ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ರೈತನ ಮೇಲೆ ರೌಡಿಶೀಟರ್ ಕಮ್ ಗುತ್ತಿಗೆದಾರನಿಂದ ಹಲ್ಲೆ
ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ರೌಡಿಶೀಟರ್, ರೈತನ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮಯೊಂದರಲ್ಲಿ ನಡೆದಿದೆ.
ನೆಲಮಂಗಲ: ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ರೌಡಿಶೀಟರ್, ರೈತನ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮಯೊಂದರಲ್ಲಿ ನಡೆದಿದೆ.
ವೀರ ಸಾಗರ ನಿವಾಸಿಯಾಗಿರುವ ರೈತ ನರಸೇಗೌಡ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ರೈತನ ಮೇಲೆ ರೌಡಿಶೀಟರ್ ಮಂಜುನಾಥ್ ಹಲ್ಲೆ ನಡೆಸಿದ್ದಾನೆ. ಮಂಜುನಾಥ್ ಗುತ್ತಿಗೆದಾರನೂ ಕೂಡ ಆಗಿದ್ದಾನೆ. ಗ್ರಾಮದಲ್ಲಿ ಚರಂಡಿ ಕಾಮಗಾರಿಯನ್ನ ಮಾಡಿಸುತ್ತಿದ್ದ.
ಈ ಕಾಮಗಾರಿಯಲ್ಲಿ ಕಳಪೆ ಕಂಡು ಬಂದಿದೆ. ಹೀಗಾಗಿ ನರಸೇಗೌಡ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೊಚ್ಚಿಗೆದ್ದ ಮಂಜುನಾಥ್ ಪ್ರಶ್ನೆ ಮಾಡಲು ನೀನು ಯಾರೆಂದು ರೈತನ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ನರಸೇಗೌಡ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರಾಜ್ಯದ ಕೆಲವೆಡೆ ಎಂದಿನಂತೆ ಆರಂಭವಾದ ಸಾರಿಗೆ ಸಂಚಾರ.. ಬೆಂಗಳೂರು ಟು ಮೈಸೂರಿಗೂ ನಾನ್‌ಸ್ಟಾಪ್ ಬಸ್ ಸೌಲಭ್ಯ