Updated on:Dec 28, 2022 | 8:11 PM
ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ. ಈ ಕಡಲೆಕಾಯಿಯಲ್ಲಿ ಆರೋಗ್ಯದ ಗುಟ್ಟು ಅಡಗಿದೆಯೆಂದರೆ, ನೀವು ನಂಬಲೇಬೇಕು.
ಕಡಲೆಕಾಯಿಗಳಲ್ಲಿ ಕ್ಯಾಲೋರಿಗಳು, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು, ಫೈಬರ್, ಒಮೆಗಾ -6 ಕೊಬ್ಬಿನಾಮ್ಲಗಳು, ವಿಟಮಿನ್ಗಳು, ಪೊಟ್ಯಾಸಿಯಮ್, ರಂಜಕ, ಸತು, ಕಬ್ಬಿಣ ಮತ್ತು ಮೆಗ್ನೀಸಿಯಮ್ಗಳಿಂದ ಸಮೃದ್ಧವಾಗಿದೆ.
ಕಡಲೆಕಾಯಿಯಲ್ಲಿ ಪ್ರೊಟೀನ್ ಹೆಚ್ಚಿರುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸಿ, ಕೆಟ್ಟ ಕೊಬ್ಬನ್ನು ಕರಗಿಸಿ, ತೂಕವನ್ನು ಕಡಿಮೆ ಮಾಡಲಿ ಸಹಕರಿಸುತ್ತದೆ. ಕಡಲೆಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ನಮ್ಮ ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತದೆ.
ಕಡಲೇಕಾಯಿ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿನ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಕಡಲೆಕಾಯಿಯನ್ನು ನಿಯಮಿತವಾಗಿ ತಿನ್ನುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಮತ್ತು ಚಳಿಗಾಲದಲ್ಲಿ ಉಂಟಾಗುವ ಒಣಚರ್ಮದ ಸಮಸ್ಯೆಯೂ ದೂರವಾಗುತ್ತದೆ.
Published On - 8:10 pm, Wed, 28 December 22