Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ಹೊಸ ವರ್ಷ 2023: ಈ ವರ್ಷದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು  ಸಿಂಪಲ್ ಟಿಪ್ಸ್ ಪಾಲಿಸಿ. ನಿಮಗಾಗಿ ಸಮಯ ಮೀಸಲಿಡಿ. ವರ್ಷದ ಕೊನೆಯ ದಿನಗಳಲ್ಲಿ ಈ ವರ್ಷ ನೀವು ನಿಮಗಾಗಿ ಏನು ಮಾಡಿದ್ದೀರಿ ಎಂದು ಸ್ವಲ್ಪ ಹೊತ್ತು ಯೋಚಿಸಿ.

Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 29, 2022 | 11:53 AM

ಹೊಸ ವರ್ಷ (New Year) ಸಮೀಪಿಸುತ್ತಿದೆ. ಸಂಭ್ರಮ ಸಡಗರಗಳ ನಡುವೆ ನಿಮ್ಮ ಆರೋಗ್ಯ(Health) ವನ್ನು ಕಡೆಗಣಿಸದಿರಿ. ನೀವು ಸೇವಿಸುವ ಆಹಾರ ಕ್ರಮಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯವಾಗಿದೆ. ಹೊಸ ವರ್ಷದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು  ಸಿಂಪಲ್ ಟಿಪ್ಸ್ ಪಾಲಿಸಿ. ನಿಮಗಾಗಿ ಸಮಯ ಮೀಸಲಿಡಿ. ವರ್ಷದ ಕೊನೆಯ ದಿನಗಳಲ್ಲಿ ಈ ವರ್ಷ ನೀವು ನಿಮಗಾಗಿ ಏನು ಮಾಡಿದ್ದೀರಿ ಎಂದು ಸ್ವಲ್ಪ ಹೊತ್ತು ಯೋಚಿಸಿ. ಆದ್ದರಿಂದ ಮುಂದಿನ ವರ್ಷದಿಂದಾದರೂ ನಿಮ್ಮ ವೈಯಕ್ತಿಕ ಖುಷಿಗಾಗಿ ಎನು ಮಾಡಬೇಕು ಎಂದು ಯೋಚಿಸಿ. ನೀವು ಮಾನಸಿಕವಾಗಿ ತೃಪ್ತಿಯಿಂದ ಇದ್ದರೆ ಆದೇ ನಿಮ್ಮನ್ನು ಆರೋಗ್ಯವಾಗಿಡುತ್ತದೆ.

– ಹೊಸ ವರ್ಷದ ಪಾರ್ಟಿ, ನೈಟ್ ಪಾರ್ಟಿಗಳ ಸಂಭ್ರಮದಲ್ಲಿ ನೀವು ಸಂಭ್ರಮಿಸಲು ಬಯಸಿದರೆ, ನಿಮ್ಮ ಆರೋಗ್ಯದ ಕಡೆಯೂ ಗಮನ ಹರಿಸುವುದು ಅಗತ್ಯವಾಗಿದೆ. ಪಾರ್ಟಿ ಎಂದಾಕ್ಷಣ ಆಲ್ಕೋಹಾಲ್​ಗಳು ಇರುವುದಂತೂ ಸಹಜ. ಆದರೆ ನಿಮ್ಮ ಆರೋಗ್ಯವನ್ನು ಕಾಪಾಡುವುದು ನಿಮ್ಮ ಜವಬ್ದಾರಿಯಾಗಿರುತ್ತದೆ. ಆದ್ದರಿಂದ ಮದ್ಯಪಾನ ಸೇವನೆಯನ್ನು ಮಿತಿಯಲ್ಲಿಡುವುದು ಅಗತ್ಯವಾಗಿದೆ. ಅತಿಯಾದ ಕುಡಿತವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡುವುದರಿಂದ ಹೊಟ್ಟೆ ಉಬ್ಬಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವೈನ್ ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ, ಆದರೆ ಇತರ ಪಾನೀಯಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ.

– ಹಬ್ಬದ ಸಮಯದಲ್ಲಿ ಆಹಾರದ ಕಡುಬಯಕೆಗಳನ್ನು ನಿಯಂತ್ರಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದೀರಾ? ಇದಕ್ಕಾಗಿ ನಿಮ್ಮ ಮನಸ್ಸಿನಲ್ಲಿಯೇ ನೀವು ನಿಮ್ಮನ್ನು ನಿಯಂತ್ರಿಸಬೇಕಿದೆ. ಮಿತವಾಗಿ ಸೇವಿಸಿ, ನಿಧಾನವಾಗಿ ತಿನ್ನಿರಿ, ಸಣ್ಣ ಚಮಚದೊಂದಿಗೆ ತಿನ್ನಿರಿ ಮತ್ತು ಚೆನ್ನಾಗಿ ಅಗಿಯಿರಿ. ಈ ರೀತಿಯ ಸುಲಭ ಟಿಪ್ಸ್ ಪಾಲಿಸಿ.

ಇದನ್ನೂ ಓದಿ: ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಹೊಸ ವರ್ಷದ ಅತ್ಯುತ್ತಮ ರೆಸಲ್ಯೂಷನ್‌ಗಳು ಇಲ್ಲಿವೆ

– ಈ ಹೊಸ ವರ್ಷದ ಸಮಯದಲ್ಲಿ ಹೊಸ ಹೊಸ ಅಂಶಗಳನ್ನು ರೂಢಿಸಿಕೊಳ್ಳಿ. ಅಂದರೆ ನೀವು ಈಗಾಗಲೇ ಯೋಗಾಭ್ಯಾಸಗಳನ್ನು ಮಾಡುತ್ತಿದ್ದರೆ ಉತ್ತಮ. ಇಲ್ಲದಿದ್ದರೆ ಹೊಸ ವರ್ಷದಲ್ಲಿ ಪ್ರತಿದಿನ ಒಂದಿಷ್ಟು ಹೊತ್ತು ಯೋಗಾಭ್ಯಾಸಕ್ಕೆ ಮೀಸಲಿಡಿ. ಪ್ರತಿದಿನ ಒಂದಷ್ಟು ಹೊತ್ತು ಯೋಗಾಸನಗಳನ್ನು ಮಾಡುವುದರಿಂದ ನಿಮ್ಮನ್ನು ಒತ್ತಡದಿಂದ ಹೊರತರಬಹುದಾಗಿದೆ. ಜೊತೆಗೆ ಇದು ನಿಮಗೆ ಮಾನಸಿಕವಾಗಿ ನೆಮ್ಮದಿಯನ್ನು ನೀಡಲು ಸಹಾಯಕವಾಗಿದೆ.

– ಖುಷಿಯನ್ನು ಹಂಚಿಕೊಳ್ಳಿ. ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಾಗೂ ನಿಮ್ಮ ಕೆಲಸದ ಜಾಗದಲ್ಲೂ ಪ್ರತಿಯೊಬ್ಬರೊಂದಿಗೆಯೂ ಖುಷಿಯನ್ನು ಹಂಚಿಕೊಳ್ಳಿ. ಮುಖದಲ್ಲೋಂದು ನಗು ಯಾವಾಗಲೂ ಇರಲಿ. ಇದು ನೀವು ಸಂತೋಷವಾಗಿರುವುದರ ಜೊತೆಗೆ ನಿಮ್ಮ ಸುತ್ತ ಮುತ್ತಲಿನವರನ್ನು ಸಂತೋಷವಾಗಿಡುವಂತೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:46 am, Thu, 29 December 22

‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..