AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟಿಯಲ್ಲಿ ಟೈಟ್​ ಆಗಿ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಬೆಂಗಳೂರಿನ ಉದ್ಯೋಗಿ, ಎಚ್ಚರಿಕೆಯ ಸಂದೇಶ ನೀಡಿದ ಟ್ವಿಟರ್ ಬಳಕೆದಾರ

ಪಾರ್ಟಿ ಮಾಡಲು ಹೋಗುವ ಟೀಂನವರಲ್ಲಿ ಯಾವಾಗಲೂ ಕುಡಿಯದಿರುವ ಒಬ್ಬರನ್ನು ಮೇಲ್ವಿಚಾರಕರನ್ನಾಗಿ ಕಳಿಸಬೇಕು, ಆಗ ಅವರು ತಮ್ಮ ಟೀಂ ಸದಸ್ಯರ ಮೇಲೆ ಕಣ್ಣಿಡುತ್ತಾರೆ. ಅವರ ಸುರಕ್ಷತೆ ನೋಡಿಕೊಳ್ಳುತ್ತಾರೆ.

ಪಾರ್ಟಿಯಲ್ಲಿ ಟೈಟ್​ ಆಗಿ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಬೆಂಗಳೂರಿನ ಉದ್ಯೋಗಿ, ಎಚ್ಚರಿಕೆಯ ಸಂದೇಶ ನೀಡಿದ ಟ್ವಿಟರ್ ಬಳಕೆದಾರ
ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಉದ್ಯೋಗಿ
TV9 Web
| Updated By: ಆಯೇಷಾ ಬಾನು|

Updated on:Mar 20, 2023 | 11:39 AM

Share

ವಾರ ಪೂರ್ತಿ ಕಷ್ಟು ಪಟ್ಟು ಕೆಲಸ ಮಾಡುವ ಮಂದಿ ವಾರಾಂತ್ಯ ಬಂತು ಅಂದ್ರೆ ಸಾಕು ಪಬ್ಬು-ಬಾರುಗಳಲ್ಲಿ ಕಂಠ ಪೂರ್ತಿ ಕುಡಿದು ಎಂಜಾಯ್ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಬೆಂಗಳೂರಿನ ಸ್ಟಾರ್ಟ್‌ಅಪ್ ಕಂಪನಿ ಉದ್ಯೋಗಿ ಕುಡಿದು ಫುಲ್ ಟೈಟ್ ಆಗಿದ್ದು ಉಸಿರಾಟದ ಸಮಸ್ಯೆ ಎದುರಾಗಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಈ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು “ working hard, partying harder” ಎನ್ನುವ ಉದ್ಯೋಗಿಗಳಿಗೆ ಟ್ವೀಟ್ ಮೂಲಕ ಸಂದೇಶವೊಂದನ್ನು ನೀಡಿದ್ದಾರೆ.

ಕ್ಯಾಲೆಬ್ ಫ್ರೈಸೆನ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟರ್​ನಲ್ಲಿ ಈ ಘಟನೆ ಸಂಬಂಧ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ ಸ್ಟಾರ್ಟ್‌ಅಪ್ ಕಂಪನಿ ಉದ್ಯೋಗಿ ಉಸಿರಾಟದ ಸಮಸ್ಯೆಯಿಂದ ಒಳಲುತ್ತಿದ್ದು ಅವರ ಸಹಾಯಕ್ಕೆ ಯಾರೂ ಇರಲಿಲ್ಲ. ಅವರ ಸ್ನೇಹಿತರು, ಟೀಂ ಪಾರ್ಟಿಯಲ್ಲಿ ಮುಳುಗಿದ್ದರು. ಕಷ್ಟಪಟ್ಟು ಕೆಲಸ ಮಾಡುವುದು, ಹೆಚ್ಚು ಪಾರ್ಟಿ ಮಾಡುವುದು (working hard, partying harder) ಎಂದು ನಂಬುವ ಸ್ಟಾರ್ಟ್‌ಅಪ್ ಕಂಒನಿ ಸಂಸ್ಥಾಪಕರಿಗೆ ಇದೊಂದು ಎಚ್ಚರಿಕೆಯ ಸಂದೇಶ ಎಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಹಾಗೂ ಸ್ಟಾರ್ಟ್‌ಅಪ್ ಉದ್ಯೋಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದನ್ನು ಗಮನಿಸಿದ ತಕ್ಷಣ ನಾನು ಆತನನ್ನು ಸೇವ್ ಮಾಡಲು ಓಡಿದೆ.

ಇದನ್ನೂ ಓದಿ: ಬೆಂಗಳೂರಿನ ಮೆಕ್​​ಡೊನಾಲ್ಡ್ಸ್​​ನಿಂದ ಹತ್ತು ಸೆಕೆಂಡುಗಳಲ್ಲಿ ಫುಡ್​ ಡೆಲಿವರಿ ಪಡೆದ ಕೆನಡಾದ ವ್ಯಕ್ತಿ

ಆದ್ರೆ “ಬ್ರೋ, ಎಂತಹ ಪಾರ್ಟಿ ಪ್ರಾಣಿ ಇವನು” ಎಂದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಡ್ಯಾನ್ಸ್ ಫ್ಲೋರ್‌ನಿಂದ ದೂರವಿರುವ ಏಕಾಂತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಇದನ್ನು ನೋಡಿ ನಾನು ನನ್ನ ಟೇಬಲ್‌ಗೆ ಮೆಟ್ಟಿಲುಗಳ ಮೂಲಕ ಹಿಂತಿರುಗಿದೆ. ಪರಿಸ್ಥಿತಿಯನ್ನು ವಿವರಿಸಲು ಆ ವ್ಯಕ್ತಿಯ ತಂಡದ ಒಬ್ಬ ಸದಸ್ಯನೂ ನನಗೆ ಸಿಗಲಿಲ್ಲ. ಈ ಘಟನೆಯ ಸಾರಾಂಶ: ಪಾರ್ಟಿ ಮಾಡಲು ಹೋಗುವ ಟೀಂನವರಲ್ಲಿ ಯಾವಾಗಲೂ ಕುಡಿಯದಿರುವ ಒಬ್ಬರನ್ನು ಮೇಲ್ವಿಚಾರಕರನ್ನಾಗಿ ಕಳಿಸಬೇಕು, ಆಗ ಅವರು ತಮ್ಮ ಟೀಂ ಸದಸ್ಯರ ಮೇಲೆ ಕಣ್ಣಿಡುತ್ತಾರೆ. ಅವರ ಸುರಕ್ಷತೆ ನೋಡಿಕೊಳ್ಳುತ್ತಾರೆ ಎಂದು ಕ್ಯಾಲೆಬ್ ಫ್ರೈಸೆನ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:27 am, Mon, 20 March 23