AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಸಾರಿಗೆ ಸಿಬ್ಬಂದಿಯ ಉಪವಾಸ ಸತ್ಯಾಗ್ರಹ.. ಇಬ್ಬರ ಹಗ್ಗಜಗ್ಗಾಟದಲ್ಲಿ ಪ್ರಯಾಣಿಕರು ಹೈರಾಣ

ಸಾರಿಗೆ ನೌಕರರ ಪ್ರತಿಭಟನೆ ಮತ್ತಷ್ಟು ಉಗ್ರರೂಪಕ್ಕೆ ತಿರುಗುತ್ತಿದೆ. ಇಷ್ಟು ದಿನ ಮನವಿ, ಱಲಿ, ಮುಷ್ಕರ ಅಂತಿದ್ದ ಸಿಬ್ಬಂದಿ ಈಗ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ಇಂದಿನಿಂದ ಪ್ರತಿಭಟನೆಯನ್ನ ಮತ್ತಷ್ಟು ತೀವ್ರಗೊಳಿಸಲು ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಲಾಗಿದೆ.

ಇಂದಿನಿಂದ ಸಾರಿಗೆ ಸಿಬ್ಬಂದಿಯ ಉಪವಾಸ ಸತ್ಯಾಗ್ರಹ.. ಇಬ್ಬರ ಹಗ್ಗಜಗ್ಗಾಟದಲ್ಲಿ ಪ್ರಯಾಣಿಕರು ಹೈರಾಣ
ಇಂದಿನಿಂದ ಸಾರಿಗೆ ಸಿಬ್ಬಂದಿಯ ಉಪವಾಸ ಸತ್ಯಾಗ್ರಹ.
Follow us
ಆಯೇಷಾ ಬಾನು
|

Updated on: Dec 13, 2020 | 6:47 AM

ಬೆಂಗಳೂರು: ಕ್ಷಣಕ್ಷಣಕ್ಕೂ ಕಿಚ್ಚು ಹೆಚ್ಚಾಗ್ತಿದೆ. ಸರ್ಕಾರದ ವಿರುದ್ಧ ಸಮರ ಸಾರಿರೋ ಸಾರಿಗೆ ಸಿಬ್ಬಂದಿ ನಿಗಿ ನಿಗಿ ಕೆಂಡವನ್ನೇ ಉಗುಳುತ್ತಿದ್ದಾರೆ. ಈ ಪ್ರತಿಭಟನೆ, ಈ ಆಕ್ರೋಶ.. ಇಂದು ಮತ್ತಷ್ಟು ಉಗ್ರ ರೂಪಕ್ಕೆ ತಿರುಗಲಿದೆ. ಕಳೆದೆರಡು ದಿನಗಳಿಂದ ನಡೀತಿರೋ ಸಾರಿಗೆ ಸಿಬ್ಬಂದಿಯ ಈ ಹೋರಾಟ ಇವತ್ತು ಸಹ ಮುಂದುವರಿಯಲಿದ್ದು, ಇಂದು ಸಹ ಬಸ್ ಸಂಚಾರವಿರುವುದಿಲ್ಲ.

ಸಾರಿಗೆ ಸಿಬ್ಬಂದಿ ಹೋರಾಟದ ಬೆಂಕಿಗೆ ತುಪ್ಪ ಸುರಿದ ಸವದಿ! ಡಿಸಿಎಂ ಕಂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೋರಾಟಕ್ಕೆ ಕರೆ ಕೊಟ್ಟಿರೋ ಸಿಬ್ಬಂದಿ ಜೊತೆ ಎರಡು ದಿನಗಳಿಂದ ಮಾತಾಡಿಲ್ಲ, ಅಷ್ಟೆ ಯಾಕೆ ನಿನ್ನೆ ಸಹ ಪ್ರತಿಭಟನಾ ನಿರತರನ್ನ ಕರೆದು ಸಂಧಾನ ಮಾಡೋ ಗೋಜಿಗೆ ಹೋಗಿಲ್ಲ. ಆದ್ರೆ, ಸಾರಿಗೆ ಸಿಬ್ಬಂದಿ ಹೊರ ಹಾಕ್ತಿರೋ ಬೆಂಕಿಗೆ ಸವದಿ ಅಕ್ಷರಶಃ ತುಪ್ಪವನ್ನೇ ಸುರಿದಿದ್ದಾರೆ.

