು 5 ಸಲಹೆಗಳು

ಅರ್ಥಪೂರ್ಣ ಕ್ಷಣಗಳು ಸಾರ್ವಕಾಲಿಕವಾಗಿ ಸಂಭವಿಸುತ್ತದೆ. ವಿಶೇಷವಾಗಿ ನಮ್ಮ ಮನಸ್ಸು ಶಾಂತವಾಗಿರುವಾಗ ಅಥವಾ ನೀವು ಉತ್ತಮ ಭಾಂದವ್ಯದಲ್ಲಿದ್ದಾಗ ನಿಮ್ಮ ಕಲ್ಪನೆಯನ್ನು ವಿಸ್ತಾರವನ್ನಾಗಿ ಮಾಡಲು ಅವಕಾಶ ಮಾಡಿಕೊಡಿ. ಇದು ನಿಮಗೆ ದೂರದ ಮತ್ತು ಸಾಹಸಮಯ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಸ್ಪೂರ್ತಿ ನೀಡುತ್ತದೆ.

Travel Tips: 2023ರ ನಿಮ್ಮ ಪ್ರವಾಸವನ್ನು ಅರ್ಥಪೂರ್ಣ ಮತ್ತು ಸ್ಮರಣೀಯವಾಗಿರಿಸಲು 5 ಸಲಹೆಗಳು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Feb 03, 2023 | 5:54 PM

ಅರ್ಥಪೂರ್ಣ ಕ್ಷಣಗಳು ಸಾರ್ವಕಾಲಿಕವಾಗಿ ಸಂಭವಿಸುತ್ತದೆ. ವಿಶೇಷವಾಗಿ ನಮ್ಮ ಮನಸ್ಸು ಶಾಂತವಾಗಿರುವಾಗ ಅಥವಾ ನೀವು ಉತ್ತಮ ಭಾಂದವ್ಯದಲ್ಲಿದ್ದಾಗ ನಿಮ್ಮ ಕಲ್ಪನೆಯನ್ನು ವಿಸ್ತಾರವನ್ನಾಗಿ ಮಾಡಲು ಅವಕಾಶ ಮಾಡಿಕೊಡಿ. ಇದು ನಿಮಗೆ ದೂರದ ಮತ್ತು ಸಾಹಸಮಯ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಸ್ಪೂರ್ತಿ ನೀಡುತ್ತದೆ. ಈ ಪ್ರವಾಸಗಳು ವ್ಯಕ್ತಿಗಳು ತಮ್ಮ ಸ್ವಂತ ಆಲೋಚನೆಗಳನ್ನು ಆಳವಾಗಿ ಅಧ್ಯಯನ ಮಾಡಲು, ಶಾಂತತೆಯನ್ನು ಆನಂದಿಸಲು, ಹೊಸ ವಿಚಾರಗಳನ್ನು ತಿಳಿದುಕೊಳ್ಳಲು, ಜ್ಞಾನವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಕೋವಿಡ್-19ರ ಸಂದರ್ಭದಲ್ಲಿ ಇದ್ದಂತಹ ಪ್ರವಾಸ ನಿರ್ಭಂದಗಳಿಂದ ಜನರು ಈ ಸುಂದರ ಪ್ರಪಂಚವನ್ನು ತಮ್ಮ ಸ್ವಂತ ಇಚ್ಛೆಯಂತೆ ಸುತ್ತುವುದು ಎಷ್ಟು ಮುಖ್ಯವಾಗಿದೆ ಎಂಬುದನ್ನು ಅರಿತುಕೊಂಡಿದ್ದಾರೆ.

