Sign In

By signing in or creating an account, you agree with Associated Broadcasting Company's Terms & Conditions and Privacy Policy.

Irregular Periods: ಮುಟ್ಟು ವಿಳಂಬವಾಗುತ್ತಿದೆಯೇ ಹಾಗಾದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

Irregular Periods: ಋತುಚಕ್ರವೆಂಬುದು ಸ್ತ್ರೀ ಜೀವನದಲ್ಲಿ ಪ್ರಮುಖಪಾತ್ರವನ್ನುವಹಿಸುತ್ತದೆ. ಸರಿಯಾದ ಸಮಯಕ್ಕೆ ಮುಟ್ಟು(Periods) ಬಾರದಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Irregular Periods: ಮುಟ್ಟು ವಿಳಂಬವಾಗುತ್ತಿದೆಯೇ ಹಾಗಾದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಅನಿಯಮಿತ ಮುಟ್ಟು
Follow us
TV9 Web
| Updated By: ನಯನಾ ರಾಜೀವ್

Updated on: May 15, 2022 | 11:24 AM

ಋತುಚಕ್ರವೆಂಬುದು ಸ್ತ್ರೀ ಜೀವನದಲ್ಲಿ ಪ್ರಮುಖಪಾತ್ರವನ್ನುವಹಿಸುತ್ತದೆ. ಸರಿಯಾದ ಸಮಯಕ್ಕೆ ಮುಟ್ಟು(Periods) ಬಾರದಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒತ್ತಡ, ಬದಲಾದ ಜೀವನಶೈಲಿಯು ಮುಟ್ಟನ್ನು ತಿಂಗಳಿಗೆ ಸರಿಯಾಗಿ ಹೊಂದುವಲ್ಲಿ ಕಷ್ಟವನ್ನು ತಂದೊಡ್ಡುತ್ತದೆ. ಕೆಲವರಿಗೆ ಒಂದು ವಾರ ತಡವಾಡಗಿ, ಕೆಲವರಿಗೆ ಹದಿನೈದು ದಿನ ಕೆಲವರಿಗೆ ಒಂದು ತಿಂಗಳು ತಡವಾಗಿ ಮುಟ್ಟಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ, 30 ಶೇಕಡದಷ್ಟು ಮಹಿಳೆಯರು ಅನಿಯಮಿತ ಮುಟ್ಟಿನ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ.

ಅನಿಯಮಿತ ಮುಟ್ಟಿನಿಂದಾಗಿ ಹಾರ್ಮೋನ್​ಗಳ ಬದಲಾವಣೆ, ಬೊಜ್ಜು, ತೂಕ ಇಳಿಕೆ, ತೂಕ ಹೆಚ್ಚಳ, ಥೈರಾಯ್ಡ್​ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತವೆ. ಸಾಮಾನ್ಯ ಮುಟ್ಟಿನ ಚಕ್ರವು 28 ದಿನಗಳಾಗಿದ್ದು ಇದರಲ್ಲಿ ಕೊಂಚ ವೈಪರೀತ್ಯಗಳು ಉಂಟಾಗುತ್ತಿರುತ್ತದೆ.

ಮುಟ್ಟಿನ ದಿನಗಳು ವಿಳಂಬವಾಗುವುದಕ್ಕೆ ಹಲವಾರು ಕಾರಣಗಳಿರಬಹುದು.

ಆಯುರ್ವೇದ ಗಿಡಮೂಲಿಕೆಗಳಿಂದ ಪರಿಹಾರ -ಶತಾವರಿ ಪುಡಿಯನ್ನು ಹಾಲಿಗೆ ಹಾಕಿ ಸಕ್ಕರೆ ಅಥವಾ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.

-ದಾಸವಾಳದಲ್ಲಿ ಸಾಕಷ್ಟು ಶಕ್ತಿ ಇದ್ದು, ದಿನಕ್ಕೆ ಎರಡು ಬಾರಿ ದಾಸವಾಳ ಚಹಾವನ್ನು ಕುಡಿಯಬಹುದು ಹಾಗೆಯೇ ಎರಡರಿಂದ ಮೂರು ದಾಸವಾಳದ ಹೂವುಗಳನ್ನು ಫ್ರೈ ಮಾಡಿ ತುಪ್ಪದೊಂದಿಗೆ ಬಿಸಿ ಹಾಲಿನೊಂದಿಗೆ ಸೇವಿಸಿಬೇಕು.

-ಕಪ್ಪು ಸಾಸಿವೆಯನ್ನು ಬೆಲ್ಲದ ಜತೆ ಸೇವಿಸುವುದರಿಂದ ಹಾರ್ಮೋನ್ ಸಮತೋಲನಗೊಳ್ಳುತ್ತದೆ.

-ಅಲೋವೆರಾವು ಉತ್ತಮ ಪರಿಹಾರವಾಗಿದೆ, ಅಲೋವರೆ ಜೆಲ್​ ಅನ್ನು ಜೇನುತುಪ್ಪದೊಂದಿಗೆ ಹಸಿಹೊಟ್ಟೆಯಲ್ಲಿ ಸೇವಿಸಬೇಕು.

-ಪಪ್ಪಾಯ ಹಾಗೂ ಪೈನಾಪಲ್ ಹಣ್ಣುಗಳನ್ನು ಸೇವಿಸಬೇಕು

ಆಯುರ್ವೇದದಲ್ಲಿ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಹಲವಾರು ಗಿಡಮೂಲಿಕೆಗಳಿದ್ದು ಮುಟ್ಟಿನ್ನು ವಿಳಂಬ ಮಾಡುವ ಅಂಶಗಳನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಪಾರ್ಸ್ಲಿ ಮತ್ತು ಎಳ್ಳೆಣ್ಣೆಯನ್ನು ಬಳಸಿ ಕೆಳಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಕೂಡ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಪಾರ್ಸ್ಲಿ ಬೀಜವನ್ನು ಅರೆದು ಅದಕ್ಕೆ ಸ್ವಲ್ಪ ನೀರನ್ನು ಹಾಕಿ. ಇದಕ್ಕೆ ಹಾಲನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿತ್ಯವೂ ಇದನ್ನು ಸೇವಿಸಿ. ಮುಟ್ಟಿನ ದಿನಗಳ ವಿಳಂಬ ಸಮಸ್ಯೆಯನ್ನು ದೂರಮಾಡಲು ಆಯುರ್ವೇದದಲ್ಲಿ ಇದಕ್ಕೆ ಉತ್ತಮ ಸ್ಥಾನವಿದೆ.

ಸೂಚನೆ: ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಹಾಗೂ ಮನೆಮದ್ದು ಆಧರಿತ ಲೇಖನವಾಗಿದೆ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?