ನೀರಿನ ಉಪವಾಸ ಅಂದ್ರೆ ಏನು ಗೊತ್ತಾ? ಅಲ್ಪಾವಧಿಯ ನೀರಿನ ಉಪವಾಸದಿಂದ ಆಗಲಿದೆ ಹಲವಾರು ಪ್ರಯೋಜನಗಳು..

ಇಡೀ ದಿನ ಕೇವಲ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸದಿರುವುದು. ಸಾಮಾನ್ಯವಾಗಿ ಕೇವಲ ನೀರನ್ನೇ ಸೇವಿಸುವ ಮೂಲಕ 24 ರಿಂದ 26 ಗಂಟೆಗಾಲ ಕಾಲ ನಮ್ಮ ದೇಹ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದಕ್ಕೂ ಹೆಚ್ಚಿನ ಅವಧಿಗೆ ಉಪವಾಸ ಮುಂದುವರಿಸಲು ವೈದ್ಯರ ಸಲಹೆ ಅಗತ್ಯವಾಗಿದೆ.

ನೀರಿನ ಉಪವಾಸ ಅಂದ್ರೆ ಏನು ಗೊತ್ತಾ? ಅಲ್ಪಾವಧಿಯ ನೀರಿನ ಉಪವಾಸದಿಂದ ಆಗಲಿದೆ ಹಲವಾರು ಪ್ರಯೋಜನಗಳು..
ನೀರಿನ ಉನೀರು ಕುಡಿಯಿರಿ: ಬೇಸಿಗೆಯಲ್ಲಿ ಬಾಯಾರಿಕೆ ಆಗುತ್ತದೆ. ಈ ಕಾರಣಕ್ಕೆ ನಾವು ಹೆಚ್ಚು ನೀರು ಕುಡಿಯುತ್ತೇವೆ. ಆದರೆ, ಚಳಿಗಾಲದಲ್ಲಿ ನೀರು ಕುಡಿಯುವ ಪ್ರಮಾಣ ಕಡಿಮೆ. ಆದರೆ, ಚಳಿಗಾಲದಲ್ಲಿ ಹೆಚ್ಚೆಚ್ಚು ನೀರು ಕುಡಿಯಲೇ ಬೇಕು ಎನ್ನುವುದು ವೈದ್ಯರ ಸಲಹೆ. ಪವಾಸ
Follow us
ಆಯೇಷಾ ಬಾನು
|

Updated on: Dec 13, 2020 | 7:42 AM

ಸಾಮಾನ್ಯವಾಗಿ ಉಪವಾಸವೆಂದರೆ ಏನನ್ನೂ ತೆಗೆದುಕೊಳ್ಳದೆಯೇ ಕೊಂಚ ಕಾಲ ಹಾಗೆ ಬಿಟ್ಟು ಜೀರ್ಣಾಂಗಗಳಿಗೆ ವಿಶ್ರಾಂತಿ ನೀಡುವ ಕ್ರಿಯೆಯಾಗಿದೆ. ಈ ಮೂಲಕ ಸತತ ಕಾರ್ಯನಿರ್ವಹಿಸುತ್ತಿದ್ದ ಜೀರ್ಣಾಂಗಗಳಿಗೆ ಇತರ ಕೆಲಸಗಳಾದ ಕಲ್ಮಶಗಳನ್ನು ಪರಿಪೂರ್ಣವಾಗಿ ಹೊರಹಾಕಲು ಮತ್ತು ಚಿಕ್ಕ ಪುಟ್ಟ ಗಾಯಗಳನ್ನು ಮಾಗಿಸಿ ಹೊಸ ಪದರಗಳನ್ನು ಹೊಂದಲು ಸಾಧ್ಯವಾಗುತ್ತದೆ.

ಹಾಗಾದ್ರೆ, ನೀರಿನ ಉಪವಾಸ ಅಂದ್ರೆ ಏನು ಗೊತ್ತಾ..? ಇಡೀ ದಿನ ಕೇವಲ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸದಿರುವುದು. ಸಾಮಾನ್ಯವಾಗಿ ಕೇವಲ ನೀರನ್ನೇ ಸೇವಿಸುವ ಮೂಲಕ 24 ರಿಂದ 26 ಗಂಟೆಗಾಲ ಕಾಲ ನಮ್ಮ ದೇಹ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದಕ್ಕೂ ಹೆಚ್ಚಿನ ಅವಧಿಗೆ ಉಪವಾಸ ಮುಂದುವರಿಸಲು ವೈದ್ಯರ ಸಲಹೆ ಅಗತ್ಯವಾಗಿದೆ. ನೀರಿನ ಉಪವಾಸದಿಂದ ಏನು ಉಪಯೋಗ, ಹೇಗೆ ನಿರ್ವಹಿಸುವುದು ಅನ್ನೋದನ್ನು ಇಲ್ಲಿ ಓದಿ ತಿಳಿಯಿರಿ.

ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತೆ: ಉಪವಾಸದಿಂದಾಗಿ ನಮ್ಮ ದೇಹದ ಎಲ್ಲಾ ಜೀವಕೋಶಗಳೂ ಸತ್ತು ಹೊಸ ಜೀವಕೋಶಗಳು ಹುಟ್ಟುತ್ತಲೇ ಇರುತ್ತವೆ. ಹೀಗೆ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಮ್ಮ ಶರೀರ ಪರಿಪೂರ್ಣವಾಗಿ ಹೊಸ ಜೀವಕೋಶಗಳಿಂದಾಗಿರುತ್ತದೆ. ಇದು ಒಟ್ಟು ಐದು ಬಾರಿ ಮಾತ್ರವೇ ಆಗಲು ಸಾಧ್ಯ. ನೀರಿನ ಉಪವಾಸ ಈ ಕ್ರಿಯೆಯನ್ನು ಸುಲಭವಾಗಿಸುತ್ತದೆ. ಒಂದು ವೇಳೆ ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು ಉಪವಾಸ ಅನುಸರಿಸುತ್ತಿದ್ದರೆ ಒಂದು ಅಥವಾ ಎರಡು ದಿನದ ಉಪವಾಸ ಸಾಕು. ಇದನ್ನು ವೈದ್ಯರ ಸಲಹೆ ಮೇರೆಗೆ ನಿರ್ವಹಿಸಬೇಕು. ತೂಕ ಇಳಿಸುವ ನಿಟ್ಟಿನಲ್ಲಿ ಉಪವಾಸ ಆಚರಿಸುವುದಾದರೆ ಇದು ಅಲ್ಪಾವಧಿಯದ್ದಾಗಬೇಕು ಹಾಗೂ ಪ್ರತಿ ಹದಿನೈದು ದಿನಗಳಿಗೊಮ್ಮೆ ಮಾತ್ರವೇ ನಿರ್ವಹಿಸಬೇಕು.

ಒಂದು ವೇಳೆ ನಿಮ್ಮ ವೈದ್ಯರು ಈ ಉಪವಾಸವನ್ನು ಅನುಸರಿಸುವಂತೆ ಸಲಹೆ ನೀಡಿದರೆ ರೋಗ ನಿರೋಧಕ ಶಕ್ತಿ ಕುಂದಿದ್ದು ಇದನ್ನು ಉತ್ತಮಗೊಳಿಸಲು ಬಯಸುವವರಿಗೆ ನಿಮ್ಮ ತೂಕ ಎತ್ತರದ ಅನುಪಾತಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿದ್ದರೆ ನಿಮ್ಮ ದೇಹದ ಕಾರ್ಯವಿಧಾನವನ್ನು ಪರಿಶೀಲಿಸಲು ಉಪವಾಸದ ಕಾರ್ಯಕ್ರಮವನ್ನು ಅನುಸರಿಸುವಂತೆ ಹೇಳಿದರೆ. ಈ ಉಪವಾಸ ಮಕ್ಕಳನ್ನು ಹೊರತುಪಡಿಸಿ ಉಳಿದ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ನಿರ್ವಹಿಸಬಹುದು.

ಒಂದು ವೇಳೆ ನಿಮ್ಮ ವೈದ್ಯರು ನಿಮಗೆ ಅನುಮತಿ ನೀಡದೇ ಇದ್ದರೆ ಒಂದು ವೇಳೆ ನಿಮಗೆ ರಕ್ತದಲ್ಲಿ ಅತಿ ಕಡಿಮೆ ಸಕ್ಕರೆ ಇರುವ ತೊಂದರೆಯಾದ hypoglycemia ಇದ್ದರೆ ಮಧುಮೇಹಿಗಳು ನೀವು ಯಾವುದಾದರೂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಗರ್ಭಿಣಿಯರು ಬಾಣಂತಿಯರು ಮಕ್ಕಳು ಇದನ್ನು ಮಾಡುವ ಹಾಗಿಲ್ಲ.