ಬ್ರೆಟ್‌ಸನ್ ಟ್ರಾವೆಲ್‌ನ ಭಾರತದ ಮುಖ್ಯಸ್ಥ ಸಂದೀಪ್ ಅರೋರಾ, 2023ರನ್ನು ಮತ್ತೆ ಚಿಂತೆ ಮುಕ್ತ ಮತ್ತು ಸಂಕೋಲೆಯಿಲ್ಲದ ಪ್ರಯಾಣದ ವರ್ಷವಾಗಿ ನೆನಪಿಡುವ ಅಗತ್ಯವಿದೆ. ಪ್ರವಾಸೋದ್ಯಮವನ್ನು ಇಂಗಾಲ ಮುಕ್ತವನ್ನಾಗಿ ಮಾಡುವುದು ಹೇಗೆ ಎಂಬುದರ ಕುರಿತು ವಿವರವಾಗಿ ಗಮನದಲ್ಲಿಟ್ಟುಕೊಂಡು ಸುಸ್ಥಿರತೆಯ ಅಂಶವನ್ನು ಅಂಗೀಕರಿಸುವುದು ಪ್ರಯಾಣದ ಪ್ರಮುಖ ತಿರುವಾಗಿದೆ. ಇಂದಿನ ದಿನಗಳಲ್ಲಿ ಪ್ರವಾಸಿಗರು, ಉದ್ಯಮಿಗಳು ಪ್ರವಾಸೋದ್ಯಮವು ಉದೋಗ ಸೃಷ್ಟಿ ಮತ್ತು ಜಿಡಿಪಿಯ ಮೌಲ್ಯವರ್ಧನೆ ಮಾಡುತ್ತದೆ ಎಂಬುದರ ಬಗ್ಗೆ ತಿಳುವಳಿಕೆ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Travel Tips: ನಿಮ್ಮ ಮುಂದಿನ ಟೂರ್ ಪ್ಲಾನ್​​ ಕೇರಳವೇ? ಹಾಗಿದ್ದರೆ ಈ ವಿಚಾರ ತಿಳಿದುಕೊಳ್ಳಲೇ ಬೇಕು

‘ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪ್ರಮುಖ ಅಂಶವಾಗಿರುವ ಪರಿಸರ ಸಂಪನ್ಮೂಲಗಳ ಸೂಕ್ತ ಬಳಕೆ, ಅಗತ್ಯ ಪ್ರಕ್ರಿಯೆಗಳನ್ನು ನಿರ್ವಹಿಸುವುದು ಮತ್ತು ನೈಸರ್ಗಿಕ ಪರಂಪರೆ ಮತ್ತು ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಸಹಾಯ ಮಾಡುವುದು ಭವಿಷ್ಯವಾಗಲಿದೆ. ಪ್ರವಾಸಿಗರು ಇಂದು ಹಸಿರು ಉಪಕ್ರಮಗಳ ಬಗ್ಗೆ ಹೆಚ್ಚು ತಿಳಿಯುವುದರಿಂದ ಮತ್ತು ಅದರ ಅನುಭವಗಳನ್ನು ಆರಿಸಿಕೊಳ್ಳುವುದರಿಂದ, ಸುಸ್ಥಿರ ಚಟುವಟಿಕೆಗಳನ್ನು ಒಳಗೊಂಡಿರುವ ಎಲ್ಲಾ ರಜಾದಿನಗಳು ಪ್ರಮುಖ ಆಕರ್ಷಣೆಯಾಗಿ ಉಳಿಯುತ್ತದೆ’ ಎಂದು ಅವರು ಹೇಳಿದರು.

2023ರಲ್ಲಿ ನಿಮ್ಮ ಪ್ರವಾಸವು ಹೆಚ್ಚು ಅರ್ಥಪೂರ್ಣ ಮತ್ತು ಸ್ಮರಣೀಯವಾಗಿಸಲು ಸಂದೀಪ್ ಅರೋರಾ ಕೆಲವೊಂದು ಮಾರ್ಗಗಳನ್ನು ಸೂಚಿಸಿದ್ದಾರೆ:

