ಪ್ರಿಡ್ಜ್ನಲ್ಲಿಟ್ಟ ನೀರನ್ನು ಕುಡಿಯುತ್ತೀರಾ? ಈ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಚ್ಚರ
ದೇಹಕ್ಕೆ ಬೇಕಾದಷ್ಟು ನೀರಿನ ಸೇವನೆ ಮಾಡುವುದು ಒಳಿತು. ಆದರೆ ಯಾವ ರೀತಿಯ ನೀರಿನ್ನು ಕುಡಿಯುತ್ತೀರಾ ಎನ್ನುವುದು ಮುಖ್ಯ. ಪ್ರಿಡ್ಜ್ನಲ್ಲಿಟ್ಟ ನೀರಿನ ಸೇವನೆ ಮಾಡಿದರೆ ಅನಾರೋಗ್ಯ ಕಾಡಬಹುದು. ಇಲ್ಲಿದೆ ನೋಡಿ ಮಾಹಿತಿ.
ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದೆ. ಬೆವರು, ಸೆಕೆ ದೇಹಕ್ಕೆ ಹಿಂಸೆ ನೀಡುತ್ತವೆ. ಹೀಗಾಗಿ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಲು ಹೆಚ್ಚು ನೀರನ್ನು (Water) ಸೇವಿಸುವ ಅಗತ್ಯವಿದೆ. ನೀರು ಕುಡಿದಷ್ಟು ದೇಹ ನಿರ್ಜಲೀಕರಣವಾಗುವುದನ್ನು ತಡೆಯಬಹದು. ಬೇಸಿಗೆಯಲ್ಲಿ ನೀರಿನ ದಾಹ ಹೆಚ್ಚು ಏನಾದರೂ ತಂಪು ಕುಡಿದರೆ ಸಾಕಪ್ಪಾ ಎನ್ನುವ ಸ್ಥಿತಿ ಇರುತ್ತದೆ. ಕೆಲವರಿಗಂತೂ ಪ್ರಿಡ್ಜ್ನಲ್ಲಿಟ್ಟ ತಣ್ಣನೆಯ ನೀರೇ (Cold Water) ಆಗಬೇಕು. ಇನ್ನೂ ಕೆಲವರಿರುತ್ತಾರೆ, ಕಾಲ ಯಾವುದೇ ಇರಲಿ ಅವರಿಗೆ ಪ್ರಿಡ್ಜ್ನಲ್ಲಿಟ್ಟ ನೀರೇ ಆಗಬೇಕು. ಇದರಿಂದ ದೇಹಕ್ಕೆ ಆಕ್ಷಣಕ್ಕೆ ತಂಪು ಸಿಗುತ್ತದೆ. ಆದರೆ ಆರೋಗ್ಯಕ್ಕೆ ಪ್ರಿಡ್ಜ್ ನೀರು (Fridge Water) ಒಳ್ಳೆಯದಲ್ಲ ಎನ್ನುವುದು ಹಲವರಿಗೆ ತಿಳಿದಿಲ್ಲ. ನಿರಂತರ ಪ್ರಿಡ್ಜ್ ನೀರಿನ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾದರೆ ಪ್ರಿಡ್ಜ್ನಲ್ಲಿಟ್ಟ ನೀರಿನ ಸೇವನೆಯಿಂದ ಯಾವೆಲ್ಲಾ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ
ಗಂಟಲು ನೋವು: ತಣ್ಣನೆಯ ನೀರಿನ ಸೇವನೆಯಿಂದ ಗಂಟಲಿನ ಸೋಂಕು ಅಥವಾ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರಂತೂ ಗಂಟಲು ನೋವು ಕಟ್ಟಿಟ್ಟಬುತ್ತಿ ಎನ್ನಬಹುದು. ತಣ್ಣನೆಯ ನೀರು ಕುಡಿಯುವುರಿಂದ ಗಂಟಲಿನಲ್ಲಿ ಲೋಳೆಯಂತಹ ಪದಾರ್ಥವನ್ನು ಹೆಚ್ಚು ಉತ್ಪತ್ತಿ ಮಾಡುತ್ತದೆ. ಇದರಿಂದ ನೋವು ಅಥವಾ ಸೋಂಕಿನ ಸಮಸ್ಯೆ ಕಾಡುತ್ತದೆ.
