ರಾಜ್ಯದ ಕೆಲವೆಡೆ ಎಂದಿನಂತೆ ಆರಂಭವಾದ ಸಾರಿಗೆ ಸಂಚಾರ.. ಬೆಂಗಳೂರು ಟು ಮೈಸೂರಿಗೂ ನಾನ್‌ಸ್ಟಾಪ್ ಬಸ್ ಸೌಲಭ್ಯ

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಆದರೆ ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಇಂದು ಕೆಲ ಕಡೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.

ರಾಜ್ಯದ ಕೆಲವೆಡೆ ಎಂದಿನಂತೆ ಆರಂಭವಾದ ಸಾರಿಗೆ ಸಂಚಾರ.. ಬೆಂಗಳೂರು ಟು ಮೈಸೂರಿಗೂ ನಾನ್‌ಸ್ಟಾಪ್ ಬಸ್ ಸೌಲಭ್ಯ
ರಾಜ್ಯದ ಕೆಲವೆಡೆ ಬಸ್ ಸಂಚಾರ ಆರಂಭ.
Ayesha Banu

|

Dec 13, 2020 | 8:30 AM

ವಿಜಯಪುರ: ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದೆ. ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿರಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದೆ.

ಜಿಲ್ಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಬಸ್ ಸಂಚಾರ ಯಥಾಸ್ಥಿತಿಯಾಗಲಿದೆ. ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪಾ ಕುರಬರ ಟಿವಿ9 ಗೆ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಮಾತ್ರ ಬಸ್​ಗಳನ್ನು ಬಿಡಲಾಗುತ್ತೆ. ಜಿಲ್ಲೆಯೊಳಗೆ ಹಾಗೂ ನಗರ ಭಾಗದಲ್ಲಿ ಮಾತ್ರ ಬಸ್ ಆರಂಭಗೊಳ್ಳುತ್ತೆ. ಅಂತರ್ ಜಿಲ್ಲೆ ಬಸ್ ಸಂಚಾರ ಇರುವುದಿಲ್ಲ ಎಂದು ನಾರಾಯಣಪ್ಪಾ ಕುರಬರ ತಿಳಿಸಿದ್ದಾರೆ. ಇನ್ನು ಮುಷ್ಕರ ನಡೆಸಲ್ಲಾ ಕರ್ತವ್ಯಕ್ಕೆ ಹಾಜರಾಗ್ತೀವಿ ಎಂದು ಅಧಿಕಾರಿಗಳಿಗೆ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಹೇಳಿದ್ದಾರಂತೆ.

ಉಡುಪಿಯಲ್ಲಿ ಎಂದಿನಂತೆ KSRTC ಬಸ್ ಸಂಚಾರ: ಇನ್ನು ಉಡುಪಿಯಲ್ಲಿ ಎಂದಿನಂತೆ KSRTC ಬಸ್ ಸಂಚಾರ ಆರಂಭವಾಗಿದೆ. ಉಡುಪಿಯಿಂದ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಮೈಸೂರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಳುತ್ತಿವೆ.

ಸ್ಯಾಟಲೈಟ್‌ನಿಂದ ಮೈಸೂರಿಗೆ KSRTC ಬಸ್ ಸಂಚಾರ: ಸದ್ಯ ಬೆಂಗಳೂರಿನಲ್ಲಿ ಸ್ಯಾಟಲೈಟ್‌ನಿಂದ ಮೈಸೂರಿಗೆ 5 KSRTC ಬಸ್ ಸಂಚಾರ ಮಾಡಲಿವೆ. 4 ಸಾಮಾನ್ಯ ಬಸ್, ಒಂದು ಐರಾವತ ಬಸ್ ಸಂಚರಿಸಲಿದೆ. ಮೈಸೂರಿಗೆ ಮಾತ್ರ ಬಸ್ ಸೇವೆ ನೀಡುವುದಕ್ಕೆ ಸಿಬ್ಬಂದಿ ನಿರ್ಧರಿಸಿದ್ದಾರೆ. ಮೈಸೂರಿನಲ್ಲಿ ಬಸ್ ನಿಲ್ಲಿಸಿ ಮುಷ್ಕರದಲ್ಲಿ ಸಿಬ್ಬಂದಿ ಭಾಗಿಯಾಗಲಿದ್ದಾರೆ. ಬೆಂಗಳೂರು ಟು ಮೈಸೂರಿಗೆ ನಾನ್‌ಸ್ಟಾಪ್ ಬಸ್ ಸೌಲಭ್ಯ ಸಿಗುತ್ತಿದೆ. ಕೆಎಸ್ಆರ್‌ಟಿಸಿ ಬಸ್‌ನಲ್ಲಿ ನಿರ್ವಾಹಕ ಇರುವುದಿಲ್ಲ. ಪೊಲೀಸ್ ಭದ್ರತೆಯಲ್ಲಿ KSRTC ಬಸ್‌ ಮೈಸೂರಿಗೆ ತೆರಳುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗೆ ಹೊಯ್ಸಳ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಗಮನಿಸಿ ಕೆಲವೊಂದು ಬಸ್​ಗಳನ್ನ ಆಪರೇಟ್ ಮಾಡಲು ನಿರ್ಧರಿಸಲಾಗುತ್ತೆ.

ದಕ್ಷಿಣ ಕನ್ನಡ ಜಿಲ್ಲೆಗೆ ತಟ್ಟದ ಸಾರಿಗೆ ನೌಕರರ ಮುಷ್ಕರ ಬಿಸಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ವಾಹನ ಸಂಚರಿಸುತ್ತಿದೆ. ಮಂಗಳೂರಿನಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ KSRTC ಬಸ್‌ಗಳು ಸಂಚರಿಸುತ್ತಿವೆ. ಕೇರಳ ಕಾಸರಗೋಡಿಗೂ KSRTC ಬಸ್‌ ಸಂಚಾರ ಮಾಡುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಬಸ್ ಸೇವೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆ ಒಳಗೆ ಮಾತ್ರ ಬಸ್‌ಗಳ ಸಂಚಾರವಿದೆ.

ಇಂದಿನಿಂದ ಸಾರಿಗೆ ಸಿಬ್ಬಂದಿಯ ಉಪವಾಸ ಸತ್ಯಾಗ್ರಹ.. ಇಬ್ಬರ ಹಗ್ಗಜಗ್ಗಾಟದಲ್ಲಿ ಪ್ರಯಾಣಿಕರು ಹೈರಾಣ

Follow us on

Related Stories

Most Read Stories

Click on your DTH Provider to Add TV9 Kannada