AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಕಚೇರಿಯ ನಕಲಿ ಅಧಿಕಾರಿಗಳ ತಂಡದಲ್ಲಿ ಪುತ್ರ ಭಾಗಿ, ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿ ರಾಜೀನಾಮೆ

ಪಿಎಂಒ ಹಿರಿಯ ಅಧಿಕಾರಿಯಾಗಿ ಪೋಸ್ ನೀಡುತ್ತಾ ನಾಲ್ಕು ತಿಂಗಳ ಕಾಲ ಅಧಿಕೃತ ಪ್ರೋಟೋಕಾಲ್ ಅನ್ನು ಆನಂದಿಸಿದ ನಂತರ ಈ ತಿಂಗಳ ಆರಂಭದಲ್ಲಿ ಕಿರಣ್ ಬಹಿ ಪಟೇಲ್ ಅವರನ್ನು ಬಂಧಿಸಲಾಯಿತು. ಆದರೆ, ಅಮಿತ್ ಮತ್ತು ಜೈ ಸಿತಾಪರಾನ್ನು ಪೊಲೀಸರು ಬಂಧಮುಕ್ತರಾಗಿಸಿದ್ದಾರೆ.

ಪ್ರಧಾನಿ ಕಚೇರಿಯ ನಕಲಿ ಅಧಿಕಾರಿಗಳ ತಂಡದಲ್ಲಿ ಪುತ್ರ ಭಾಗಿ, ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿ ರಾಜೀನಾಮೆ
ಕಿರಣ್ ಭಾಯ್ ಪಟೇಲ್
ರಶ್ಮಿ ಕಲ್ಲಕಟ್ಟ
|

Updated on: Mar 25, 2023 | 2:35 PM

Share

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir) ಆಡಳಿತ ಮತ್ತು Z-ಪ್ಲಸ್ ಭದ್ರತಾ ವ್ಯವಸ್ಥೆ, ಪಂಚತಾರಾ ಹೋಟೆಲ್‌ನಲ್ಲಿ ಅಧಿಕೃತ ವಸತಿ ಮತ್ತು ಇನ್ನೂ ಹೆಚ್ಚಿನದನ್ನು ವಂಚಿಸಿದ ‘ಪ್ರಧಾನಿ ಕಚೇರಿಯ (PMO) ನಕಲಿ ‘ಅಧಿಕೃತ’ ತಂಡದಲ್ಲಿ ತಮ್ಮ ಪುತ್ರನ ಭಾಗವಾಗಿದ್ದ ಎಂಬ ಭಾರೀ ವಿವಾದದ ನಂತರ ಗುಜರಾತ್ ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿ ಹಿತೇಶ್ ಪಾಂಡ್ಯ (Hitesh Pandya) ರಾಜೀನಾಮೆ ನೀಡಿದ್ದಾರೆ. ಪಾಂಡ್ಯ ಅವರ ಪುತ್ರ ಅಮಿತ್ ಹಿತೇಶ್ ಪಾಂಡ್ಯ ಕಿರಣ್ ಭಾಯ್ ಪಟೇಲ್ ನೇತೃತ್ವದ ನಕಲಿ ‘ಅಧಿಕೃತ ತಂಡ’ದ ಭಾಗವಾಗಿದ್ದರು. 2001 ರಿಂದ ಗುಜರಾತ್ ಮುಖ್ಯಮಂತ್ರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಆಗಿ ಸೇವೆ ಸಲ್ಲಿಸುತ್ತಿರುವ ಪಾಂಡ್ಯ ಅವರು ನಿನ್ನೆ ಸಂಜೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ತನ್ನ ಮಗ ನಿರಪರಾಧಿ ಆಗಿದ್ದರೂ, ಪ್ರಧಾನ ಮಂತ್ರಿ ಕಚೇರಿ ಮತ್ತು ಗುಜರಾತ್ ಮುಖ್ಯಮಂತ್ರಿ ಕಚೇರಿಯ ಪ್ರತಿಷ್ಠೆಗೆ ಕಳಂಕ ತರಲು ನಾನು ಬಯಸುವುದಿಲ್ಲ ಎಂದು ಪಾಂಡ್ಯ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಗುಜರಾತ್ ಬಿಜೆಪಿ ಕೂಡ ಅಮಿತ್ ಪಾಂಡ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ ಎಂದು ವರದಿಯಾಗಿದೆ. ಅವರು ಗುಜರಾತ್‌ನ ಉತ್ತರ ವಲಯದ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಉಸ್ತುವಾರಿ ವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ನಕಲಿ ಪಿಎಂಒ ತಂಡ ಪ್ರಕರಣದಲ್ಲಿ ಅಮಿತ್ ಪಾಂಡ್ಯ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ. ಅಮಿತ್ ಮತ್ತು ಅವರ ಸಹವರ್ತಿ ಗುಜರಾತಿ ಸಹಚರ ಜೈ ಸಿತಾಪರಾ ಅವರನ್ನು ಪ್ರಕರಣದಲ್ಲಿ ಸಾಕ್ಷಿಗಳನ್ನಾಗಿ ಮಾಡಲಾಗಿದೆ.