ನಿಸರ್ಗದಲ್ಲಿ ತಲ್ಲೀನರಾಗಿ: ನಗರದಿಂದ ದೂರ, ಆಚೆಗೆ ಪ್ರಯಾಣಿಸುವಾಗ ಯಾವಾಗಲೂ ನೈಸರ್ಗಿಕ ಪ್ರಕೃತಿಯ ಸೌಂದರ್ಯ ಕಾಣಸಿಗುತ್ತವೆ. ಇದು ರೋಮಾಂಚನಕಾರಿ ಅನುಭವಗಳು ಹಾಗೂ ಸ್ಥಳೀಯ ಜೀವನಶೈಲಿಯ ಬಗ್ಗೆ ಅನುಭವ ನೀಡುತ್ತದೆ. ಇಂತಹ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಭಾರತದಲ್ಲಿಯೇ ಎಲ್ಲಾದರೂ ಪ್ರಯಾಣ ಹೋಗಬೇಕೆಂದಿದ್ದರೆ, ಕಾರ್ಬೇಟ್ ರಾಷ್ಟ್ರೀಯ ಉದ್ಯಾನವನವು ಇದಕ್ಕೆ ಸೂಕ್ತ ಆಯ್ಕೆಯಾಗಿದೆ. ಇಲ್ಲಿ ಯಾವುದೇ ಮೊಬೈಲ್ ಸಂಪರ್ಕವಿಲ್ಲದೆ ಕಾಡಿನ ನೈಜ ಆಕರ್ಷಣೆಯನ್ನು ಸವಿಯಬಹುದು. ಇದು ಮಾತ್ರವಲ್ಲದೆ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವವರಾಗಿದ್ದರೆ, ನಿಮ್ಮ ರಜಾದಿನವನ್ನು ಕಳೆಯಲು ಕೇರಳದ ಸೈಲೆಂಟ್ ವ್ಯಾಲಿ ರಾಷ್ಟೀಯ ಉದ್ಯಾನವನ, ಚಿಕ್ಕಮಗಳೂರಿನಲ್ಲಿ ಕಾಣಸಿಗುವ ಪಶ್ಚಿಮ ಘಟ್ಟಗಳು, ಲಡಾಖ್‌ನ ಹಾನ್ಲೆ, ಮೇಘಾಲಯದಂತಹ ಸ್ಥಳಗಳಿಗೆ ಭೇಟಿ ನೀಡಬಹುದು. ಇಂತಹ ಪ್ರದೇಶಗಳು ನಿಮ್ಮ ಚಿಂತೆಯನ್ನು ಮರೆತು ಪ್ರಕೃತಿ ಸೌಂದರ್ಯದಲ್ಲಿ ತೇಲುವಂತೆ ಮಾಡುತ್ತದೆ.

ನಿಮ್ಮ ಕಡುಬಯಕೆಯನ್ನು ಪೂರೈಸಿಕೊಳ್ಳಿ: ನೀವು ನಿಮ್ಮ ಕನಸಿನ ಐಷಾರಾಮಿ ಪ್ರವಾಸಿತಾಣಗಳಾದ ಆಸ್ಟೆಲಿಯಾದ ಗೃಟ್ ಬ್ಯಾರಿಯರ್ ರೀಫ್ ಅಥವಾ ಈಜಿಫ್ಟ್, ಸ್ವಿಜರ್‌ಲ್ಯಾಂಡ್‌ಗೆ ಹೋಗುವ ಕಡುಬಯಕೆಯನ್ನು ಹೊಂದಿದ್ದರೆ, ಅಂತಹ ಆಸೆಗಳನ್ನು ಪೂರೈಸಿಕೊಳ್ಳಿ. ಅವುಗಳನ್ನು ಪೂರೈಸಲು ಸಾಧ್ಯವಿಲ್ಲದಿದ್ದರೆ, ಭಾರತದಲ್ಲಿಯೂ ಅಂತಹ ಐಷಾರಾಮಿ ಪ್ರವಾಸಿ ತಾಣಗಳಿವೆ. ದ್ವೀಪಗಳು, ಕಡಲ ತೀರಗಳು, ಹಿಮ ಪ್ರದೇಶಗಳು, ಪರ್ವತ ಹಾದಿಗಳು, ಮರುಭೂಮಿ ಇಂತಹ ಸ್ಥಳಗಳಿಗೆ ಹೋಗುವ ಮೂಲಕ ನಿಮ್ಮ ಐಷಾರಾಮಿ ಪ್ರವಾಸದ ಕಡುಬಯಕೆಯನ್ನು ಪೂರೈಸಿಕೊಳ್ಳಬಹುದು. ಇದರ ಮೂಲಕ 2023ರ ವರ್ಷವನ್ನು ಸ್ಮರಣಿಯವಾಗಿಸಬಹುದು.

