AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಮುಷ್ಕರ, ಪ್ರತಿಭಟನಾ ರ್ಯಾಲಿ ಮೂಲಕ ಸಿಎಂ ನಿವಾಸಕ್ಕೆ ಮುತ್ತಿಗೆ: ಆಟೋ ಯೂನಿಯನ್​ ಅಧ್ಯಕ್ಷ

ಅಕ್ರಮ ರ್ಯಾಪಿಡೊ ಓಡಾಟವನ್ನ ಸರ್ಕಾರ ರದ್ದು ಮಾಡಬೇಕು. ಇದೀಗ 11 ಗಂಟೆಗೆ ಬೃಹತ್ ಹೋರಾಟ ಆರಂಭ ಆಗಲಿದೆ. ಬಳಿಕ ಆಟೋ ಸಂಚಾರ ಸಂಪೂರ್ಣ ಸ್ಥಬ್ದವಾಗುತ್ತದೆ ಎಂದು ಆದರ್ಶ್​ ಆಟೋ ಯೂನಿಯನ್​ ಅಧ್ಯಕ್ಷ ಮಂಜುನಾಥ್​ ಹೇಳಿದರು.

ಕಿರಣ್ ಹನುಮಂತ್​ ಮಾದಾರ್
|

Updated on:Mar 20, 2023 | 10:46 AM

Share

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಇಂದು(ಮಾ.20) ಆಟೋ ಚಾಲಕರ‌ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈಗಾಗಲೇ ಬೆಂಗಳೂರು ನಗರದಲ್ಲಿ ಶೇ.80ರಷ್ಟು ಆಟೋ ಸಂಚಾರ ಸ್ಥಗಿತ ಆಗಿದೆ. ಈ ವೇಳೆ ಮಾತನಾಡಿದ ಆದರ್ಶ್​ ಆಟೋ ಯೂನಿಯನ್​ ಅಧ್ಯಕ್ಷ ಮಂಜುನಾಥ್​​ ಅಕ್ರಮ ರ್ಯಾಪಿಡೊ ಓಡಾಟವನ್ನ ಸರ್ಕಾರ ರದ್ದು ಮಾಡಬೇಕು. ಇದೀಗ 11 ಗಂಟೆಗೆ ಬೃಹತ್ ಹೋರಾಟ ಆರಂಭ ಆಗಲಿದೆ. ಬಳಿಕ ಪ್ರತಿಭಟನೆ ಮೂಲಕ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಆಟೋ ಸಂಚಾರ ಸಂಪೂರ್ಣ ಸ್ಥಬ್ದವಾಗುತ್ತದೆ. ಇನ್ನು ‘ಮುಷ್ಕರದ ಬಗ್ಗೆ ಕೆಲವು ಆಟೋ ಚಾಲಕರಿಗೆ ಮಾಹಿತಿ ಇರಲಿಲ್ಲ. ಪರೀಕ್ಷೆ, ಆಸ್ಪತ್ರೆಗೆ ಹೋಗುವವರಿಗೆ ಕೆಲವರು ಸೇವೆ ನೀಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ಇದೇ ವೇಳೆ ಮುಷ್ಕರ ನೆಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪಕ್ಕೆ ಉತ್ತರಿಸಿದ ಅವರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವವರು ನಕಲಿ ಆಟೋ ಚಾಲಕರು. ಇತರೆ ಆಟೋ ಚಾಲಕರಿಗೆ ಮಸಿ ಬಳಿಯುತ್ತಿದ್ದಾರೆ. ಹಬ್ಬ ಇರುವುದರಿಂದ ಕೆಲ ಚಾಲಕರು ಆಟೋ ಓಡಿಸುತ್ತಿದ್ದಾರೆ. ಕೊರೊನಾದಿಂದ ಆಟೋದವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಮಧ್ಯೆ ರ್ಯಾಪಿಡೊದಿಂದ‌ ಮತ್ತಷ್ಟು ಸಂಕಷ್ಟ ಎದುರಾಗಿದೆ. ಪ್ರತಿಭಟನಾ ಱಲಿ ಮೂಲಕ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಹಬ್ಬದ ಬಳಿಕ ಮುಷ್ಕರ ಮುಂದುವರಿಸುವ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:42 am, Mon, 20 March 23