Benefits of Parsley Tea: ಪಾರ್ಸ್ಲಿ ಟೀ ಮಾಡುವ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು ಇಲ್ಲಿವೆ
ಈ ಪಾರ್ಸ್ಲಿ ಸೊಪ್ಪಿನಿಂದ ಚಹಾ ತಯಾರಿಸಲಾಗುತ್ತದೆ. ಈ ಚಹಾ ತಯಾರಿಸುವುದು ಹೇಗೆ? ಮತ್ತು ಪಾರ್ಸ್ಲಿ ಸೊಪ್ಪಿನ ಎಲೆಗಳ ಚಹಾ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಎಷ್ಟು ಪ್ರಯೋಜನಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಾರ್ಸ್ಲಿ ಸೊಪ್ಪು(Parsley leaves) ಕೊತ್ತಂಬರಿ ಸೊಪ್ಪನ್ನು ಹೋಲುತ್ತದೆ. ಈ ಸಸ್ಯಗಳೆರಡು ಒಂದೇ ಸಸ್ಯ ಕುಟುಂಬದಿಂದ ಬಂದಿವೆ. ಹಸಿರು ಎಲೆಗಳುಳ್ಳ, ತೆಳುವಾದ ಕಾಂಡಗಳ ಮೇಲೆ ಬೆಳೆಯುತ್ತವೆ. ಕೆಲವು ಪ್ರದೇಶಗಳ ಜನರು ಕೊತ್ತಂಬರಿ ಸೊಪ್ಪನ್ನು ಚೈನೀಸ್ ಪಾರ್ಸ್ಲಿ ಎಂದು ಕರೆಯುತ್ತಾರೆ. ಈ ಪಾರ್ಸ್ಲಿ ಸೊಪ್ಪಿನಿಂದ ಚಹಾ ತಯಾರಿಸಲಾಗುತ್ತದೆ. ಈ ಚಹಾ ತಯಾರಿಸುವುದು ಹೇಗೆ? ಮತ್ತು ಪಾರ್ಸ್ಲಿ ಸೊಪ್ಪಿನ ಎಲೆಗಳ ಚಹಾ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಎಷ್ಟು ಪ್ರಯೋಜನಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಾರ್ಸ್ಲಿ ಚಹಾ ಮಾಡುವ ವಿಧಾನ:
-ಪಾರ್ಸ್ಲಿ ಚಹಾವನ್ನು ತಯಾರಿಸಲು, 1 ಟೀಚಮಚ ಒಣಗಿದ ಪಾರ್ಸ್ಲಿ ಎಲೆಗಳನ್ನು ತೆಗೆದುಕೊಳ್ಳಿ.
-ನಂತರ, ಒಂದು ಪಾತ್ರೆಯಲ್ಲಿ 1-2 ಲೋಟ ನೀರು ಹಾಕಿ, ಕುದಿಸಿ.
-ಕುದಿಯುತ್ತಿರುವ ನೀರಿಗೆ ಕತ್ತರಿಸಿದ ಒಣ ಪಾರ್ಸ್ಲಿ ಎಲೆಗಳನ್ನು ಸೇರಿಸಿ.
-ಈಗ ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ.
– ಈಗ ಆರೋಗ್ಯಕರ ಪಾರ್ಸ್ಲಿ ಟೀ ಸವಿಯಲು ಸಿದ್ಧವಾಗಿದೆ.
ಪಾರ್ಸ್ಲಿ ಟೀ ಕುಡಿಯುವುರಿಂದ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ
ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ:
ಪಾರ್ಸ್ಲಿ ಚಹಾದಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯಮಾಡುತ್ತದೆ. ಪಾರ್ಸ್ಲಿಯಲ್ಲಿರುವ ಫೋಲಿಕ್ ಆಮ್ಲವು ಹೋಮೋಸಿಸ್ಟೈನ್ ಪರಿಣಾಮಗಳನ್ನು ತಡೆಗಟ್ಟುವ ಮೂಲಕ ಆರೋಗ್ಯಕರ ರಕ್ತನಾಳಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ:
ಪಾರ್ಸ್ಲಿ ಟೀ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಮತ್ತು ವಿಟಮಿನ್ ಎ ಹೊಂದಿದೆ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೆಚ್ಚುವರಿಯಾಗಿ, ಇದು ಲ್ಯುಕೋಸೈಟ್ಗಳ ರಚನೆಯಲ್ಲಿ ಸಹಾಯ ಮಾಡುತ್ತದೆ. ಪಾರ್ಸ್ಲಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಬಾಯಿಯಲ್ಲಿ ನೀರೂರಿಸುವ ಭಕ್ಷ್ಯಗಳ ಪಟ್ಟಿ ಇಲ್ಲಿವೆ
ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ:
ಪಾರ್ಸ್ಲಿ ವಿಟಮಿನ್ ಕೆ ಯನ್ನು ಹೊಂದಿರುತ್ತದೆ. ಇದು ಆಸ್ಟಿಯೋಬ್ಲಾಸ್ಟ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆಯ ರಚನೆಗೆ ಸಹಾಯ ಮಾಡುತ್ತದೆ. ಇದು ಮೂಳೆಗಳು ಮತ್ತು ಹಲ್ಲುಗಳಿಗೆ ಉತ್ತಮ ಕ್ಯಾಲ್ಸಿಯಂ ಅಂಟಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಆಸ್ಟಿಯೊಪೊರೋಸಿಸ್ ಕಡಿಮೆ ಮಾಡುತ್ತದೆ. ಪಾರ್ಸ್ಲಿ ಟೀ ಮೂಳೆ ಸಾಂದ್ರತೆಯನ್ನು ಹೆಚ್ಚಿಸುವ ಹಲವಾರು ಪ್ರೋಟೀನ್‌ಗಳನ್ನು ಸಕ್ರಿಯಗೊಳಿಸುವ ಅಂಶವನ್ನು ಹೊಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:20 pm, Wed, 28 December 22