ವಿಲಕ್ಷಣ ಕುತೂಹಲಕಾರಿ ಪ್ರದೇಶಗಳ ಆಯ್ಕೆ: 2023ರ ವರ್ಷವನ್ನು ಸ್ಮರಣೀಯವಾಗಿಸಲು, ವಿಲಕ್ಷಣ, ಸಾಹಸಮಯ ಸ್ಥಳಗಳಿಗೆ ಭೇಟಿ ನೀಡಬಹುದು. ಇಂಕಾ ನಾಗರಿಕತೆಯ ಪ್ರದೇಶ, ಅಮೆಜಾನ್ ಕಾಡುಗಳು, ಸೈಬೀರಿಯಾ, ಗ್ರೀನ್‌ಲ್ಯಾಂಡ್ ಇಂತಹ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬಹುದು. ಇದಲ್ಲದೇ ಭಾರತದ ಕಾರವಾನ್ ಟೂರಿಸಮ್ ಮತ್ತು ಮಾನ್ಸೂನ್ ಟೂರಿಸಮ್ ಕೂಡಾ ಆಯ್ಕೆ ಮಾಡಿಕೊಳ್ಳಬಹುದು.

ನೌಕಾಯಾನ ಕೈಗೊಳ್ಳಿ: ನೀವು ನೌಕಾಯಾನದ ಮೂಲಕ ಭಾರತದ ಮುಖ್ಯ ಭೂಭಾಗದಿಂದ ಅಂಡಮಾನ್ ನಿಕೋಬಾರ್ ದ್ವೀಪಗಳು ಅಥವಾ ಲಕ್ಷದ್ವೀಪಕ್ಕೆ ಪ್ರಯಾನ ಕೈಗೊಳ್ಳಬಹುದು. ಭಾರತದಲ್ಲಿ ಕ್ರೂಸ್, ಬೋಟ್ ಪ್ರವಾಸೋಧ್ಯಮವು ವೈವಿಧ್ಯಮಯವಾಗಿದೆ. ಇಂತಹ ಪ್ರವಾಸವು ನಿಮಗೆ ವಿಶೇಷ ಅನುಭವಗಳನ್ನು ನೀಡುತ್ತದೆ. ತಣ್ಣನೆಯ ಗಾಳಿ, ನೀರಿನ ಅಲೆಗಳ ಸದ್ದು, ಹಾರುವ ಮೀನುಗಳು ಈ ಎಲ್ಲಾ ವಿಹಂಗಮ ನೋಟಗಳು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ನಿಮಗೆ ಸದಾ ನೆನಪಿನಲ್ಲಿಡಬಹುದಾದ ಪ್ರಯಾಣವಾಗಿರುತ್ತದೆ.

ಪುನರುತ್ಪಾದನೆಯ ಅನುಭವವನ್ನು ಪಡೆಯಿರಿ: ಪ್ರಸ್ತುತ ಪೀಳಿಗೆಯು ಪ್ರಕೃತಿಯನ್ನು ಭವಿಷ್ಯಕ್ಕಾಗಿ ಪೋಷಣೆ ಮಾಡುವ ಅಗತ್ಯವಿದೆ. ಕಾಳಜಿ ಮತ್ತು ಪುನರುತ್ಪಾದನೆಯ ಭಾಗವಾಗಿ ನೀವು ಥೈಲ್ಯಾಂಡ್‌ನ ಆನೆ ಕ್ರೆಚ್ ಆಗಿರಬಹುದು, ಆಪ್ರಿಕಾದ ಸಬ್ ಸಹರಾನ್‌ನ ಗೊರಿಲ್ಲಾ ಕೇಂದ್ರವಾಗಿರಬಹುದು, ಗ್ರೇಟ್ ಬಸ್ಟರ್ಡ್ ಬ್ರೀಡಿಂಗ್ ಸೆಂಟರ್ ಹೀಗೆ ಅನೇಕ ರೀತಿಯ ಪ್ರಕೃತಿ ಹಾಗೂ ಪ್ರಾಣಿ, ಪಕ್ಷಿ ಸಂರಕ್ಷಣಾ ಸಂಸ್ಥೆಗಳಿಗೆ ಹಣಕಾಸಿನ ಸಹಾಯ ಮಾಡಬಹುದು. ಇಂತಹ ಸಣ್ಣ ಸಹಾಯ ಜೀವನಪರ್ಯಂತ ಸ್ಮರಣೀಯವಾಗಿರಿಸುತ್ತದೆ ಮಾತ್ರವಲ್ಲದೆ ಇದರಿಂದ ಮುಂದಿನ ಪೀಳಿಗೆಗೂ ಕೂಡಾ ವಿನಾಶದ ಹಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ನೋಡುವ ಅವಕಾಶ ಸಿಗುತ್ತದೆ.

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