Healthy diet: ಆರೋಗ್ಯಕರ ಜೀವನಕ್ಕಾಗಿ ಈ ಆಹಾರ ಕ್ರಮ ಅನುಸರಿಸಿ, ನಟಿ ಪ್ರಣಿತಾ ನೀಡಿದ ಸಲಹೆ ಇಲ್ಲಿದೆ
ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಿಮ್ಮ ಆಹಾರಕ್ರಮದಲ್ಲಿ ನೀವು ಸೇರಿಸಬೇಕಾದ ಮೂರು ಆಹಾರಗಳ ಕುರಿತ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಟಿ ಪ್ರಣಿತಾ ಸುಭಾಷ್ ಹಂಚಿಕೊಂಡಿದ್ದಾರೆ.
ನಾವು ಆರೋಗ್ಯಕರವಾಗಿ ಮತ್ತು ಸಧೃಡವಾಗಿರಲು, ನಮ್ಮ ಆಹಾರಕ್ರಮದಲ್ಲಿ ವಿವಿಧ ರೀತಿ ತಾಜಾ ಹಾಗೂ ಪೋಷಕಾಂಶಯುಕ್ತ ಆಹಾರಗಳನ್ನು ಸೇರಿಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಿಮ್ಮ ಆಹಾರಕ್ರಮದಲ್ಲಿ ನೀವು ಸೇರಿಸಬೇಕಾದ ಮೂರು ಆಹಾರಗಳ ಕುರಿತ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಟಿ ಪ್ರಣಿತಾ ಸುಭಾಷ್ (Pranitha Subhash) ಹಂಚಿಕೊಂಡಿದ್ದಾರೆ.ಆರೋಗ್ಯಕರ ಆಹಾರ ಪದ್ಧತಿ ಮತ್ತು ಪೌಷ್ಟಿಕ ಆಹಾರದ ಆಯ್ಕೆಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅದು ಸಹಾಯಕವಾಗುತ್ತದೆ. ಈ ಆರೋಗ್ಯಕರ ಆಹಾರಗಳು ನಮ್ಮ ದೇಹದ ತೂಕವನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣದಲ್ಲಿಟ್ಟುಕೊಳ್ಳಲು ಕೂಡಾ ಸಹಾಯಕವಾಗುತ್ತದೆ.
ನಮ್ಮನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು, ನಾವು ನಮ್ಮ ಆಹಾರಕ್ರಮದಲ್ಲಿ ವಿವಿಧ ರೀತಿಯಲ್ಲಿ ತಾಜಾ ಮತ್ತು ಪೋಷಕಾಂಶಯುಕ್ತ ಆಹಾರಗಳನ್ನು ಸೇರಿಸಿಕೊಳ್ಳಬೇಕು. ಇದೇ ರೀತಿಯ ಕೆಲವೊಂದು ಆರೋಗ್ಯಕರ ಆಹಾರ ಕ್ರಮಗಳ ಬಗ್ಗೆ ದಕ್ಷಿಣ ಭಾರತದ ಖ್ಯಾತ ನಟಿ ಪ್ರಣಿತಾ ಸುಭಾಷ್ ಅವರು ಹಂಚಿಕೊಂಡಿದ್ದಾರೆ.
ಬಾದಾಮಿ ಸೇವನೆಯ ಅಭ್ಯಾಸ ಮಾಡಿಕೊಳ್ಳಿ: ಬಾದಾಮಿ ಶಕ್ತಿಯುತವಾದ ಮತ್ತು ಪೋಷಕಾಂಶಗಳಿಂದ ತುಂಬಿದ ರುಚಿಕರವಾದ, ಆರೋಗ್ಯಕರವಾದ ಆಹಾರ ಆಯ್ಕೆಯಾಗಿದೆ. ಪ್ರಣಿತಾ ಸುಭಾಷ್ ಹೇಳುತ್ತಾರೆ, ನಾನು ಪ್ರತಿದಿನ ಬೆಳಗ್ಗೆ ಒಂದು ಹಿಡಿ ಬಾದಾಮಿಗಳನ್ನು ಸೇವಿಸುತ್ತೇನೆ. ಏಕೆಂದರೆ ಅವುಗಳು ತೃಪ್ತಿಕರವಾಗಿರುತ್ತವೆ ಮತ್ತು ಇದು ವರ್ಕೌಟ್ ಮಾಡುವ ಮುಂಚೆ ಮತ್ತು ನಂತರದ ಪರಿಪೂರ್ಣ ಆಹಾರವಾಗಿದೆ.
ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ಅದು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಅದು ನಮ್ಮನ್ನು ದಿನವಿಡೀ ಸಕ್ರೀಯವಾಗಿರಲು ಸಹಾಯ ಮಾಡುತ್ತದೆ. ಬಾದಾಮಿ ಪ್ರೋಟೀನ್‌ಗಳ ಸಮೃದ್ಧ ಮೂಲವಾಗಿರುವುದರಿಂದ ಇದು ನಮ್ಮ ದೇಹಕ್ಕೆ ಶಕ್ತಿ ಇಳುವರಿ ಮಾತ್ರವಲ್ಲದೆ ಸ್ನಾಯುವಿನ ದ್ರವ್ಯರಾಶಿಯ ಬೆಳವಣಿಗೆ ಮತ್ತು ನಿರ್ವಹಣೆಯನ್ನು ಸರಾಗವಾಗಿಸುತ್ತದೆ. ಪ್ರತಿದಿನ ಬೆಳಗ್ಗೆ ಬೆರಳೆಣಿಕೆಯಷ್ಟು ಬಾದಾಮಿಯನ್ನು ತಿನ್ನುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬಹುದು.
ಹೆಚ್ಚು ಹಸಿರು ಸೊಪ್ಪು ತರಕಾರಿಗಳ ಸೇವನೆ ಮಾಡಿ: ಹಸಿರು ಸೊಪ್ಪು, ತರಕಾರಿಗಳು ಹೇರಳವಾದ ಫೈಬರ್, ಜೀವಸತ್ವಗಳು, ಖನಿಜಗಳ ಮೂಲವಾಗಿದೆ. ಇವುಗಳ ಸೆವನೆಯಿಂದ ನಿಮ್ಮ ದೇಹವನ್ನು ವಿವಿಧ ರೋಗಗಳಿಂದ ರಕ್ಷಣೆ ಮಾಡಬಹುದು ಮತ್ತು ಗುಣಮಟ್ಟದ ಜೀವನವನ್ನು ನಡೆಸಬಹುದು. ಹಸಿರು ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚುವರಿ ತೂಕವನ್ನು ಹೆಚ್ಚಿಸದ ಕಾರಣ ನೀವು ನಿಮ್ಮ ಆಯ್ಕೆಯ ಅನುಸಾರವಾಗಿ ಎಷ್ಟು ಪ್ರಮಾಣದಲ್ಲಿ ಬೇಕಾದರೂ ಈ ಹಸಿರು ತರಕಾರಿಗಳನ್ನು ಸೇವಿಸಬಹುದು.
ಇದನ್ನೂ ಓದಿ: Healthy Diet: ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುತ್ತಾ, ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ
ಕಡಿಮೆ ಸಕ್ಕರೆ ಅಂಶವಿರುವ ಇರುವ ಆಹಾರಗಳನ್ನು ಸೇವಿಸಿ: ಸಕ್ಕರೆಯ ಆಹಾರವು ಟೈಪ್ 2 ಮಧುಮೇಹ ಮತ್ತು ಹೃದ್ರೋಗಗಳಂತಹ ಕಾಯಿಲೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ನಿಮ್ಮ ದೀರ್ಘಾವಧಿಯ ಆರೋಗ್ಯಕ್ಕಾಗಿ ಸಕ್ಕರೆ ಆಹಾರಗಳು ಮತ್ತು ಪಾನೀಯಗಳನ್ನು ಮಿತಿಗೊಳಿಸುವುದು ಮುಖ್ಯವಾಗಿದೆ. ಮೊಸರು, ಸ್ಮೂಥಿಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ಕಡಿಮೆ ಸಕ್ಕರೆಯನ್ನು ಹೊಂದಿರುವ ಆಹಾರವನ್ನು ಸೇವಿಸಿ. ಇದು ನಿಮ್ಮ ತೂಕವನ್ನು ನಿರ್ವಹಿಸಲು ಮತ್ತು ಒಟ್ಟಾರೆ ದೇಹದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Published On - 3:40 pm, Mon, 13 March 23