ಸಾರಿಗೆ ಸಿಬ್ಬಂದಿ ಹೋರಾಟಕ್ಕೆ ಸೆಡ್ಡು ಹೊಡೆದಿದ್ದಾರೆ. ಪ್ರತಿಭಟನಾಕಾರರನ್ನ ಮತ್ತಷ್ಟು ಕೆರಳಿಸಿದ್ದಾರೆ. ಪ್ರತಿಭಟನೆ ಉಗ್ರ ರೂಪಕ್ಕೆ ತಿರುಗಲು ಕಾರಣವಾಗಿದ್ದಾರೆ. ಯಾಕಂದ್ರೆ, ಇಂಥಾ ಹೋರಾಟಕ್ಕೆಲ್ಲ ನಾವು ಸೊಪ್ಪು ಹಾಕಲ್ಲ ಅನ್ನೋ ಸಂದೇಶ ರವಾನಿಸಿರೋ ಲಕ್ಷ್ಮಣ ಸವದಿ, ಇಂದಿನಿಂದ ಬೇರೆ ಪ್ಲ್ಯಾನ್ ಮಾಡಿರೋದಾಗಿ ಹೇಳಿದ್ದಾರೆ. ಅದೇನಂದ್ರೆ ಸರ್ಕಾರಿ ರೇಟ್.. ಖಾಸಗಿ ಬಸ್ ಸರ್ವೀಸ್..

ಸರ್ಕಾರಿ ಬಸ್ ಬದಲಿಗೆ ಖಾಸಗಿ ಬಸ್ ರೋಡಿಗಿಳಿಸಲು ಪ್ಲ್ಯಾನ್: ಯಾರ ಕೈಗೂ ಸಿಗದೇ, ಯಾರ ಸಂಪರ್ಕಕ್ಕೂ ಸಿಗದೇ ಅದೆಲ್ಲಿದ್ರೋ ಸವದಿ ಸಾಹೇಬ್ರು, ನಿನ್ನೆ ಮಧ್ಯಾಹ್ನ ಪ್ರತ್ಯಕ್ಷವಾದ್ರು ನೋಡಿ. ಹೀಗೆ ಮಾಧ್ಯಮದ ಮುಂದೆ ಬಂದವರೇ, ನಾವು ಬೇರೆ ಪ್ಲ್ಯಾನ್ ಮಾಡ್ಕೊಂಡಿದ್ದೀವಿ. ಸೋಮವಾರದಿಂದ ಖಾಸಗಿ ಬಸ್ ಓಡಾಡುತ್ವೆ ಅಂತಾ ಹೇಳಿದ್ರು.

ಕೋಡಿಹಳ್ಳಿ ವಿರುದ್ಧ ಸಿಎಂ ಬಿಎಸ್​ವೈ, ಸವದಿ ಕಿಡಿ! ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎರಡು ದಿನಗಳಿಂದ ಸಾರಿಗೆ ಸಿಬ್ಬಂದಿ ನಡೆಸ್ತಿರೋ ಪ್ರತಿಭಟನೆಗೆ ಬೆಂಬಲ ನೀಡಿದ್ರು. ಈ ಬಗ್ಗೆ ಮೊನ್ನೆಯೇ ಸಾರಿಗೆ ಸಚಿವ ಸವದಿ ಕೋಡಿಹಳ್ಳಿಗೂ ಸಾರಿಗೆ ಸಿಬ್ಬಂದಿಗೂ ಏನ್ ಸಂಬಂಧ ಅಂತಾ ಪ್ರಶ್ನಿಸಿದ್ರು. ಸಿಎಂ ಬಿಎಸ್​ವೈ ಕೂಡಾ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ, ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಸಿಬ್ಬಂದಿಯನ್ನ ಎತ್ತಿಕಟ್ಟುತ್ತಿದ್ದಾರೆ ಅಂತಾ ಅಸಮಾಧಾನ ಹೊರಹಾಕಿದ್ರು.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹೀಗೆ ಸಿಎಂ ಆದಿಯಾಗಿ ಕಿಡಿ ಕಾರುತ್ತಿರುವಾಗಲೇ, ಸಾರಿಗೆ ಸಿಬ್ಬಂದಿ ಸರ್ಕಾರಕ್ಕೆ ಸೆಡ್ಡು ಹೊಡೆದು, ಸಾರಿಗೆ ಸಿಬ್ಬಂದಿ ಹೋರಾಟ ನಿಗಮದ ಗೌರವಾಧ್ಯಕ್ಷರನ್ನಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನೇ ನೇಮಕ ಮಾಡಿದ್ರು.

