AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra: ಮಹಾರಾಷ್ಟ್ರದ ರೈತನಿಗೆ ಜೀವಾವಧಿ ಶಿಕ್ಷೆ, 9,000 ರೂ. ದಂಡ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನ್ಯಾಯಾಲಯವೊಂದು ಮಹಿಳೆ ಮತ್ತು ಆಕೆಯ ಮಗನನ್ನು ಕೊಂದು ಆಕೆಯ ಸೊಸೆಯನ್ನು ಗಂಭೀರವಾಗಿ ಗಾಯಗೊಳಿಸಿದ ಆರೋಪದ ಮೇಲೆ 33 ವರ್ಷದ ರೈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Maharashtra: ಮಹಾರಾಷ್ಟ್ರದ ರೈತನಿಗೆ ಜೀವಾವಧಿ ಶಿಕ್ಷೆ, 9,000 ರೂ. ದಂಡ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Mar 25, 2023 | 3:50 PM

Share

ಪಾಲ್ಘರ್: ಮಹಾರಾಷ್ಟ್ರ(Maharashtra) ಪಾಲ್ಘರ್ ಜಿಲ್ಲೆಯ ನ್ಯಾಯಾಲಯವೊಂದು ಮಹಿಳೆ ಮತ್ತು ಆಕೆಯ ಮಗನನ್ನು ಕೊಂದು ಆಕೆಯ ಸೊಸೆಯನ್ನು ಗಂಭೀರವಾಗಿ ಗಾಯಗೊಳಿಸಿದ ಆರೋಪದ ಮೇಲೆ 33 ವರ್ಷದ ರೈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಾ.ಎಂ.ಎಸ್.ದೇಶಪಾಂಡೆ ಶುಕ್ರವಾರ ತೀರ್ಪು ಪ್ರಕಟಿಸುವಾಗ ಶರದ್ ದೇವು ಕಟೀಲ ಅವರಿಗೆ 9,000 ರೂ. ದಂಡವನ್ನು ವಿಧಿಸಿ ಜೀವಾವಧಿ ಶಿಕ್ಷೆಯನ್ನು ಆದೇಶವನ್ನು ನೀಡಿದೆ. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಬಿ.ಸಾವಂತ್ ಅವರ ಪ್ರಕಾರ, ಅಪರಾಧಿಯು ಜಿಲ್ಲೆಯ ಫರ್ಲೆಪಾಡಾ, ಮ್ಯಾನರ್ ನಿವಾಸಿ. ಸಾವನ್ನಪ್ಪಿರುವವರು ಕೂಡ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದರು, ಜೊತೆಗೆ ಇವರು ಸಂಬಂಧಿಕರು ಕೂಡ ಆಗಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕೊಲೆಯಾದ ವ್ಯಕ್ತಿಗಳಿಗೂ ಈ ರೈತನಿಗೂ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಕೊಲೆಯಾದವರು ಕುಟುಂಬದವರು ರೈತ ಕಟೀಲ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು ಎಂದು ಸಾವಂತ್ ಹೇಳಿದರು.

ಆಗಸ್ಟ್ 4, 2017 ರಂದು ಬೆಳಿಗ್ಗೆ ಶರದ್ ದೇವು ಕಟೀಲ, ಸಖಾರಾಮ್ ಲಕ್ಷ್ಮಣ ಕಟೇಲ ಮೇಲೆ ಕಚ್ಚೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇದನ್ನು ತಡೆಯಲು ಬಂದ ಅವರ ತಾಯಿ ಲಕ್ಷ್ಮಿ ಮತ್ತು ಪತ್ನಿ ಸುಚಿತಾ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಸಖಾರಾಮ್ ಮತ್ತು ಲಕ್ಷ್ಮಿ ಮೃತಪಟ್ಟರೆ, ಸುಚಿತಾ ತೀವ್ರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:H3N2 Death in Maharashtra: ಮಹಾರಾಷ್ಟ್ರದಲ್ಲಿ ತೀವ್ರ ಜ್ವರದಿಂದ ಎಂಬಿಬಿಎಸ್​ ವಿದ್ಯಾರ್ಥಿ ಸಾವು, ಹೆಚ್​3ಎನ್​2 ವೈರಸ್ ಶಂಕೆ

ಕಟೆಲಾ ಬಡ ರೈತ, ಇತನಿಗೆ ಪುಟ್ಟ ಮಕ್ಕಳಿದ್ದಾರೆ ಎಂಬ ಕಾರಣಕ್ಕಾಗಿ ಪ್ರತಿವಾದವು ವಿನಯಶೀಲತೆಯನ್ನು ಕೋರಿತು, ಆದರೆ ಪ್ರಾಸಿಕ್ಯೂಷನ್ ಮರಣದಂಡನೆಯನ್ನು ಕೋರಿದರು. ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಕಟೆಲಾಗೆ ಜೀವಾವಧಿ ಶಿಕ್ಷೆ ವಿಧಿಸಿತು, ಪ್ರಕರಣವು ಅಪರೂಪದ ವರ್ಗಕ್ಕೆ ಸೇರುವುದಿಲ್ಲ ಎಂದು ಹೇಳಿದರು. ದಂಡದ ಮೇಲೆ ಸ್ವಲ್ಪ ಮೃದುತ್ವವನ್ನು ತೋರಿಸಬಹುದು ಅದಕ್ಕಾಗಿ ದಂಡವನ್ನು 9,000 ರೂಗಳಿಗೆ ಸೀಮಿತಗೊಳಿಸಬಹುದು ಎಂದು ಅದು ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.

Published On - 3:50 pm, Sat, 25 March 23