ಅಲ್ಪಾವಧಿಯ ನೀರಿನ ಉಪವಾಸದಿಂದ ಹಲವಾರು ಪ್ರಯೋಜನಗಳು: ಜೀವಕೋಶಗಳ ಪುನರುಜ್ಜೀವನ. ನಮ್ಮ ದೇಹದ ಹಳೆಯ ಜೀವಕೋಶಗಳು ಸತ್ತು ಹೊಸ ಜೀವಕೋಶಗಳು ಹುಟ್ಟುವ ಕ್ರಿಯೆ ಸತತವಾಗಿ ನಡೆಯುತ್ತಿರುತ್ತದೆ. ಹೀಗೆ ಜೀವಕೋಶ ಪುನರುಜ್ಜೀವನಗೊಳಿಸುವ ಕ್ರಿಯೆಗೆ ಈ ಉಪವಾಸ ತುಂಬಾ ಹೆಲ್ಪ್ ಫುಲ್. ವಿಶೇಷವಾಗಿ ಮೆದುಳು ಮತ್ತು ನರಗಳ ಕ್ಷಮತೆ ಸಾಮಾನ್ಯವಾಗಿ ಅರವತ್ತರ ಬಳಿಕ ಕ್ಷೀಣಿಸತೊಡಗಲು ಇದೇ ಕಾರಣ. ಇದಕ್ಕೆ ಸಂಬಂಧಿಸಿದ ಕೆಲವಾರು ತೊಂದರೆಗಳು ಎದುರಾಗಲು ಈ ಕ್ರಿಯೆ ಸಮರ್ಪಕವಾಗಿ ನಿರ್ವಹಿಸದಿರುವುದೇ ಕಾರಣ. ನೀರಿನ ಉಪವಾಸ ಮಾಡಿದಾಗ, ಮೆದುಳಿನ ಜೀವಕೋಶಗಳು ಪರಿಪೂರ್ಣವಾಗಿ ಹೊಸದಾಗಿ ಹುಟ್ಟುತ್ತವೆ ಎಂದು ಹೇಳಲಾಗಿದೆ. ಆದ್ರೂ ಇದನ್ನು ಮಾಡುವಾಗ ವೈದ್ಯರ ಸಲಹೆ ಪಡೆಯುವುದು ಮುಖ್ಯವಾಗಿರುತ್ತೆ.

ಕೇವಲ ನೀರನ್ನು ಕುಡಿಯುವುದರಿಂದ ದೇಹಕ್ಕೆ ಉಪ್ಪಿನ ಅಂಶ ದಾಖಲಾಗುವುದು ಇಲ್ಲವಾಗುತ್ತದೆ. ತನ್ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಈ ತೊಂದರೆಯಿಂದ ಬಳಲುವ ವ್ಯಕ್ತಿಗಳಿಗೆ ಹೆಚ್ಚಿನ ಔಷಧಿಯ ನೆರವಿಲ್ಲದೇ ಕೇವಲ ನೀರಿನ ಉಪವಾಸದ ಮೂಲಕ ಚಿಕಿತ್ಸೆ ಪಡೆಯಬೇಕಾದರೆ ಇದಕ್ಕೆ ವೈದ್ಯರ ನಿಗಾ ಅವಶ್ಯವಾಗಿದೆ. ನೀರಿನ ಉಪವಾಸ ಮಾಡುವ ಮೂಲಕ ದೇಹದಲ್ಲಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡುಗಳ ಮಟ್ಟ ಕಡಿಮೆಯಾಗಲು ಸಾಧ್ಯವಾಗುತ್ತದೆ. ಈ ಬಗ್ಗೆ ನಡೆಸಿದ ಪ್ರಾರಂಭಿಸಿದ ಸಂಶೋಧನೆಗಳಲ್ಲಿ ಕೇವಲ ಒಂದು ದಿನ ನಿರ್ವಹಿಸುವ ನೀರಿನ ಉಪವಾಸದಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡುಗಳು ತಗ್ಗಲು ಹಾಗೂ ವಿಶೇಷವಾಗಿ ಒಳ್ಳೆಯ ಕೊಲೆಸ್ಟಾಲ್ ಮಟ್ಟ ಹೆಚ್ಚಲು ನೆರವಾಗುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಣೆಯಾಗುತ್ತೆ.

reactive oxygen species (ROS) ಎಂಬ ಕಣಗಳು ದೇಹದಲ್ಲಿ ಸಂಗ್ರಹಗೊಂಡಷ್ಟೂ ಈ ಬಗೆಯ ಒತ್ತಡ ಹೆಚ್ಚುತ್ತದೆ. ಇದಕ್ಕೆ ಪ್ರಮುಖ ಕಾರಣ ಆಲಸಿತನ! ನಮ್ಮ ದೇಹದ ಎಲ್ಲಾ ಅಂಗಗಳಿಗೂ ಸತತವಾಗಿ ವ್ಯಾಯಾಮ ದೊರಕುತ್ತಲೇ ಇರಬೇಕು. ಹಾಗಾಗಿ ಚಲನಶೀಲತೆ ಕಡಿಮೆಯಿದ್ದಷ್ಟೂ ಈ ಬಗೆಯ ಒತ್ತಡ ಹೆಚ್ಚುತ್ತದೆ. ಈ ವ್ಯಕ್ತಿಗಳು ನೀರಿನ ಉಪವಾಸ ಆಚರಿಸುವ ಮೂಲಕ ಈ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಆದ್ರೆ, ವೈದ್ಯರ ಸಲಹೆ ಅಗತ್ಯ. ಹಾಗಾಗಿ, ದಯವಿಟ್ಟು ವೈದ್ಯರ ಸಲಹೆ ಇಲ್ಲದೇ ಈ ಜಲಉಪವಾಸ ಮಾಡಲೇ ಬೇಡಿ.

ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು