Health Tips: ಆರೋಗ್ಯವಾಗಿರಲು ಏನು ಮಾಡಬೇಕು? ಇಲ್ಲಿದೆ ಸರಳ ಸಲಹೆಗಳು!

ಆರೋಗ್ಯವೇ ಭಾಗ್ಯ ಎನ್ನುವ ಮಾತನ್ನು ನೀವು ಕೇಳಿರಬಹುದು. ಆದರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.

Health Tips: ಆರೋಗ್ಯವಾಗಿರಲು ಏನು ಮಾಡಬೇಕು? ಇಲ್ಲಿದೆ ಸರಳ ಸಲಹೆಗಳು!
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ 14,950 ಕೋಟಿ ಮೀಸಲು
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 04, 2023 | 4:41 PM

ಆರೋಗ್ಯವೇ ಸಂಪತ್ತು’ ಎಂಬ ಮಾತನ್ನು ನೀವು ಕೇಳಿರಬಹುದು. ಏಕೆಂದರೆ ಒಬ್ಬ ವ್ಯಕ್ತಿಗೆ ಆರೋಗ್ಯವಿದ್ದಲ್ಲಿ ಕಠಿಣ ಪರಿಶ್ರಮ ಮತ್ತು ದುಡಿಮೆಯ ಮೂಲಕ ಹಣವನ್ನು ಗಳಿಸಬಹುದು. ಹಾಗಾಗಿ ಮೊದಲು ಆರೋಗ್ಯವಾಗಿರಲು ಏನು ಮಾಡಬೇಕು ಎಂದು ತಿಳಿದುಕೊಳ್ಳಬೇಕು. ಈ ಬಗ್ಗೆ ಆನಂದ ವಠಾರ್ ಎಂಬವರ ಖಾತೆಯಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ನಲ್ಲಿ ಸರಳವಾದ ಆರೋಗ್ಯಕರ ಸಲಹೆಗಳನ್ನು ನೀಡಿದ್ದಾರೆ.

ಸರಳ ಆರೋಗ್ಯ ಸಲಹೆಗಳೇನು? ಇಲ್ಲಿದೆ ಮಾಹಿತಿ:

-ಈ ಎರಡನ್ನು ಆಗಾಗ ಪರೀಕ್ಷಿಸಿಕೊಳ್ಳಿ: ಒಮ್ಮೆ ಶುರು ಆದರೆ ಕೊನೆವರೆಗೂ ಇರುವ ಕಾಯಿಲೆಗಳು ಎಂದರೆ ಅದು ಬಿಪಿ ಮತ್ತು ಶುಗರ್. ಹಾಗಾಗಿ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ. ಬಿಡುವಿದ್ದಾಗ ಅಥವಾ ಅದಕ್ಕಾಗಿಯೇ ಸಮಯ ಮಾಡಿಕೊಂಡು ಬಿಪಿ, ಶುಗರ್ ಅನ್ನು ಆಗಾಗ ಪರೀಕ್ಷಿಸಿಕೊಳ್ಳಿ.

-ಈ ನಾಲ್ಕನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ: ದಿನ ಬಳಕೆಯ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಹೆಚ್ಚಾಗಿ ಬಳಸುವುದನ್ನು ಕಡಿಮೆ ಮಾಡಿ ಯಾವುದಾದರೂ ಅಗತ್ಯಕ್ಕಿಂತ ಹೆಚ್ಚಾದರೆ ಹಾಳು. ಹಾಗಾಗಿ ಎಷ್ಟು ಬೇಕೋ ಅಷ್ಟೇ ಬಳಸಿ. ಅದೆಲ್ಲದರ ಜೊತೆಗೆ ಡೈರಿ ಉತ್ಪನ್ನಗಳು, ಪಿಷ್ಠ ಪದಾರ್ಥಗಳು ತಿನ್ನುವುದನ್ನು ಕಡಿಮೆ ಮಾಡಿ.

-ಈ ನಾಲ್ಕನ್ನು ಹೆಚ್ಚು ಬಳಸಿ: ಪ್ರತಿದಿನ ನಿಮ್ಮ ಊಟ ತಿಂಡಿಯಲ್ಲಿ ಅಗತ್ಯವಾಗಿ ಹಸಿರು ಸೊಪ್ಪು, ತರಕಾರಿಗಳು, ಬೀಜಗಳು, ಹಣ್ಣುಗಳು ಬಳಸಿ. ಇವು ನಿಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ.

-ಈ ಮೂರನ್ನು ಮರೆತು ಬಿಡಿ: ಜೀವನದಲ್ಲಿ ನೀವು ಆರೋಗ್ಯವಾಗಿರಬೇಕು ಎಂದಲ್ಲಿ ಮೊದಲು ನಿಮ್ಮ ವಯಸ್ಸಿನ ಬಗ್ಗೆ, ಕಳೆದು ಹೋದ ದಿನಗಳ ಬಗ್ಗೆ, ಮತ್ತು ಯಾರೊಂದಿಗಾದರೂ ದ್ವೇಷ ಕಟ್ಟಿಕೊಂಡಿದ್ದರೇ ಅವೆಲ್ಲವನ್ನು ಮರೆತು ಬಿಡಿ. ಇವೆಲ್ಲವೂ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ.

ಇದನ್ನೂ ಓದಿ: Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ಈ ಮೂರನ್ನು ಹೊಂದಲು ಪ್ರಯತ್ನಿಸಿ: ಜೀವನದಲ್ಲಿ ಯಾವಾಗಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಧನಾತ್ಮಕ ಚಿಂತನೆ ಅತ್ಯಗತ್ಯ. ನಕಾರಾತ್ಮಕ ಚಿಂತನೆಗಳು ನಮ್ಮನ್ನು ಚಿಂತೆಗಳ ಕೂಪಕ್ಕೆ ತಳ್ಳಿ ಬಿಡುತ್ತದೆ ಇದರಿಂದ ಆಚೆ ಬರುವುದು ತುಂಬಾ ಕಷ್ಟ. ಹಾಗಾಗಿ ಆದಷ್ಟು ನಕಾರಾತ್ಮಕ ಚಿಂತೆ ಬಿಟ್ಟು ಸಕಾರಾತ್ಮಕ ಚಿಂತನೆಯನ್ನು ಮಾಡಿ. ಜೊತೆಗೆ ನಮ್ಮ ಒತ್ತಡ, ಚಿಂತೆ ಕಡಿಮೆ ಮಾಡಲು ಪ್ರೀತಿಸುವ ಕುಟುಂಬ, ನೈಜ ಮಿತ್ರರು ಇದ್ದಲ್ಲಿ ಸಂತೋಷವನ್ನು ಹುಡುಕಿಕೊಂಡು ಹೋಗಬೇಕೆಂದಿಲ್ಲ. ಖುಷಿ ಇದ್ದಲ್ಲಿ ಆರೋಗ್ಯವು ಜೊತೆಯಾಗುತ್ತದೆ.

– ಆರೋಗ್ಯವಾಗಿರಲು ಮುಖ್ಯವಾಗಿ ಹೀಗೆ ಮಾಡಿ: ವಾರದಲ್ಲಿ ಒಂದು ದಿನವಾದರೂ ಉಪವಾಸ ಮಾಡಿ. ಇದರಿಂದ ದೇಹಕ್ಕೆ ಒಳ್ಳೆಯದು. ಆರೋಗ್ಯವಾಗಿರಲು ಉತ್ತಮ ಔಷಧವೆಂದರೆ ನಗು. ಇದರಿಂದ ನಿಮ್ಮ ಆತಂಕ ಮಾಯವಾಗುತ್ತದೆ ಜೊತೆಗೆ ಸಹಜವಾಗಿ ಆರೋಗ್ಯ ಸುಧಾರಿಸುತ್ತದೆ. ಇವೆಲ್ಲದರೊಂದಿಗೆ ದಿನನಿತ್ಯ ವ್ಯಾಯಾಮ/ಯೋಗ ಮಾಡಿ. ಇವು ನಿಮಗೆ ನಿರಾಳತೆ ನೀಡಿ. ದಿನ ಪೂರ್ತಿ ನಿಮ್ಮನ್ನು ಲವಲವಿಕೆಯಿಂದಿರಲು ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆಗೆ ಆದಷ್ಟು ತೂಕ ಕಡಿಮೆ ಮಾಡಿಕೊಳ್ಳಿ. ಇದರಿಂದ ಫಿಟ್ ಆಗಿ ಇರುತ್ತೀರಿ. ಆರೋಗ್ಯವು ಜೊತೆಯಾಗುತ್ತದೆ.

-ಈ ಎರಡು ವಿಷಯಗಳಿಗೆ ಕಾಯಬೇಡಿ: ಮೊದಲನೇಯದು ರಾತ್ರಿ ಸಮಯದಲ್ಲಿ ನಿದ್ದೆ ಮಾಡಲು ನಿದ್ದೆ ಬರುವ ವರೆಗೆ ಕಾಯಬೇಡಿ. ಇದರಿಂದ ನಿಮ್ಮ ನಿದ್ದೆಗೆ ಅಡತಡೆ ಆಗುವುದರ ಜೊತೆಗೆ 8 ತಾಸು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನಿದ್ರೆ ಸರಿಯಾಗಿ ಆಗದಿದ್ದಲ್ಲಿ ಆರೋಗ್ಯ ಕೆಡುತ್ತದೆ. ಕೆಲಸ ಮಾಡಿ ಬಂದಾಗ ಅಥವಾ ಸಮಯ ಸಿಕ್ಕಾಗ ವಿಶ್ರಾಂತಿ ತೆಗೆದುಕೊಳ್ಳಲು ಮರೆಯದಿರಿ. ಸುಸ್ತಾಗುವವರೆಗೆ ಕಾಯಬೇಡಿ. ಆಗ ನಿಮ್ಮ ದೇಹಕ್ಕೂ ಮತ್ತು ಮನಸ್ಸಿಗೂ ಆನಂದ ದೊರೆಯುತ್ತದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಆರೋಗ್ಯವೇ ಭಾಗ್ಯ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