ಪಿಎಂಒ ಹಿರಿಯ ಅಧಿಕಾರಿಯಾಗಿ ಪೋಸ್ ನೀಡುತ್ತಾ ನಾಲ್ಕು ತಿಂಗಳ ಕಾಲ ಅಧಿಕೃತ ಪ್ರೋಟೋಕಾಲ್ ಅನ್ನು ಆನಂದಿಸಿದ ನಂತರ ಈ ತಿಂಗಳ ಆರಂಭದಲ್ಲಿ ಕಿರಣ್ ಬಹಿ ಪಟೇಲ್ ಅವರನ್ನು ಬಂಧಿಸಲಾಯಿತು. ಆದರೆ, ಅಮಿತ್ ಮತ್ತು ಜೈ ಸಿತಾಪರಾನ್ನು ಪೊಲೀಸರು ಬಂಧಮುಕ್ತರಾಗಿಸಿದ್ದಾರೆ.

ಕಳೆದ ವಾರ ಅವರನ್ನು ಮತ್ತೆ ವಿಚಾರಣೆಗೆ ಕರೆಯಲಾಗಿತ್ತು. ಇಬ್ಬರೂ ಕಳ್ಳರ ಬಲೆಗೆ ಬಿದ್ದಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಸೇರಿದಂತೆ ಹಲವು ಸ್ಥಳಗಳಿಗೆ ಕಳ್ಳರು ಭೇಟಿ ನೀಡಿದ್ದರು. ಈತ ಕಳ್ಳ ಎಂದು ಪೊಲೀಸರು ಎಚ್ಚರಿಸುವ ಮುನ್ನವೇ ತಂಡವು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಇದಕ್ಕೂ ಮೊದಲು, ಪಾಂಡ್ಯ ಅವರು ತಮ್ಮ ಮಗ ನಿರಪರಾಧಿ, ಮತ್ತು ಅಂತಹ ಚಟುವಟಿಕೆಯಲ್ಲಿ ಎಂದಿಗೂ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: LPG Subsidy: 2023-24ನೇ ಸಾಲಿಗೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ವಿಸ್ತರಣೆ

ನಾನು ನನ್ನ ಮಗನನ್ನು ನಂಬುತ್ತೇನೆ. ಅವನು ಎಂದಿಗೂ ಅಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಂಡ್ಯ ಹೇಳಿದ್ದಾರೆ.ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಾರ್ಯತಂತ್ರ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿ ನಿರ್ದೇಶಕರಂತೆ ನಟಿಸುತ್ತಿದ್ದ ಪಟೇಲ್ ಅವರನ್ನು ಮಾರ್ಚ್ 2 ರಂದು ಬಂಧಿಸಲಾಯಿತು.ಆದರೆ ಆತನ ಬಂಧನವನ್ನು ಪೊಲೀಸರು ಎರಡು ವಾರಗಳ ಕಾಲ ಗೌಪ್ಯವಾಗಿಟ್ಟಿದ್ದರು. ಮಾರ್ಚ್ 15 ರಂದು ಮ್ಯಾಜಿಸ್ಟ್ರೇಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರವೇ ‘ಹೈ ಪ್ರೊಫೈಲ್’ ಬಂಧನದ ವಿವರಗಳು ಹೊರಬಂದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