Water Fasting: ವಾಟರ್​ ಫಾಸ್ಟಿಂಗ್​ನಿಂದ ತೂಕವೇನೋ ಬಹುಬೇಗ ಕಡಿಮೆಯಾಗುತ್ತೆ, ನಂತರ ಈ ಸಮಸ್ಯೆಯೂ ಕಾಡಬಹುದು

ನೀರಿನ ಉಪವಾಸ(Water Fasting) ಅಥವಾ ವಾಟರ್​ ಫಾಸ್ಟಿಂಗ್​ ಬಗ್ಗೆ ಚಿಕಾಗೋ ಇಲಿನಾಯ್ಸ್​ ವಿಶ್ವವಿದ್ಯಾಲಯವು ಸಂಶೋಧನೆ ನಡೆಸಿ ವರದಿ ಸಿದ್ಧಪಡಿಸಿದೆ.

Water Fasting: ವಾಟರ್​ ಫಾಸ್ಟಿಂಗ್​ನಿಂದ ತೂಕವೇನೋ ಬಹುಬೇಗ ಕಡಿಮೆಯಾಗುತ್ತೆ, ನಂತರ ಈ ಸಮಸ್ಯೆಯೂ ಕಾಡಬಹುದು
ನೀರು
Follow us
ನಯನಾ ರಾಜೀವ್
|

Updated on: Jul 04, 2023 | 12:50 PM

ನೀರಿನ ಉಪವಾಸ(Water Fasting) ಅಥವಾ ವಾಟರ್​ ಫಾಸ್ಟಿಂಗ್​ ಬಗ್ಗೆ ಚಿಕಾಗೋ ಇಲಿನಾಯ್ಸ್​ ವಿಶ್ವವಿದ್ಯಾಲಯವು ಸಂಶೋಧನೆ ನಡೆಸಿ ವರದಿ ಸಿದ್ಧಪಡಿಸಿದೆ. ಅದರ ಪ್ರಕಾರ ನೀರಿನ ಉಪವಾಸವು ವೇಗವಾಗಿ ತೂಕವನ್ನು ಕಡಿಮೆ ಮಾಡುತ್ತದೆ. ಆದರೆ ಇದು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿರುವುದಿಲ್ಲ ಎಂಬುದನ್ನು ತಿಳಿಸಿದೆ. ಈ ವಿಶ್ವವಿದ್ಯಾನಿಲಯದ ಸಂಶೋಧಕರು ನೀರಿನ ಉಪವಾಸವು ಕೆಲವು ದಿನಗಳವರೆಗೆ ಪ್ರಯೋಜನಕಾರಿ ಎಂದು ಹೇಳಿದೆ. ಆದರೆ ಸ್ಥೂಲಕಾಯವನ್ನು ಕಡಿಮೆ ಮಾಡಲು ನೀವು ಇದನ್ನು ಮಾಡುತ್ತಿದ್ದರೆ ಅದು ದೀರ್ಘಾವಧಿಗೆ ಒಳ್ಳೆಯದಲ್ಲ.

ಈ ಉಪವಾಸದ ಒಂದು ಒಳ್ಳೆಯ ವಿಷಯವೆಂದರೆ ಇದು ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಣ್ಣ ಕಾಯಿಲೆಗಳನ್ನು ಗುಣಪಡಿಸುತ್ತದೆ. ಅಲ್ಲದೆ, ಸ್ವಲ್ಪ ಮಟ್ಟಿಗೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ವಾಟರ್ ಫಾಸ್ಟಿಂಗ್ ಪರಿಣಾಮಕಾರಿಯಾಗಿದೆ.

ಕ್ಯಾಲೋರಿಗಳನ್ನು ತಗ್ಗಿಸಬಹುದು ವಾರಕ್ಕೊಂದು ದಿನ ನೀರಿನ ಉಪವಾಸ ಮಾಡುವವರಿದ್ದಾರೆ, ಅದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್​ ಮಾಡುತ್ತಾರೆ, ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲ. ನಂತರ ಹೊಟ್ಟೆಯ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಯಾರೂ ಈ ಯಾವುದೇ ಉಪವಾಸಗಳನ್ನು ಐದು ದಿನಗಳಿಗಿಂತ ಹೆಚ್ಚು ಕಾಲ ಮಾಡಬಾರದು ಎಂದು ಸಂಶೋಧನೆ ಹೇಳಿದೆ.

