New Year 2023: ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಹೊಸ ವರ್ಷದ ಅತ್ಯುತ್ತಮ ರೆಸಲ್ಯೂಷನ್‌ಗಳು ಇಲ್ಲಿವೆ

2023 ನ್ನು ಉತ್ತಮಗೊಳಿಸಲು ಸಹಾಯ ಮಾಡುವ ರೆಸಲ್ಯೂಷನ್‌ಗಳ ಕುರಿತು ಯೋಚನೆಗಳ ಬಗ್ಗೆ ಕಾರ್ಯನಿರತರಾಗಿದ್ದೀರಿ ಅಲ್ಲವೇ? ಆದ್ದರಿಂದ ನಿಮ್ಮ ರೆಸಲ್ಯೂಷನ್‌ಗಳನ್ನು ಆರೋಗ್ಯದೊಂದಿಗೆ ಏಕೆ ಪ್ರಾರಂಭಿಸಬಾರದು.

New Year 2023: ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಹೊಸ ವರ್ಷದ ಅತ್ಯುತ್ತಮ ರೆಸಲ್ಯೂಷನ್‌ಗಳು ಇಲ್ಲಿವೆ
ಸಾಂದರ್ಭಿಕ ಚಿತ್ರImage Credit source: Unsplash
Follow us
| Updated By: ಅಕ್ಷತಾ ವರ್ಕಾಡಿ

Updated on:Dec 28, 2022 | 3:16 PM

2022ರ ವರ್ಷವು ಇನ್ನೇನು ಎರಡು ಮೂರು ದಿನಗಳಲ್ಲಿ ಕೊನೆಗೊಳ್ಳುತ್ತಿರುವುದರಿಂದ, ನಾವೆಲ್ಲರು 2023ರ ವರ್ಷವನ್ನು ಉತ್ತಮಗೊಳಿಸಲು ಸಹಾಯ ಮಾಡುವ ರೆಸಲ್ಯೂಷನ್‌ಗಳ ಬಗ್ಗೆ ಯೋಚಿಸುತ್ತಿರುತ್ತೇವೆ. ಆದ್ದರಿಂದ ನಿಮ್ಮ ಆರೋಗ್ಯದೊಂದಿಗೆ ಏಕೆ ಇದನ್ನು ಪ್ರಾರಂಭಿಸಬಾರದು. ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಉತ್ತಮ ರೆಸಲ್ಯೂಷನ್‌ಗಳು ಇಲ್ಲಿವೆ. ಕೋವಿಡ್-19 ಮಹಾಮಾರಿಯು ಪ್ರತಿಯೊಬ್ಬರಿಗೂ ಉತ್ತಮ ರೋಗನಿರೋಧಕ ಶಕ್ತಿ, ಮಾನಸಿಕ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದ ಮಹತ್ವವನ್ನು ಕಲಿಸಿದೆ. ಪ್ರಪಂಚದಾದ್ಯಂತ ಜನರು ಈಗ ಜೀವನದ ಇತರ ಅಂಶಗಳಿಗಿಂತ ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದು ಕೆಲವೇ ದಿನಗಳಲ್ಲಿ ಮಾಡಬಹುದಾದ ವಿಚಾರವಲ್ಲ, ಇದಕ್ಕೆ ಸಾಕಷ್ಟು ಸಮಯದವರೆಗೆ ಸಮರ್ಪಿತ ಪ್ರಯತ್ನ ಮತ್ತು ರೋಗಮುಕ್ತ ಜೀವನವನ್ನು ನಡೆಸಲು ಸಂಕಲ್ಪದ ಅಗತ್ಯವಿರುತ್ತದೆ.

ಕೋವಿಡ್-19ರ ಹೊಸ ತಳಿಗಳು ಬೆಳಕಿಗೆ ಬರುತ್ತಿರುವ ಕಾರಣ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಲು ಧೃಢವಾದ ರೋಗನಿರೋಧಕ ಶಕ್ತಿಯನ್ನು ಹೊಂದುವುದು ಕಡ್ಡಾಯವಾಗಿದೆ. ಕೋವಿಡ್ ರೂಪಾಂತರಗಳು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ಅವುಗಳು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ತಿಳಿದು ಬಂದಿದೆ. 2022ರ ವರ್ಷವು ಈಗ ಎರಡು ಮೂರು ದಿನಗಳಲ್ಲಿ ಕೊನೆಗೊಳ್ಳುತ್ತಿರುವುದರಿಂದ, ನೀವೆಲ್ಲರೂ 2023 ನ್ನು ಉತ್ತಮಗೊಳಿಸಲು ಸಹಾಯ ಮಾಡುವ ರೆಸಲ್ಯೂಷನ್‌ಗಳ ಕುರಿತು ಯೋಚನೆಗಳ ಬಗ್ಗೆ ಕಾರ್ಯನಿರತರಾಗಿದ್ದೇವೆ. ಆದ್ದರಿಂದ ಇದನ್ನು ನಿಮ್ಮ ಆರೋಗ್ಯದೊಂದಿಗೆ ಏಕೆ ಪ್ರಾರಂಭಿಸಬಾರದು.

ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಉತ್ತಮವಾದ ರೆಸಲ್ಯೂಷನ್‌ಗಳು ಇಲ್ಲಿವೆ.

1. ಒಲವಿನ ಆಹಾರಗಳನ್ನು (ಡಯೆಟ್) ಅನುಸರಿಸಬೇಡಿ:

ವಿವಿಧ ಒಲವಿನ ಆಹಾರಗಳು ಲಭ್ಯವಿದೆ. ಅದು ಆರಂಭದಲ್ಲಿ ಚೆನ್ನಾಗಿ ಕೆಲಸ ಮಾಡಬಹುದು ಮತ್ತು ಬೃಹತ್ ಪ್ರಮಾಣದ ತೂಕ ನಷ್ಟಕ್ಕೆ ಕಾರಣವಾಗಬಹುದು. ಆದರೆ ಅಷ್ಟೇನೂ ಸಮರ್ಥನೀಯವಲ್ಲ. ಸ್ವಲ್ಪ ಸಮಯದ ನಂತರ ಅವು ಪೌಷ್ಠಿಕಾಂಶದ ಕೊರತೆಗಳು, ದೌರ್ಬಲ್ಯ, ನಿರ್ಜಲೀಕರಣ ಮತ್ತು ಮೂಡ್ ಸ್ವಿಂಗ್ಸ್ಗಳಂತಹ ಸಮಸ್ಯೆಯನ್ನು ತಂದೊಡ್ಡಬಹುದು. ನಿಮ್ಮ ಆಹಾರದಲ್ಲಿ ಫೈಬರ್, ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಸೇವಿಸುವ ಮೂಲಕ ಹಾಗೂ ವ್ಯಾಯಾಮ ಮಾಡುವ ಮೂಲಕ ಧೀರ್ಘ ಕಾಲದವರೆಗೆ ತೂಕವನ್ನು ಸ್ಥಿರವಾಗಿ ಕಮ್ಮಿ ಮಾಡಬಹುದು.

2. ಒತ್ತಡದಿಂದ ಮುಕ್ತವಾಗಿರಿ:

ಒತ್ತಡವು ನಿಮ್ಮನ್ನು ಅತಿಯಾಗಿ ತಿನ್ನುವಂತೆ ಒತ್ತಾಯಿಸಬಹುದು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಕೆಲವು ಸಮಯದಲ್ಲಿ ಅತಿಯಾಗಿ ತಿನ್ನುವ ಮೂಲಕ ಸಾಮಾನ್ಯವಾಗಿ ಸರಿದೂಗಿಸುವ ಊಟವನ್ನು ಇದು ಬಿಟ್ಟು ಬಿಡುವಂತೆ ಮಾಡುತ್ತದೆ. ನಿಮ್ಮ ಮನಸ್ಸಿನ ಶಾಂತಿಯನ್ನು ಅಡ್ಡಿ ಪಡಿಸುವ ಒತ್ತಡಗಳನ್ನು ತಪ್ಪಿಸುವುದು ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯಕ್ಕೂ ತೊಂದರೆ ಮಾಡುತ್ತದೆ. ಆದ್ದರಿಂದ 2023ರ ವರ್ಷವನ್ನು ಒತ್ತಡದಿಂದ ಮೈಲಿಗಳಷ್ಟು ದೂರವಿರುವಂತೆ ಮಾಡಬೇಕು.

