ಮಹಿಳೆಯರು ಈ 5 ಆರೋಗ್ಯ ಸಮಸ್ಯೆಗಳನ್ನು ಎಂದೂ ನಿರ್ಲಕ್ಷಿಸಬೇಡಿ

ವಯಸ್ಸು ಕಳೆದಂತೆ ಮಹಿಳೆಯರಿಗೆ ಅನೇಕ ಆರೋಗ್ಯ ಸಮಸ್ಯೆಗಳು(Health Problems)ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಡಯಟ್ ಹಾಗೂ ಉತ್ತಮ ಜೀವನಶೈಲಿಯಿಂದ ದೂರವಿಡಬಹುದಾಗಿದೆ. ಆದರೂ ಕೆಲವು ಸಮಸ್ಯೆಗಳು ವಯಸ್ಸಿಗನುಗುಣವಾಗಿ ನಿಮ್ಮನ್ನು ಕಾಡುತ್ತದೆ. ಸಾಮಾನ್ಯವಾಗಿ 50 ರಿಂದ 60 ವರ್ಷದ ಮಹಿಳೆಯರಿಗೆ ಕಾಡುವ ಹಲವು ಸಮಸ್ಯೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಮಹಿಳೆಯರು ಈ 5 ಆರೋಗ್ಯ ಸಮಸ್ಯೆಗಳನ್ನು ಎಂದೂ ನಿರ್ಲಕ್ಷಿಸಬೇಡಿ
ಆರೋಗ್ಯ ಸಮಸ್ಯೆಗಳು
Follow us
TV9 Web
| Updated By: ನಯನಾ ರಾಜೀವ್

Updated on: May 09, 2022 | 12:15 PM

ವಯಸ್ಸು ಕಳೆದಂತೆ ಮಹಿಳೆಯರಿಗೆ ಅನೇಕ ಆರೋಗ್ಯ ಸಮಸ್ಯೆಗಳು(Health Problems)ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಡಯಟ್ ಹಾಗೂ ಉತ್ತಮ ಜೀವನಶೈಲಿಯಿಂದ ದೂರವಿಡಬಹುದಾಗಿದೆ. ಆದರೂ ಕೆಲವು ಸಮಸ್ಯೆಗಳು ವಯಸ್ಸಿಗನುಗುಣವಾಗಿ ನಿಮ್ಮನ್ನು ಕಾಡುತ್ತದೆ. ಸಾಮಾನ್ಯವಾಗಿ 50 ರಿಂದ 60 ವರ್ಷದ ಮಹಿಳೆಯರಿಗೆ ಕಾಡುವ ಹಲವು ಸಮಸ್ಯೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಹದಿಹರೆಯದವಳಾಗುವುದು, ಪ್ರಜನನ ಹಾಗೂ ಋತುಚಕ್ರಬಂಧ ಹೀಗೆ ಹಲವು ಹಂತಗಳನ್ನು ಹಾದು ಬರುತ್ತಾಳೆ. ಈ ಸ್ಥಿತ್ಯಂತರಗಳಲ್ಲಿ ಆಕೆಯ ದೇಹವು ಹಲವು ಏಳು ಬೀಳುಗಳನ್ನು ಕಾಣುತ್ತದೆ. ಆದ್ದರಿಂದ ಮಹಿಳೆಯರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಮುಟ್ಟು ನಿಲ್ಲುವ ಸಮಯ: ಸುಮಾರು 45 ರಿಂದ 50 ವರ್ಷದ ಮಹಿಳೆಯರನ್ನು ಸಾಕಷ್ಟು ಅನಾರೋಗ್ಯ ಕಾಡುತ್ತದೆ, ಮಹಿಳೆರಿಗೆ ಮುಟ್ಟು ನಿಲ್ಲುವುದು ಅಥವಾ ಮುಟ್ಟು ಆಗುತ್ತಿರುವ ಕೊನೆಯ ಹಂತದಲ್ಲಿ ವಿವಿಧ ಸಮಸ್ಯೆಗಳಿರುತ್ತವೆ. ರಾತ್ರಿ ಬೆವರುವುದು, ಯಾವುದೇ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದಿರುವುದು, ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.

ಸ್ತನದ ಕ್ಯಾನ್ಸರ್: ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸ್ತನದ ಕ್ಯಾನ್ಸರ್, ಗರ್ಣಕೋಶದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಸೇರಿದಂತೆ ಹಲವು ಸಮಸ್ಯೆಗಳನ್ನು ಮಹಿಳೆಯರು