ಮತ್ತಷ್ಟು ಓದಿ: Fasting: ಒಂದು ದಿನ ಉಪವಾಸ ಮಾಡುವುದರಿಂದ ದೇಹದಲ್ಲಿ ಯಾವ ಬದಲಾವಣೆಗಳು ಸಂಭವಿಸುತ್ತವೆ ಇಲ್ಲಿದೆ ಮಾಹಿತಿ

ಉಪವಾಸವು ಸ್ವಲ್ಪ ಸಮಯದವರೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಐದು ದಿನಗಳ ಕಾಲ ಉಪವಾಸ ಮಾಡಿದವರು ಶೇಕಡಾ 4 ರಿಂದ 6 ರಷ್ಟು ತೂಕವನ್ನು ಕಳೆದುಕೊಂಡರು. ಏಳರಿಂದ 10 ದಿನ ಉಪವಾಸ ಮಾಡಿದವರು. ಅವರು ಸುಮಾರು 2 ರಿಂದ 10 ಪ್ರತಿಶತ ತೂಕವನ್ನು ಕಳೆದುಕೊಂಡರು ಮತ್ತು 15 ರಿಂದ 20 ದಿನಗಳವರೆಗೆ ಉಪವಾಸ ಮಾಡುವವರು 7 ರಿಂದ 10 ರಷ್ಟು ತೂಕವನ್ನು ಕಳೆದುಕೊಂಡರು.

ಆದಾಗ್ಯೂ, ಐದು ದಿನಗಳ ನೀರಿನ ಉಪವಾಸದ ಸಮಯದಲ್ಲಿ ತೂಕವನ್ನು ಕಳೆದುಕೊಂಡ ಜನರು ಅದನ್ನು ಮೂರು ತಿಂಗಳೊಳಗೆ ಮರಳಿ ಪಡೆದರು. ಕೆಲವು ಅಧ್ಯಯನಗಳು ಮತ್ತು ಸಂಶೋಧನೆಗಳು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್‌ನೊಂದಿಗೆ ಹೋರಾಡುತ್ತಿರುವವರನ್ನು ಕೂಡ ಹೊಂದಿತ್ತು.

ಉಪವಾಸ ಮಾಡುವವರು ಯಾವುದೇ ದುಷ್ಪರಿಣಾಮಗಳನ್ನು ಹೊಂದಿಲ್ಲ, ಆದರೂ ಅವರನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಯಿತು ಮತ್ತು ಉಪವಾಸದ ಸಮಯದಲ್ಲಿ ಅವರ ಇನ್ಸುಲಿನ್ ಡೋಸ್ ನೀಡಲಾಯಿತು.

ಈ ದೀರ್ಘ ಉಪವಾಸಗಳು ತಲೆನೋವು, ನಿದ್ರಾಹೀನತೆ ಮತ್ತು ಹಸಿವಿನಂತಹ ಅಡ್ಡಪರಿಣಾಮಗಳನ್ನು ಸಹ ಹೊಂದಿವೆ ಎಂದು ಸಂಶೋಧನೆ ತಿಳಿಸಿದೆ. ಈ ಸಂಶೋಧನೆಯು ನೀರಿನ ಉಪವಾಸವು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಆದರೆ ದೀರ್ಘಕಾಲ ಕೆಲಸ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬರುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ನೀರಿನ ಉಪವಾಸದ ಬದಲಿಗೆ, ಇಂಟರ್​ಮಿಟೆಂಟ್ ಹೆಚ್ಚು ಪರಿಣಾಮಕಾರಿಯಾಗಿದೆ ಅದರ ಫಲಿತಾಂಶವು ದೀರ್ಘಕಾಲದವರೆಗೆ ಗೋಚರಿಸುತ್ತದೆ ಎಂದು ಅಧ್ಯಯನ ಹೇಳಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್