ಹಲ್ಲಿನ ಸಮಸ್ಯೆ: ಪ್ರಿಡ್ಜ್ ನಿರಿನ ಸೇವನೆಯಿಂದ ಹಲ್ಲಿನ ನೋವು ಕಾಣಿಸಿಕೊಳ್ಳುತ್ತದೆ. ತಣ್ಣನೆಯ ಪದಾರ್ಥ ತಾಗಿ ಹಲ್ಲಿನ ನರಗಳಿಗೆ ಹಾನಿಯಾಗಿ ಸೆನ್ಸಿಟಿವ್ ಸಮಸ್ಯೆ ಕಾಣಸಿಕೊಳ್ಳುತ್ತದೆ. ಹುಳುಕು ಹಲ್ಲಿನ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಅತಿ ತಣ್ಣನೆಯ ನೀರಿನ ಅಥವಾ ಪದಾರ್ಥದ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.
ತಲೆನೋವು: ಪ್ರಿಡ್ಜ್ ನೀರಿನ ಸೇವನೆಯಿಂದ ತಲೆನೋವು ಆರಂಭವಾಗುತ್ತದೆ. ನರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ತಣ್ಣನೆಯ ಪದಾರ್ಥ ಮೆದುಳಿಗೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ನಿರಂತರ ಪ್ರಿಡ್ಜ್ನಲ್ಲಿಟ್ಟ ನೀರಿನ ಸೇವನೆ ಒಳ್ಳೆಯದಲ್ಲ.
ಮಲಬದ್ಧತೆ: ಕೋಲ್ಡ್ ವಾಟರ್ ಸೇವನೆಯಿಂದ ಮಲಬದ್ಧತೆ ಉಂಟಾಗುತ್ತದೆ. ಏಕೆಂದರೆ ಪ್ರಿಡ್ಜ್ ನೀರು ಕೇವಲ ತಂಪಿನ ಅನುಭವ ನೀಡುತ್ತದೆ ಅಷ್ಟೆ. ಹೊರತಾಗಿ ಅದರಲ್ಲಿ ಯಾವ ಮಿನರಲ್ಸ್ಗಳೂ ಇರುವುದಿಲ್ಲ. ಅಲ್ಲದೆ ಜೀರ್ಣಶಕ್ತಿಯನ್ನು ಚುರುಕುಗೊಳಿಸುವ ಗುಣವನ್ನು ಹೊಂದಿರುವುದಿಲ್ಲ. ಹೀಗಾಗಿ ಮಲಬದ್ಧತೆಯನ್ನು ಉಂಟು ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಕೊರತೆ: ಪ್ರಿಡ್ಜ್ ನೀರಿನ ಸೇವೆನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ನೈಸರ್ಗಿಕ ನೀರಿನಲ್ಲಿರು ಯಾವ ಸತ್ವೂ ಇರದ ಕಾರಣ ನೀರು ಕುಡಿದರೂ ಯಾವುದೇ ಪ್ರಯೋಜನವಾಗದು ಆದ್ದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಜೀರ್ಣಕ್ರಿಯೆಯ ಸಮಯದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆಯನ್ನು ತಡೆಯುತ್ತದೆ. ಅವರ ದೇಹದ ಉಷ್ಣತೆ ಮತ್ತು ತೇವಾಂಶವನ್ನು ನಿಯಂತ್ರಿಸಲು ಪ್ರಯತ್ನಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ.
ಇದನ್ನೂ ಓದಿ:
Health Tips: ಶೀತ, ಕೆಮ್ಮಿಗೆ ವೀಳ್ಯದೆಲೆ ಮನೆಮದ್ದು
Published On - 12:00 pm, Sun, 20 March 22