ಥೈರಾಯ್ಡ್: ತೀವ್ರ ಆಯಾಸ, ಕೂದಲು ಉದುರುವುದು, ಅನಿಯಮಿತ ಮುಟ್ಟು ಸಮಸ್ಯೆ ಕಾಡುತ್ತಿದ್ದರೆ ಅಥವಾ ನಡುಕ, ಆತಂಕ, ಬೆವರು ಮತ್ತು ಹಸಿವನ್ನು ಅನುಭವಿಸುತ್ತಿದ್ದರೆ ಇವುಗಳಲ್ಲಿ ಕೆಲವು ಎಲ್ಲರಲ್ಲೂ ಸಾಮಾನ್ಯವಾಗಿದ್ದರೆ, ಮತ್ತೆ ವಯಸ್ಸಾದ ಜನರು ಇದನ್ನು ಅನುಭವಿಸಬಹುದು ಹೌದು, ಥೈರಾಯ್ಡ್ ಗ್ರಂಥಿಯು ಒಂದು ಪ್ರಮುಖ ಹಾರ್ಮೋನ್ ನಿಯಂತ್ರಕವಾಗಿದೆ, ಆದರೆ ವಿಶೇಷವಾಗಿ ಮಹಿಳೆಯರಲ್ಲಿ ಈ ಗ್ರಂಥಿಗೆ ತೊಂದರೆಯಾದರೆ ನಂಬಲು ಅಸಾಧ್ಯವಾದಷ್ಟು ಸಮಸ್ಯೆ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ವಿಶ್ವಾದ್ಯಂತ 8 ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಸಾಮಾನ್ಯವಾಗಿದ್ದು, ಥೈರಾಯ್ಡ್ ಸಮಸ್ಯೆ ಇರುವ 60% ಮಹಿಳೆಯರಿಗೆ ರೋಗಲಕ್ಷಣಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿರುವುದಿಲ್ಲ ಎಂದು ವರದಿಯಾಗಿದೆ. ​

ಥೈರಾಯ್ಡ್ ಹತೋಟಿಯಲ್ಲಿಡುವುದು ಬಹಳ ಮುಖ್ಯ ಥೈರಾಯ್ಡ್ ಅಂಗ ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಒಂದು ಚಿಟ್ಟೆ ಆಕಾರದ ಅಂಗವಾಗಿದ್ದು, ಟ್ರೈಯೊಡೋಥೈರೋನೈನ್ (T3) ಮತ್ತು ಥೈರಾಕ್ಸಿನ್ (T4) ನ ಪ್ರಮುಖ ಹಾರ್ಮೋನುಗಳ ಉತ್ಪಾದನೆಗೆ ಕಾರಣವಾಗಿದೆ. ಇದು ತೂಕ ನಷ್ಟ, ಚಯಾಪಚಯ, ಚರ್ಮ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಥವಾ ನಿಮ್ಮ ದೇಹದ ಉಷ್ಣತೆಯ ಮೇಲೆ ಪರಿಣಾಮ ಬೀರುವಂತಹ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಉತ್ತೇಜಿಸುವ ಹಾರ್ಮೋನ್ (TSH) ಮತ್ತೊಂದು ಪ್ರಮುಖ ಹಾರ್ಮೋನ್ ಆಗಿದ್ದು, ಇದು T3 ಮತ್ತು T4 ಮಟ್ಟಗಳನ್ನು ಹೆಚ್ಚು ಉತ್ಪಾದಿಸಲು ಥೈರಾಯ್ಡ್ ಗೆ ಮತ್ತಷ್ಟು ಸೂಚನೆ ನೀಡುತ್ತದೆ. ಹೀಗಾಗಿ, ಈ ಪ್ರಮುಖ ಹಾರ್ಮೋನುಗಳ ಉಲ್ಬಣ ಅಥವಾ ಇಳಿಕೆಗೆ ಸಂಬಂಧಿಸಿದ ಯಾವುದೇ ಅತಿಯಾದ ಕ್ರಿಯೆ ಥೈರಾಯ್ಡ್ ಅಸ್ವಸ್ಥತೆಗೆ ಕಾರಣವಾಗಬಹುದು.

ರಕ್ತದೊತ್ತಡ: 35 ವರ್ಷಕ್ಕೂ ಹೆಚ್ಚು ವಯಸ್ಸಿನ ಮಹಿಳೆಯರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇವು ರಕ್ತನಾಳವನ್ನು ದುರ್ಬಲವಾಗಿಸುತ್ತದೆ. ಹೃದಯ, ಮೆದುಳು ಸೇರಿದಂತೆ ಇತರೆ ಅಂಗಗಳಿಗೂ ಹಾನಿ ಮಾಡುತ್ತದೆ ಹೀಗಾಗಿ ರಕ್ತದೊತ್ತಡವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.

ಮಧುಮೇಹ: ಸಾಮಾನ್ಯವಾಗಿ ಟೈಪ್ 2 ಮಧುಮೇಹಿಗಳು ದೇಹದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಬೇಕಾಗುತ್ತದೆ. ಹಾಗೆಯೇ ಮಧುಮೇಹವನ್ನು ನಿಯಂತ್ರಿಸಬಲ್ಲ ಆಹಾರಗಳಲ್ಲೇ ಸ್ವೀಕರಿಸಬೇಕಾಗುತ್ತದೆ. ಬೇಳೆಕಾಳುಗಳು, ಹಣ್ಣು ಹಾಗೂ ತರಕಾರಿಗಳು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತವೆ. ಸಕ್ಕರೆ ಹಾಕದ ಟೀ ಹಾಗೂ ಕಾಫಿಯನ್ನು ಕುಡಿಯುವುದು ಒಳಿತು. ಹಾಗೆಯೇ ಯಾವುದೇ ಪಾನೀಯಗಳನ್ನು ಕುಡಿಯುವುದಾದರೂ ಸಕ್ಕರೆಯನ್ನು ಬೆರೆಸಬೇಡಿ.

ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್