ಕೆಟ್ಟು ಹೋದ ಸಾರಿಗೆ ಬಸ್ ವೈಪರ್: ಮಳೆಯಲ್ಲಿ ಬಸ್ ಚಲಾಯಿಸಲು ಪರದಾಡಿದ ಚಾಲಕ
ಹಾಸನ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗಗಳಲ್ಲಿ ಮಳೆಯಾಗಿದ್ದು, ಬೇಸಿಗೆ ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇನ್ನು ಈ ವರ್ಷದ ಮೊದಲ ಮಳೆಗೆ ಜನರು ಸಹ ಫುಲ್ ಖುಷ್ ಆಗಿದ್ದಾರೆ. ಮತ್ತೊಂದೆಡೆ ಮಳೆ ನಡುವೆ ಸಾರಿಗೆ ಬಸ್‌ನಲ್ಲಿ ವೈಪರ್ ಇಲ್ಲದೆ ಚಾಲಕ ಪರದಾಡಿರುವ ಘಟನೆ ನಡೆದಿದೆ.
ಹಾಸನ, (ಮಾರ್ಚ್ 12): ಹಾಸನದಲ್ಲಿಂದು ಸಂಜೆ ಭಾರೀ ಮಳೆಯಾಗಿದೆ. ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗದಲ್ಲಿ ಬಿರುಗಾಳಿ ಸಮೇತ ಮಳೆಯಾಗಿದೆ. ವರ್ಷದ ಮಳೆಗೆ ಜನರು ಫುಲ್ ಖುಷ್ ಆಗಿದ್ದರೆ, ಇನ್ನೊಂದೆಡೆ ಸಾರಿಗೆ ಬಸ್ ಚಾಲಕ ಡ್ರೈವಿಂಗ್ ಮಾಡಲು ಪರದಾಡಿರುವ ಘಟನೆ ನಡೆದಿದೆ. ಹಾಸನದಿಂದ ಬೆಂಗಳೂರಿಗೆ ತೆರಳುತ್ತಿರುವ ಸಾರಿಗೆ ಬಸ್ನ ವೈಪರ್ ಇಲ್ಲದೇ ಚಾಲಕ ಮಳೆಯಲ್ಲಿ ಡ್ರೈವ್ ಮಾಡಲು ಪರದಾಡಿದ್ದಾರೆ.
KA-18-F-0913 ನಂಬರ್‌ನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವೈಪರ್ ಆನ್ ಆಗದಿದ್ದರಿಂದ ಡ್ರೈವರ್ ಮಳೆಯಲ್ಲಿಯೇ ಕಷ್ಟಪಟ್ಟು ಚಲಾಯಿಸಿದ್ದಾರೆ. ರಸ್ತೆ ಕಾಣದಂತೆ ಮಳೆ ರಭಸವಾಗಿ ಬರುತ್ತಿದೆ. ಇದರಿಂದಬಸ್ನೊಳಗಿದ್ದ ಪ್ರಯಾಣಿಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಳೆಯಲ್ಲಿ ವೈಪರ್ ಇಲ್ಲದೇ ಬಸ್ ಚಲಾಯಿಸುವ ವೇಳೆ ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಹೊಣೆ. ನಮ್ಮ ಟಿಕೆಟ್ ಹಣ ವಾಪಾಸ್ ಕೊಡಿ ಎಂದು ಪ್ರಯಾಣಿಕರು ಗಲಾಟೆ ಮಾಡಿದ್ದಾರೆ.
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
