Cucumber in Summer: ಬೇಸಿಗೆಯಲ್ಲಿ ತಂಪಾಗಿರಬೇಕು ಅಂದ್ರೆ ನೀವು ಸೌತೆಕಾಯಿಯ ಪ್ರಯೋಜನಗಳನ್ನು ತಿಳಿಯಲೇಬೇಕು! ಅದು ನಿಮ್ಮ ಆಹಾರದಲ್ಲಿ ಇರಲಿ

cucumber in summer ಸೌತೆಕಾಯಿಯು ಸಿಲಿಕಾ ಅಂಶ ಇರುತ್ತದೆ. ಇದು ಕೂದಲು ಮತ್ತು ಉಗುರಿನ ಆರೈಕೆಗೆ ಒಳ್ಳೆಯದು. ಸೌತೆಕಾಯಿಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಪರಿಣಾಮವಾಗಿ, ಇದು ಮಲಬದ್ಧತೆಯನ್ನು ನಿವಾರಿಸುತ್ತದೆ.

Cucumber in Summer: ಬೇಸಿಗೆಯಲ್ಲಿ ತಂಪಾಗಿರಬೇಕು ಅಂದ್ರೆ ನೀವು ಸೌತೆಕಾಯಿಯ ಪ್ರಯೋಜನಗಳನ್ನು ತಿಳಿಯಲೇಬೇಕು! ಅದು ನಿಮ್ಮ ಆಹಾರದಲ್ಲಿ ಇರಲಿ
ಬೇಸಿಗೆಯಲ್ಲಿ ತಂಪಾಗಿರಬೇಕು ಅಂದ್ರೆ ಸೌತೆಕಾಯಿ ನಿಮ್ಮ ಆಹಾರದಲ್ಲಿ ಇರಲಿ
Follow us
ಸಾಧು ಶ್ರೀನಾಥ್​
|

Updated on:Mar 14, 2023 | 6:23 AM

ಬೇಸಿಗೆ ಜೋರಾಗಿಯೆ ಕಾಲೂರಿದೆ. ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪದಾರ್ಥಗಳಲ್ಲಿ ಸೌತೆಕಾಯಿ ಕೂಡ ಒಂದು. ಇದರಲ್ಲಿ ವಿಟಮಿನ್ ಕೆ, ವಿಟಮಿನ್ ಎ, ವಿಟಮಿನ್ ಸಿ ಇದೆ. ಸೌತೆಕಾಯಿಯ (Cucumber) ರಸವನ್ನು ಕುಡಿಯುವುದು ಕೂಡ ಪ್ರಯೋಜನಕಾರಿ. ಇದು ನಿಮ್ಮನ್ನು ದೇಹದೊಳಗಿಂದ ತಂಪಾಗಿರಿಸುತ್ತದೆ. ಬೇಸಿಗೆ ಬಂದಿದೆ. ಕೆಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಬಿಸಿ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಬಿಸಿಲಿನ ತಾಪ ಮತ್ತು ಬೆವರಿನಿಂದ ಒದ್ದಾಡುವ ದಿನಗಳು (Summer) ಬರಲಿವೆ. ಈ ಸಮಯದಲ್ಲಿ ಜನರು ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಬೆವರಿನ ರೂಪದಲ್ಲಿ ದೇಹದಿಂದ ಹೆಚ್ಚಿನ ಪ್ರಮಾಣದ ನೀರು ಕಳೆದುಹೋಗುತ್ತದೆ. ಈ ಸಮಯದಲ್ಲಿ ದ್ರವಗಳನ್ನು ಹೆಚ್ಚು ತೆಗೆದುಕೊಳ್ಳಬೇಕು. ಅಲ್ಲದೆ, ನೀವು ತಿನ್ನುವ ಆಹಾರದ ಬಗ್ಗೆ ಜಾಗರೂಕರಾಗಿರಿ. ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಪದಾರ್ಥಗಳಲ್ಲಿ ಸೌತೆಕಾಯಿ ಕೂಡ ಒಂದು. ಸೌತೆಕಾಯಿಯಲ್ಲಿ ವಿಟಮಿನ್ ಕೆ, ವಿಟಮಿನ್ ಎ ಮತ್ತು ವಿಟಮಿನ್ ಸಿ ಲಭ್ಯವಿದೆ. ಸೌತೆಕಾಯಿಯ ರಸವನ್ನು ಕುಡಿಯುವುದು ಕೂಡ ಪ್ರಯೋಜನಕಾರಿ. ಒಳಗಿನಿಂದ ನಿಮ್ಮನ್ನು ತಂಪಾಗಿರಿಸುತ್ತದೆ. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ತಾಜಾವಾಗಿರಿಸುತ್ತದೆ. ಇದರ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಖ್ಯಾತ ಪೌಷ್ಟಿಕ ತಜ್ಞ ಲೊವನೀತ್ ಬಾತ್ರಾ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಬೇಸಿಗೆಯಲ್ಲಿ ನಮ್ಮ ಆಹಾರದಲ್ಲಿ ಸೌತೆಕಾಯಿ ಏಕೆ ಅತ್ಯಗತ್ಯ ಎಂದು ಅವರು ವಿವರಿಸಿದ್ದಾರೆ (Cucumber Benefits in Summer). ಆ ವಿಷಯಗಳನ್ನು ನೋಡೋಣ..

