AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Food Poisoning: ರಾತ್ರಿ ಮಿಕ್ಕಿರುವ ಅನ್ನವನ್ನು ಬೆಳಗ್ಗೆ ತಿನ್ನುವುದರಿಂದ ಯಾವ್ಯಾವ ಸಮಸ್ಯೆಯುಂಟಾಗಬಹುದು ಇಲ್ಲಿದೆ ಮಾಹಿತಿ

ರಾತ್ರಿಯ ಅನ್ನ ಉಳಿದಿದೆ ಯಾಕೆ ವೇಸ್ಟ್​ ಮಾಡೋದು ಅಂತಾ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದೀರಾ ಹಾಗಾದರೆ ಬಿಟ್ಟುಬಿಡಿ.

Food Poisoning: ರಾತ್ರಿ ಮಿಕ್ಕಿರುವ ಅನ್ನವನ್ನು ಬೆಳಗ್ಗೆ ತಿನ್ನುವುದರಿಂದ ಯಾವ್ಯಾವ ಸಮಸ್ಯೆಯುಂಟಾಗಬಹುದು ಇಲ್ಲಿದೆ ಮಾಹಿತಿ
ಅನ್ನ
ನಯನಾ ರಾಜೀವ್
|

Updated on: Apr 29, 2023 | 9:00 AM

Share

ರಾತ್ರಿಯ ಅನ್ನ ಉಳಿದಿದೆ ಯಾಕೆ ವೇಸ್ಟ್​ ಮಾಡೋದು ಅಂತಾ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದೀರಾ ಹಾಗಾದರೆ ಬಿಟ್ಟುಬಿಡಿ. ಹಾಗೆಯೇ ಇಂದು ಮಾಡಿದ ಅಡುಗೆಯನ್ನು ಎರಡು ದಿನಗಳ ಕಾಲ ಫ್ರಿಡ್ಜ್​ನಲ್ಲಿ ಇರಿಸಿ ತಿನ್ನುವುದು ಕೂಡ ಆರೋಗ್ಯಕ್ಕೆ ಅಪಾಯಕಾರಿಯೇ. ಬೇಯಿಸದ ಅಥವಾ ಹಳಸಿದ ಆಹಾರವನ್ನು ಸೇವಿಸಿದ ನಂತರವೂ ಫುಡ್​ಪಾಯ್ಸನ್(Food Poison) ಆಗಬಹುದು.

ಇದರ ಹೊರತಾಗಿ, ಬೇಯಿಸಿದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡದಿರುವುದು, ಬೇಸಿಗೆಯಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಕೋಣೆಯ ಉಷ್ಣಾಂಶದಲ್ಲಿ ಆಹಾರವನ್ನು ಬಿಡುವುದು ಅಥವಾ ಉಳಿದ ಆಹಾರವನ್ನು ಸರಿಯಾಗಿ ಬಿಸಿ ಮಾಡದಿರುವುದು ಇತ್ಯಾದಿ ಹಲವು ಕಾರಣಗಳಿರಬಹುದು.

ಫುಡ್​ಪಾಯ್ಸನ್ ಲಕ್ಷಣ ಕಿಬ್ಬೊಟ್ಟೆಯ ನೋವು, ಸೆಳೆತ ಅಥವಾ ಉಬ್ಬುವುದು ವಾಕರಿಕೆ ವಾಂತಿ ಅತಿಸಾರ ಮನೆಯಲ್ಲಿ ಬೇಯಿಸಿದ ತಾಜಾ ಆಹಾರವನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆಹಾರವನ್ನು ಪದೇ ಪದೇ ಬಿಸಿ ಮಾಡಿ ತಿನ್ನುವುದರಿಂದಲೂ ಫುಡ್​ ಪಾಯ್ಸನ್ ಆಗಬಹುದು.

ಮತ್ತಷ್ಟು ಓದಿ: Street Food in Summer: ಬೇಸಿಗೆಯಲ್ಲಿ ಬೀದಿಬದಿ ಆಹಾರವನ್ನು ತಿನ್ನದಿರಿ

ಅನ್ನವನ್ನು ಬಿಸಿ ಮಾಡುವುದರಿಂದ ಯಾವುದೇ ಸಮಸ್ಯೆಯುಂಟಾಗುವುದಿಲ್ಲ. ಅಕ್ಕಿಯು ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ಅನುಕೂಲಕರ ಪರಿಸ್ಥಿತಿಗಳಲ್ಲಿ ಪಾಯ್ಸನ್ ಆಗುತ್ತದೆ.

ಅನ್ನವನ್ನು ಸರಿಯಾಗಿ ಬೇಯಿಸಿ ಮತ್ತು ತಾಜಾವಾಗಿ ಬಡಿಸಿ, ಆದರೆ ನಿಮಗೆ ಅದನ್ನು ಸಂಪೂರ್ಣವಾಗಿ ತಿನ್ನಲು ಸಾಧ್ಯವಾಗದಿದ್ದರೆ, ಅದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿ ಮತ್ತು ಉಳಿದ ಅನ್ನವನ್ನು ಕೋಣೆಯ ಉಷ್ಣಾಂಶದಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಬಿಡಬೇಡಿ. ಉಳಿದ ಅನ್ನವನ್ನು ಒಮ್ಮೆ ಮಾತ್ರ ಬಿಸಿ ಮಾಡಿ, ಮತ್ತೆ ಮತ್ತೆ ಅಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More