Same food every day: ದಿನಾ ಒಂದೇ ರೀತಿಯ ಆಹಾರ ಸೇವಿಸುತ್ತಿದ್ದೀರಾ? ಸದಾ ಒಂದೇ ರೀತಿಯ ಆಹಾರ ತಿನ್ನುತ್ತಿದ್ದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ, ಜಾಗ್ರತೆ!
ಪ್ರತಿದಿನ ವಿವಿಧ ಆಹಾರಗಳನ್ನು ತಿನ್ನುವುದರಿಂದ ನಿಮ್ಮ ಕರುಳಿನಲ್ಲಿ ವಿವಿಧ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಇದು ತುಂಬಾ ಒಳ್ಳೆಯ ಆರೋಗ್ಯದ ಲಕ್ಷಣವಾಗಿದೆ. ಆದರೆ ಒಂದೇ ರೀತಿಯ ಆಹಾರವನ್ನು ತಿನ್ನುವುದರಿಂದ...
ವೈವಿಧ್ಯಮಯ ಭಾರತದಲ್ಲಿ ವಿಭಿನ್ನ ಆಹಾರ ಪದ್ದತಿಗಳಿಗೆ ಕೊರತೆಯೇನೂ ಇಲ್ಲ. ಲೋಕೋ ಭಿನ್ನ ರುಚಿ (variety of food) ಅನ್ನುವ ಹಾಗೆ ವಿಭಿನ್ನ ರುಚಿಗಳ ಆಹಾರ ಪದ್ಧತಿಗಳು ಲಭ್ಯವಿವೆ. ಆದರೂ ಕೆಲವು ಜನರು ಒಂದೇ ಮಾದರಿಯ ಆಹಾರ ಪದ್ಧತಿಗೆ (Eating) ಜೋತುಬಿದ್ದಿರುತ್ತಾರೆ. ಇನ್ನು ಕೆಲವರು ಅಂತಹುದೇ ಏಕತಾನತೆಯ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಈ ಸರದಿಯಲ್ಲಿ ಕೆಲವರು ಒಂದೇ ಆಹಾರ ತಿನ್ನುವುದಕ್ಕಾಗಿ ಊಟವನ್ನೂ ಬಿಡುತ್ತಾರೆ. ಆದರೆ ಪ್ರತಿನಿತ್ಯ ಒಂದೇ ರೀತಿಯ ಆಹಾರವನ್ನು ಸೇವಿಸುವುದರಿಂದ (same food every day) ಹೆಚ್ಚಿನ ಆರೋಗ್ಯ ಸಮಸ್ಯೆಗಳಿವೆ (health problems) ಎನ್ನುತ್ತಾರೆ ವೈದ್ಯ ತಜ್ಞರು. ವಿಶೇಷವಾಗಿ ಅಪೌಷ್ಟಿಕತೆ ಮತ್ತು ಕರುಳಿನ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗಿದೆ.
ಆಹಾರವನ್ನು ಮಿತವಾಗಿ ತಿಂದರೆ ಅಮೃತ, ಅತಿಯಾಗಿ ಆಹಾರ ಸೇವಿಸಿದರೆ ವಿಷ ಎಂದು ಕೆಲವರು ಹೇಳುತ್ತಾರೆ. ಏಕೆಂದರೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನಾವು ಆಹಾರದ ಮೂಲಕ ಒದಗಿಸಬೇಕು. ಆದರೆ ಕೆಲವರು ಬೆಳಿಗ್ಗೆ ಟಿಫಿನ್ ಮಾಡುತ್ತಾರೆ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಒಂದೇ ತರಹದ ಊಟ ಮಾಡುತ್ತಾರೆ. ಅದರಲ್ಲೂ ಕೆಲವರು ಬೆಳಗ್ಗೆ ಇಡ್ಲಿ ಮಾತ್ರವೇ ತಿನ್ನುತ್ತಾರೆ. ಇನ್ನು ಕೆಲವರು ರಾತ್ರಿ ಚಪಾತಿಯನ್ನೇ ನೆಚ್ಚಿಕೊಂಡಿದ್ದಾರೆ. ಅಲ್ಲದೆ ಊಟದ ಸಮಯದಲ್ಲಿ ನಿತ್ಯವೂ ಒಂದೇ ಮಾದರಿಯ ಸಾಂಬಾರನ್ನು ಸೇವಿಸುತ್ತಾರೆ.