ಸೌತೆಕಾಯಿಯಲ್ಲಿ ಶೇ. 95ರಷ್ಟು ನೀರು ಇರುತ್ತದೆ. ಅದು ದೇಹದಲ್ಲಿನ ವಿಷಕಾರಿ ಅಂಶವನ್ನು ತೆಗೆದುಹಾಕುವ ಮೂಲಕ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟಿರುತ್ತದೆ. ಇವುಗಳಲ್ಲಿ ನೀರಿನಂಶ ಇರುವುದರಿಂದ ದೇಹವನ್ನು ಒಳಗಿನಿಂದ ಶುದ್ಧಗೊಳಿಸುತ್ತದೆ. ಇದು ದೇಹದಿಂದ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ.

ಕ್ಯುಕುರ್ಬಿಟಾಸಿನ್ ಬಿ ಎಂಬುದು ಸೌತೆಕಾಯಿಯಲ್ಲಿ ಹೇರಳವಾಗಿರುವ ನೈಸರ್ಗಿಕ ವಸ್ತುವಾಗಿದೆ. ಇದರಲ್ಲಿ ಅಪೊಪ್ಟೋಸಿಸ್-ಇಂಡಕ್ಷನ್ ಸಂಭವಿಸುತ್ತದೆ ಮತ್ತು ಆ ಮೂಲಕ ಮಾನವ ಜೀವಕೋಶಗಳಿಗೆ ಕ್ಯಾನ್ಸರ್ ವಿರೋಧಿ ಸಾಮರ್ಥ್ಯವನ್ನು ನೀಡುತ್ತದೆ. ಅಲ್ಲದೆ, ತರಕಾರಿ ಸಿಪ್ಪೆಯಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Also Read: 

ದಿನಾ ಒಂದೇ ರೀತಿಯ ಆಹಾರ ಸೇವಿಸುತ್ತಿದ್ದೀರಾ? ಸದಾ ಒಂದೇ ರೀತಿಯ ಆಹಾರ ತಿನ್ನುತ್ತಿದ್ದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ, ಜಾಗ್ರತೆ!

ಸೌತೆಕಾಯಿಯಲ್ಲಿ ನಾರಿನಂಶ, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಹೇರಳವಾಗಿದೆ. ಈ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇದಲ್ಲದೆ, ಹೆಚ್ಚಿನ ಪೊಟ್ಯಾಸಿಯಮ್ ಮತ್ತು ನೀರಿನ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸೌತೆಕಾಯಿ ದೇಹದ ಆರೋಗ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ.. ಮನುಷ್ಯನನ್ನು ಸುಂದರವಾಗಿಯೂ ಇಡುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ, ಚರ್ಮವು ಸಾಮಾನ್ಯವಾಗಿ ಬೇಸಿಗೆಯಲ್ಲಿ ಅನೇಕ ಸಮಸ್ಯೆಗಳಿಂದ ಬಳಲುತ್ತದೆ. ಪರಿಣಾಮವಾಗಿ ಉರಿಯೂತಕ್ಕೆ ಪರಿಹಾರ ನೀಡುತ್ತದೆ.

ಸೌತೆಕಾಯಿಯು ಸಿಲಿಕಾ ಅಂಶ ಇರುತ್ತದೆ. ಇದು ಕೂದಲು ಮತ್ತು ಉಗುರಿನ ಆರೈಕೆಗೆ ಒಳ್ಳೆಯದು. ಸೌತೆಕಾಯಿಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಪರಿಣಾಮವಾಗಿ, ಇದು ಮಲಬದ್ಧತೆಯನ್ನು ನಿವಾರಿಸುತ್ತದೆ.

ಸೌತೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಕೆಫೀಕ್ ಆಮ್ಲದ ಸಮೃದ್ಧಿಯಿಂದಾಗಿ, ಇದು ಕಿರಿಕಿರಿ ಅಥವಾ ಟ್ಯಾನ್ ಮಾಡಿದ ಚರ್ಮವನ್ನು ಶಮನಗೊಳಿಸುತ್ತದೆ. ಇದು ಊತವನ್ನು ಸಹ ಕಡಿಮೆ ಮಾಡುತ್ತದೆ. ಸೌತೆಕಾಯಿಯಲ್ಲಿರುವ ಸಂಕೋಚಕ ಗುಣವು ಚರ್ಮದ ಕಂದುಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 am, Tue, 14 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