3. ಯೋಗ ಮತ್ತು ಪ್ರಾಣಾಯಾಮ:

ಪ್ರತಿಯೊಬ್ಬರೂ ತಲೆಯೊಳಗೆ ಭವಿಷ್ಯದ ಬಗ್ಗೆ ಯೋಚಿಸುತ್ತಿರುತ್ತೇವೆ ಅಥವಾ ಹಿಂದಿನ ವೈಫ್ಯಗಳು ಅಥವಾ ನಿರಾಶೆಗಳ ಬಗ್ಗೆ ಮೆಲುಕು ಹಾಕುತ್ತಿರುತ್ತೇವೆ. ಇದಲ್ಲದೆ ಪ್ರಸ್ತುತ ಕ್ಷಣವನ್ನು ಸುಂದರವಾಗಿ ಜೀವಿಸಬಹುದು. ಇದಕ್ಕೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ನಿಮಗೆ ಸಹಾಯ ಮಾಡುತ್ತದೆ. ಯೋಗದ ನಿಯಮಿತ ಅಭ್ಯಾಸವು ನಿಮಗೆ ಜಾಗರೂಕರಾಗಿರಲು ಸಹಾಯ ಮಾಡುತ್ತದೆ. ನಿಮ್ಮ ಆಲೋಚನೆಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಇದರಿಂದಾಗಿ ಚೆನ್ನಾಗಿರುವ ಮನಸ್ಥಿತಿಯನ್ನು ನೀವು ಪಡೆಯಬಹುದು. ಈ ಅಭ್ಯಾಸಗಳು ಧೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸಿಂಗಲ್ಸ್ ಆಗಿರುವ ನೀವು ಮಿಂಗಲ್ ಆಗೋಕೆ ಬಯಸುತ್ತಿರುವಿರಾ? ಈ 5 ಸಲಹೆ ಪಾಲಿಸಿ

4. ಸ್ಕಿನ್ ಟೈಮ್‌ನ್ನು ಕಡಿಮೆ ಮಾಡಿ:

ಆಧುನಿಕ ಕಾಲದಲ್ಲಿ ಗ್ಯಾಜೆಟ್‌ಗಳು ಮತ್ತು ಕಂಪ್ಯೂಟರ್‌ಗಳಿಂದ ದೂರವಿರುವುದು ಕಷ್ಟ. ಕೆಲಸ ಮಾಡುವಾಗ ಒಬ್ಬ ವ್ಯಕಿ ಯಾವಾಗಲೂ ತಮ್ಮ ಪರದೆಗಳಿಗೆ ಅಂಟಿಕೊಂಡಿರುತ್ತಾನೆ ಮತ್ತು ಬಿಡುವಿನ ಸಮಯಕ್ಕಾಗಿ ಮೊಬೈಲ್ ಫೋನ್‌ನಂತಹ ಗ್ಯಾಜೆಟ್‌ಗಳನ್ನು ಅವಲಂಬಿಸಿರುತ್ತಾನೆ. ಈ ಹೊಸ ವರ್ಷ 2023ರಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆಗೆ ಸ್ವಲ್ಪ ಗ್ಯಾಜೆಟ್ ಮುಕ್ತ ಸಮಯವನ್ನು ಕಳೆಯುವುದರ ಕುರಿತು ಯೋಚನೆ ಮಾಡಿ. ಇದು ನಿಮ್ಮ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡಬಹುದೇ? ವೈರಲ್ ವಿಡಿಯೋ ಇಲ್ಲಿದೆ

5. ಹವ್ಯಾಸವನ್ನು ಕಲಿಯಿರಿ:

ಆಧುನಿಕ ಕಾಲದ ಜನರು ಹೆಚ್ಚಾಗಿ ಹವ್ಯಾಸಗಳನ್ನು ಹೊಂದಿರುವುದಿಲ್ಲ. ಏಕೆಂದರೆ ಯಾವಾಗಲೂ ಏನನ್ನಾದರೂ ಮಾಡುತ್ತಾ ಇರುತ್ತೇವೆ. ಒಂದಾ ಯಾವಾಗಲೂ ಫೋನ್‌ಗಳಿಗೆ ಅಂಟಿಕೊಂಡಿರುತ್ತಾರೆ ಅಥವಾ ಕೆಲಸ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರಯತ್ನ ಪಡುವುದಿಲ್ಲ. 2023ರಲ್ಲಿ ನೀವು ಇಷ್ಟಪಡುತ್ತಿದ್ದ ನಿಮ್ಮ ಹವ್ಯಾಸಗಳನ್ನು ಮುಂದುವರಿಸಲು ಸಂಕಲ್ಪ ಮಾಡಿ. ಬರವಣಿಗೆ, ಚಿತ್ರಕಲೆ, ತೋಟಗಾರಿಕೆ ಈ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 3:14 pm, Wed, 28 December 22

ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