Relationship: ಸವಾಲುಗಳ ಮಧ್ಯೆ ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆ?

ಆಧುನಿಕ ಜಗತ್ತಿನಲ್ಲಿ ಕೆಲಸಕ್ಕಿಂತ ಸಂಬಂಧವು ಸಂಕೀರ್ಣವಾಗುತ್ತಿದೆ. ಒಂದೆಡೆ ನಿಮ್ಮನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸುವ ಮೊಬೈಲ್ ಇತ್ಯಾದಿ ಗ್ಯಾಜೆಟ್‌ಗಳಿದ್ದರೂ, ಇನ್ನೊಂದು ಕಡೆ ಕೆಲಸದ ಮಧ್ಯೆ ನನಗೆ ಸಮಯ ಮೀಸಲಿಡುತ್ತಿಲ್ಲ ಎನ್ನುವ ದೂರು.

Relationship: ಸವಾಲುಗಳ ಮಧ್ಯೆ ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 25, 2023 | 4:27 PM

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳು ಬ್ರೇಕ್‌ಅಪ್ ಮಾಡಿಕೊಂಡು ಪರಸ್ಪರ ದೂರವಾಗುವ ಘಟನೆಯನ್ನು ಕಣ್ಣಾರೆ ನೊಡುತ್ತಿರುತ್ತೇವೆ. ಕೆಲವೊಮ್ಮೆ ಕೆಲಸದ ಒತ್ತಡವೋ ಅಥವಾ ಇನ್ನೇನೋ ಕಾರಣದಿಂದಲೋ ದಂಪತಿಗಳು ಅಥವಾ ಪ್ರೇಮಿಗಳ ನಡುವೆ ಪರಿಣಾಮಕಾರಿ ಸಂವಹನದ ಕೊರತೆಯಿಂದ ಸಂಬಂಧಗಳು ಮುರಿದು ಬೀಳುತ್ತಿವೆ. ಎಲ್ಲರೂ ಬಯಸುವುವಂತಹದ್ದು ಆರೋಗ್ಯಕರ ಸಂಬಂಧ. ಜಗಳ, ಕೋಪವನ್ನು ದೂರವಿಟ್ಟು ಆದಷ್ಟು ಅನ್ಯೋನ್ಯತೆಯಿಂದ ಬಾಳಬೇಕೆಂದು ಪ್ರಯತ್ನಪಡುತ್ತಾರೆ. ಆದರೆ ಒತ್ತಡದ ಜೀವನಶೈಲಿ ಅಥವಾ ಕೆಲಸದಿಂದಾಗಿ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಈ ಸವಾಲುಗಳನ್ನೆಲ್ಲಾ ಎದುರಿಸಿ ಸಂಬಂಧವನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ.

ಆಧುನಿಕ ಜಗತ್ತಿನಲ್ಲಿ ಕೆಲಸಕ್ಕಿಂತ ಸಂಬಂಧವು ಸಂಕೀರ್ಣವಾಗುತ್ತಿದೆ. ಒಂದೆಡೆ ನಿಮ್ಮನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸುವ ಮೊಬೈಲ್ ಇತ್ಯಾದಿ ಗ್ಯಾಜೆಟ್‌ಗಳಿದ್ದರೂ, ಇನ್ನೊಂದು ಕಡೆ ಕೆಲಸದ ಮಧ್ಯೆ ನನಗೆ ಸಮಯ ಮೀಸಲಿಡುತ್ತಿಲ್ಲ ಎನ್ನುವ ದೂರು. ಈ ಸಂಬಂಧದಲ್ಲಿ ಸಂಗಾತಿಗಳು ಇಬ್ಬರಿಗೊಬ್ಬರು ಪರಸ್ಪರ ಸಮಯವನ್ನು ಮೀಸಲಿಡದಿದ್ದಾಗ, ಅವರ ಮಧ್ಯೆ ಸಾಮಾನ್ಯವಾಗಿ ಬಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತವೆ. ಹಾಗೂ ನಂತರದಲ್ಲಿ ಇದುವೇ ಸಂಬಂಧದ ಕ್ಷೀಣತೆಗೆ ಕಾರಣವಾಗುತ್ತದೆ. ಸಂಬಂಧದ ವಿಷಯಕ್ಕೆ ಬಂದರೆ ಯಾವುದನ್ನು ರಾಜಿ ಮಾಡಿಕೊಳ್ಳುವಂತಿಲ್ಲ ಮತ್ತು ದಂಪತಿಗಳ ನಡುವಿನ ಪರಿಣಾಮಕಾರಿ ಸಂವಹನದ ಕೊರತೆಯು ಬಾಂಧವ್ಯವನ್ನು ಹಾಳುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಅನೇಕ ದಂಪತಿಗಳು ಇಂದು ಹೆಚ್ಚಾಗಿ ಪ್ರತ್ಯೇಕತೆಯನ್ನು ಬಯಸುತ್ತಿದ್ದಾರೆ. ಏಕೆಂದರೆ ಅವರು ತಮ್ಮ ಒತ್ತಡದ ಕೆಲಸದ ನಡುವೆ ಪರಸ್ಪರ ಒಬ್ಬರಿಗೊಬ್ಬರು ಸಮಯವನ್ನು ಕೊಡುತ್ತಿಲ್ಲ. ಅಥವಾ ಆ ಸಮಯದಲ್ಲಿ ಹೆಚ್ಚು ಮುಖ್ಯವೆಂದು ತೋರುವ ಇತರ ಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ. ನಂಬಿಕೆಯ ಕೊರತೆ, ಸಂಗಾತಿಗೆ ಸುಳ್ಳು ಹೇಳುವುದು, ಅವರಿಗೆ ಅಗೌರವ ತೋರುವುದು, ಅವರ ಭಾವನೆಗಳಿಗೆ ನೋವುಂಟು ಮಾಡುವುದು ಈ ಸಂಗತಿಗಳೆಲ್ಲ ಸಂಬಂಧವನ್ನು ಹಾಳುಮಾಡುತ್ತದೆ.