ಆದರೆ ಹೀಗೆ ಪ್ರತಿನಿತ್ಯ ಒಂದೇ ರೀತಿಯ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ವಿಶೇಷವಾಗಿ ಅಪೌಷ್ಟಿಕತೆ ಮತ್ತು ಕರುಳಿನ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ದೈನಂದಿನ ಬದುಕಿನಲ್ಲಿ ಒಂದೇ ತೆರನಾದ ಆಹಾರ ದಿನಚರಿಯನ್ನು ಪಾಲಿಸುವುದು ಒಳಿತಲ್ಲ ಎಂದು ವೈದ್ಯರು ಸೂಚಿಸುತ್ತಾರೆ. ಈ ಹಿನ್ನೆಲೆಯಲ್ಲಿ ದಿನನಿತ್ಯ ಒಂದೇ ತರಹದ ಆಹಾರ ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಕ್ಷೀಣದಾಯಕ ಕರುಳಿನ ಆರೋಗ್ಯ:
ಪ್ರತಿದಿನ ವಿವಿಧ ಆಹಾರಗಳನ್ನು ತಿನ್ನುವುದರಿಂದ ನಿಮ್ಮ ಕರುಳಿನಲ್ಲಿ ವಿವಿಧ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಇದು ತುಂಬಾ ಒಳ್ಳೆಯ ಆರೋಗ್ಯದ ಲಕ್ಷಣವಾಗಿದೆ. ಆದರೆ ಒಂದೇ ರೀತಿಯ ಆಹಾರವನ್ನು ತಿನ್ನುವುದರಿಂದ ಸೂಕ್ಷ್ಮಜೀವಿಗಳಿಗೆ ಹೊಸ ಬ್ಯಾಕ್ಟೀರಿಯಾವನ್ನು ಅನುಭವಿಸುವ ಅವಕಾಶವನ್ನು ನೀಡುವುದಿಲ್ಲ. ಅಂದರೆ ನೀವು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ.
Also Read:
Heat Rash in Summer: ಬೇಸಿಗೆಯಲ್ಲಿ ಬೆವರು ಸಾಲೆಯನ್ನು ತಡೆಯುವುದು ಹೇಗೆ?
ವಿಶೇಷವಾಗಿ ನೀವು ನಿರಂತರವಾಗಿ ಅನಾರೋಗ್ಯಕರ ಆಹಾರಗಳನ್ನು ಸೇವಿಸುತ್ತಿದ್ದರೆ, ನಿಮ್ಮ ಕರುಳು ನಿಮ್ಮನ್ನು ಆರೋಗ್ಯಕರವಾಗಿಡಲು ಸರಿಯಾದ ಬ್ಯಾಕ್ಟೀರಿಯಾ ಇಲ್ಲದೆ ಪರದಾಡುತ್ತದೆ ಎಂಬುದು ಮನನನ ಮಾಡಿಕೊಳ್ಳಿ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಒಂದೇ ರೀತಿಯ ಆಹಾರವನ್ನು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ವಿಟಮಿನ್ ಕೊರತೆಗಳು:
ನಾವು ಆಹಾರದ ಮೂಲಕ ನಮ್ಮ ದೇಹಕ್ಕೆ ಜೀವಸತ್ವಗಳನ್ನು ಒದಗಿಸಬೇಕಾಗಿದೆ. ಪ್ರತಿದಿನ ಒಂದೇ ರೀತಿಯ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಜೀವಸತ್ವಗಳನ್ನು ಒದಗಿಸುವುದು ಸಾಧ್ಯವಾಗದಿರಬಹುದು. ವಿಶೇಷವಾಗಿ ಹೃದಯವು ಜೀವಸತ್ವಗಳ ಕೊರತೆಯಿಂದಾಗಿ ತೊಂದರೆ ಎದಿರಿಸಬೇಕಾಗುತ್ತದೆ. ಮೂಳೆಗಳ ಆರೋಗ್ಯದ ಮೇಲೆ ಒಂದೇ ರೀತಿಯ ಆಹಾರ ಪದ್ಧತಿ ತೀವ್ರ ಪರಿಣಾಮ ಬೀರುತ್ತದೆ.
ನೀವು ಪ್ರತಿದಿನ ಸೇವಿಸುವ ಆಹಾರವನ್ನು ಬದಲಾಯಿಸುವ ಮೂಲಕ, ನಿಮ್ಮ ದೇಹವು ಅಗತ್ಯವಿರುವ ಎಲ್ಲಾ ಜೀವಸತ್ವಗಳನ್ನು ಕನಿಷ್ಠ ಪೂರಕಗಳೊಂದಿಗೆ ಪಡೆಯುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು.
ಆರೋಗ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