ಇಷ್ಟೆಲ್ಲ ಆದ್ಮೇಲೆ.. ಖಾಸಗಿ ಬಸ್ ಓಡಿಸೋ ಪ್ಲ್ಯಾನ್ ಇದೆ ಅಂತಾ ಹೇಳಿದ್ಮೇಲೆ, ಇತ್ತ ಪ್ರತಿಭಟನಾನಿರತರು ಮತ್ತಷ್ಟು ಕೆರಳಿದ್ರು. ರಾಜ್ಯದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿತು..

ಇಂದಿನಿಂದ ಉಪವಾಸ ಸತ್ಯಾಗ್ರಹಕ್ಕೆ ಕೋಡಿಹಳ್ಳಿ ಕರೆ! ಒಂದ್ಕಡೆ ಸವದಿ ವಿರುದ್ಧ ಪ್ರತಿಭಟನೆ ವ್ಯಾಪಕವಾಗಿರೋ ಹೊತ್ತಲ್ಲೇ, ಸಾರಿಗೆ ಸಿಬ್ಬಂದಿ ಹೋರಾಟಕ್ಕೆ ಬೆಂಬಲ ನೀಡಿರೋ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಇಂದಿನಿಂದ ಪ್ರತಿಭಟನೆಯನ್ನ ತೀವ್ರಗೊಳಿಸ್ತೀವಿ. ಉಪವಾಸ ಸತ್ಯಾಗ್ರಹ ಮಾಡ್ತೀವಿ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.

ಸರ್ಕಾರ-ಸಾರಿಗೆ ಸಿಬ್ಬಂದಿ ಸಮರ.. ಪ್ರಯಾಣಿಕರ ಪರದಾಟ..! ಇಷ್ಟೆಲ್ಲದರ ಮಧ್ಯೆ ಅಕ್ಷರಶಃ ಪರದಾಡ್ತಿರೋ ಪ್ರಯಾಣಿಕರು. ಕಳೆದ ಎರಡು ದಿನಗಳಿಂದ ಬಸ್ ಇಲ್ದೆ, ಊರಿಗೆ ಹೋಗೋರೋ.. ನಿತ್ಯ ಕೆಲಸಗಳಿಗೆ ಬಸ್​ಗಳನ್ನೇ ಅವಲಂಬಿಸಿರೋರು.. ರೋಗಿಗಳು, ಕೂಲಿ ಕಾರ್ಮಿಕರು ಹೀಗೆ ಎಲ್ಲರೂ ಬಸ್ ಇಲ್ದೆ ಪರದಾಟ ಅನುಭವಿಸ್ತಿದ್ದಾರೆ.

ಒಟ್ನಲ್ಲಿ ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿ ನಡುವಿನ ಪ್ರತಿಷ್ಠೆಯ ಕದನದಿಂದ ಜನರಿಗೆ ಎರಡು ದಿನಗಳಿಂದ ಸಮಸ್ಯೆಯಾಗ್ತಿದೆ. ಆ ಸಮಸ್ಯೆ ಹಿಂಸೆಯಾಗಿ ಬದಲಾಗ್ತಿದೆ. ಇಂದು ಮತ್ತಷ್ಟು ಆಕ್ರೋಶಕ್ಕೆ ತಿರುಗೋ ಚಾನ್ಸ್ ಇದೆ. ಹೀಗಾಗಿ ಸರ್ಕಾರ ಕೂಡಲೇ ಈ ಸಮಸ್ಯೆ ಬಗೆ ಹರಿಸದಿದ್ರೆ, ಮತ್ತೊಂದು ಸಮಸ್ಯೆ ಏಳೋದು ಫಿಕ್ಸ್.

ಸಾರಿಗೆ ನೌಕರರಿಗೆ ಸರ್ಕಾರಿ ಉದ್ಯೋಗಿಗಳಿಗಿಂತ ಹೆಚ್ಚಿನ ಸವಲತ್ತು ನೀಡುತ್ತೇವೆ- ಲಕ್ಷ್ಮಣ ಸವದಿ ಭರವಸೆ