ಸಂಬಂಧದಲ್ಲಿನ ಪ್ರಮುಖ ಸವಾಲುಗಳು

ಮ್ಯಾಚ್‌ಮಿ ಸಂಸ್ಥೆಯ ಸಹ ಸಂಸ್ಥಾಪಕರಾದ ಮಿಶಿ ಸೂದ್ ಮತ್ತು ತಾನಿಯಾ ಸೋಂಧಿ ಅವರು ಹೇಳುವಂತೆ ದಂಪತಿಗಳು ಎದುರಿಸುವ ಪ್ರಮುಖ ಸವಾಲುಗಳು ಹಾಗೂ ಆ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲುವುದು ಎಂಬುದು ಇಲ್ಲಿದೆ.

ಸಂವಹನ: ಯಾವುದೇ ಸಂಬಂಧವು ಆರೋಗ್ಯಕರ ರೀತಿಯಲ್ಲಿ ಮುಂದುವರೆಯಲು ಪರಿಣಾಮಕಾರಿ ಸಂವಹನ ಅಥವಾ ಸಂಗಾತಿಗಳ ನಡುವಿನ ಉತ್ತಮ ಮಾತುಕತೆ ತುಂಬಾ ಮುಖ್ಯವಾಗಿರುತ್ತದೆ. ದಂಪತಿಗಳು ಪರಸ್ಪರ ಮುಕ್ತವಾಗಿ ಸಂವಹನ ಮಾಡುವುದು, ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಒಬ್ಬರಿಗೊಬ್ಬರು ವ್ಯಕ್ತಪಡಿಸುವುದು ಮತ್ತು ಮುಖ್ಯವಾಗಿ ತಮ್ಮೊಳಗಿನ ಅಹಂ ಬಿಟ್ಟು ಸಂಗಾತಿಯೊಂದಿಗೆ ಹೊಂದಿಕೊಳ್ಳಲು ಸಿದ್ಧರಿರಬೇಕು. ಈ ರೀತಿಯಾಗಿ ಮಾಡುವುದರಿಂದ ಸಂಗಾತಿಯಲ್ಲಿ ನಂಬಿಕೆಯ ಕೊರತೆಯನ್ನು ತಪ್ಪಿಸಿ ಜೊತೆಯಾಗಿ, ಸಂತೋಷದಿಂದ ಬಾಳ್ವೆ ಮಾಡಬಹುದು.

ನಂಬಿಕೆ: ಪ್ರೀತಿ ಅಥವಾ ದಾಂಪತ್ಯ ಈ ಯಾವುದೇ ಆರೋಗ್ಯಕರ ಸಂಬಂಧಕ್ಕೆ ನಂಬಿಕೆಯೇ ಅಡಿಪಾಯ. ಸಂಗಾತಿಗಳು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಬೇಕು. ಅವರ ಆಲೋಚನೆಗಳು, ಭಾವನೆಗಳು ಮತ್ತು ಕಾರ್ಯಗಳ ಬಗ್ಗೆ ಪರಸ್ಪರ ಮುಕ್ತವಾಗಿ ಚರ್ಚಿಸಬೇಕು. ಮತ್ತು ತಮ್ಮ ತಪ್ಪುಗಳನ್ನು ಚರ್ಚೆ ಮಾಡದೇ ಒಪ್ಪಿಕೊಳ್ಳಬೇಕು. ಮುಖ್ಯವಾಗಿ ಸಂಬಂಧದಲ್ಲಿ ಸಂಗಾತಿಗಳ ನಡುವೆ ಅಪನಂಬಿಕೆಯಂತೂ ಬರಲೇಬಾರದು. ಈ ರೀತಿಯ ಸಂಗತಿಗಳು ಸಂಭವಿಸಿದರೆ ಮಾತುಕತೆಯ ಮೂಲಕ ಅವುಗಳನ್ನು ಆಗಾಲೇ ಪರಿಹರಿಸಿಕೊಂಡು ಮುನ್ನಡೆಯುವುದು ಉತ್ತಮ.

ಇದನ್ನೂ ಓದಿ: Relationships: ನಿಮ್ಮ ಸಂಗಾತಿಗಳು ಯಾಕೆ ಮೋಸ ಮಾಡುತ್ತಾರೆ ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು?

ಸಮಯ ನಿರ್ವಹಣೆ: ಕೆಲಸ, ಕುಟುಂಬ ಹಾಗೂ ಇತರ ಜವಬ್ದಾರಿಗಳನ್ನು ಸಮತೋಲನಗೊಳಿಸುವುದು ದಂಪತಿಗಳಿಗೆ ಸವಾಲಾಗಿರಬಹುದು. ಪ್ರೀತಿಯನ್ನು ಉಳಿಸಿಕೊಳ್ಳಲು ಸಂಗಾತಿಗಳು ಒಬ್ಬರಿಗೊಬ್ಬರು ಸಮಯ ನೀಡುವ ಮೂಲಕ ತಮ್ಮ ಸಂಬಂಧಕ್ಕೂ ಆದ್ಯತೆಯನ್ನು ನೀಡಬೇಕು. ಕೆಲಸಕ್ಕೆ ಜೊತೆಯಾಗಿ ರಜೆ ತೆಗೆದುಕೊಳ್ಳುವ ಮೂಲಕವೋ ಅಥವಾ ರಜಾದಿನಗಳಲ್ಲಿ ಒಟ್ಟಿಗೆ ಎಲ್ಲಾದರೂ ಹೋಗಿ ಸಮಯವನ್ನು ಕಳೆಯುವ ಮೂಲಕವೋ ಪರಸ್ಪರ ಪ್ರೀತಿಯ ಮಾತುಗಳನ್ನಾಡುತ್ತಾ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

ಗೌರವ: ಸಂಬಂಧದಲ್ಲಿ ಸಂಗಾತಿಗಳು ಪರಸ್ಪರ ಗೌರವವನ್ನು ಕೊಡುವುದು ತುಂಬಾ ಮುಖ್ಯವಾಗಿರುತ್ತದೆ. ಸಂಬಂಧದಲ್ಲಿ ಇಬ್ಬರೂ ಸಮಾನರು. ನಾನು ಮೇಲು, ನೀನು ಕೀಳು ಎನ್ನುವ ಅಹಂ ಮಾತುಗಳನ್ನು ಯಾವತ್ತೂ ಆಡದೆ ಒಬ್ಬರಿಗೊಬ್ಬರು ಗೌರವವನ್ನು ಕೊಡುವುದು ಮುಖ್ಯವಾಗಿರುತ್ತದೆ.

ಪ್ರೀತಿಯು ನಮಗೆ ಸಂತೋಷವನ್ನು ಕೊಡಬಲ್ಲ ಅದ್ಭುತವಾದ ಭಾವನೆಯಾಗಿದೆ. ಆದರೆ ಜೀವನಪರ್ಯಂತ ಸಂಬಂಧವೂ ಪ್ರೀತಿಯಿಂದ ತುಂಬಿರಲು ಪರಸ್ಪರ ಒಬ್ಬರಿಗೊಬ್ಬರು ಸಮಯವನ್ನು ಮೀಸಲಿಟ್ಟು, ಕಷ್ಟಸುಖ, ಪ್ರೀತಿಯ ಮಾತುಗಳನ್ನಾಡುತ್ತಾ ಒಬ್ಬರಿಗೊಬ್ಬರು ಸಮಯವನ್ನು ಕೊಡಬೇಕು. ಮತ್ತು ಸಂಬಂಧದಲ್ಲಿ ಯಾವುದೇ ಅಪನಂಬಿಕೆಯನ್ನು ಇಟ್ಟುಕೊಳ್ಳದೆ ಜವಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು.

Published On - 4:27 pm, Sat, 25 March 23

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್