AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ovarian Cancer: ಈ ಲಕ್ಷಣಗಳಿವೆಯಾ? ಅಂಡಾಶಯ ಕ್ಯಾನ್ಸರ್ ಕೂಡಾ ಆಗಿರಬಹುದು

ಕ್ಯಾನ್ಸರ್ ಎಂಬುದು ಅಪಾಯಕಾರಿ ರೋಗವಾಗಿದ್ದು, ಕಳೆದ ಐದಾರು ವರ್ಷಗಳಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿದೆ. ಹಲವು ರೀತಿಯ ಕ್ಯಾನ್ಸರ್​ಗಳಿವೆ ಅದರಲ್ಲಿ ಅಂಡಾಶಯ ಕ್ಯಾನ್ಸರ್(Ovarian Cancer) ಕೂಡ ಒಂದು

Ovarian Cancer: ಈ ಲಕ್ಷಣಗಳಿವೆಯಾ? ಅಂಡಾಶಯ ಕ್ಯಾನ್ಸರ್ ಕೂಡಾ ಆಗಿರಬಹುದು
ಅಂಡಾಶಯ ಕ್ಯಾನ್ಸರ್​
TV9 Web
| Updated By: ನಯನಾ ರಾಜೀವ್|

Updated on: May 09, 2022 | 2:48 PM

Share

ಕ್ಯಾನ್ಸರ್ (Cancer)ಎಂಬುದು ಅಪಾಯಕಾರಿ ರೋಗವಾಗಿದ್ದು, ಕಳೆದ ಐದಾರು ವರ್ಷಗಳಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿದೆ. ಹಲವು ರೀತಿಯ ಕ್ಯಾನ್ಸರ್​ಗಳಿವೆ ಅದರಲ್ಲಿ ಅಂಡಾಶಯ ಕ್ಯಾನ್ಸರ್(Ovarian Cancer) ಕೂಡ ಒಂದು, ಮಹಿಳೆಯರು ನಿರ್ಲಕ್ಷಿಸುವ ಅಂಡಾಶಯ ಕ್ಯಾನ್ಸರ್​ನ್ನು ಮೊದಲೇ ಪತ್ತೆ ಹಚ್ಚಬಹುದು ಆದರೆ ಲಕ್ಷಣಗಳು ಮೊದ ಮೊದಲು ಸಣ್ಣ ಪ್ರಮಾಣದಲ್ಲಿರುವುದರಿಂದ ಸಾಕಷ್ಟು ಮಂದಿ ನಿರ್ಲಕ್ಷಿಸಿ ಅಪಾಯವನ್ನು ತಂದುಕೊಳ್ಳುತ್ತಾರೆ.

ಅಂಡಾಶಯದ ಕ್ಯಾನ್ಸರ್ ಕುರಿತು ನಡೆಸಿದ ಸಮೀಕ್ಷೆಯೊಂದರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಮಹಿಳೆಯರು ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಹೊಟ್ಟೆ ತುಂಬಿದ ಭಾವನೆ ಅಥವಾ ಆಗಾಗ ಶೌಚಾಲಯಕ್ಕೆ ಹೋಗುವಂತಹ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ ಎಂಬುದು ತಿಳಿದುಬಂದಿದೆ.

ಜಾಗೃತಿಯ ಕೊರತೆ: ಮಹಿಳೆಯರಿ ಅಂಡಾಶಯ ಕ್ಯಾನ್ಸರ್ ಕುರಿತು ಜಾಗೃತಿಯ ಕೊರತೆ ಇದೆ. ಮುಖ್ಯ ಪ್ರತಿಯೊಬ್ಬರೂ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರಲ್ಲಿ ಈ ರೋಗಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಗಳು ಸರ್ಕಾರದಿಂದ ಇನ್ನಷ್ಟು ನಡೆಯಬೇಕಿದೆ.

ರೋಗವನ್ನು ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯಬಹುದು: ಕಡಿಮೆ ಜನರಿಗೆ ತುರ್ತು ಹಂತದ ಚಿಕಿತ್ಸೆ ಅಗತ್ಯವಿರುತ್ತದೆ ಮತ್ತು ಮುಖ್ಯವಾಗಿ ಅಂಡಾಶಯದ ಕ್ಯಾನ್ಸರ್ ನಿಂದ ಸಾಯುವ ಮಹಿಳೆಯರು ಕಡಿಮೆ. ಅಂಡಾಶಯ ಕ್ಯಾನ್ಸರ್ (Ovarian Cancer) ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ರೀತಿ ಮಾಡಿದರೆ ರೋಗ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ,

ಕೆಲವು ಸಮಸ್ಯೆಗಳು ಕ್ಯಾನ್ಸರ್​ಗೆ ಕಾರಣವಾಗಬಹುದು: 1,000 ಮಂದಿ ಮಹಿಳೆಯರ ಸಮೀಕ್ಷೆ ನಡೆಸಲಾಗಿದ್ದು, ಐದರಲ್ಲಿ ಒಬ್ಬರಿಗೆ ಮಾತ್ರ (ಶೇ.21) ಊತವು ಗಡ್ಡೆಯ ಸಂಭವನೀಯ ಚಿಹ್ನೆ ಎಂದು ತಿಳಿದಿದೆ ಎಂದು ಕಂಡುಹಿಡಿದಿದೆ. ಮೂರನೇ ಎರಡರಷ್ಟು (ಶೇ.68) ಜನರಿಗೆ ಹೊಟ್ಟೆ ನೋವು ಒಂದು ಚಿಹ್ನೆ ಎಂದು ತಿಳಿದಿರಲಿಲ್ಲ. 97 ಪ್ರತಿಶತದಷ್ಟು ಜನರಲ್ಲಿ ಯಾವಾಗಲೂ ಹೊಟ್ಟೆ ತುಂಬಿರುವ ಭಾವನೆಯು ಅಂಡಾಶಯದ ಕ್ಯಾನ್ಸರ್​ನ ಪ್ರಮುಖ ಲಕ್ಷಣವಾಗಿದೆ ಎಂದು ತಿಳಿದಿರಲಿಲ್ಲ. ಶೇ.99ರಷ್ಟು ಮಂದಿಗೆ ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆಯ ಲಕ್ಷಣವನ್ನು ನಿರ್ಲಕ್ಷಿಸುತ್ತಾರೆ. ಇವೆಲ್ಲವೂ ಕ್ಯಾನ್ಸರ್​ನ ಎಚ್ಚರಿಕೆಯ ಗಂಟೆ ಎಂದೇ ಹೇಳಬಹುದು. ಮಲಬದ್ಧತೆ ಕೂಡ ಅಂಡಾಶಯ ಕ್ಯಾನ್ಸರ್​ನ ಲಕ್ಷಣವಿರಬಹುದು: ಮಲಬದ್ಧತೆಯು ಕೂಡ ಅಂಡಾಶಯ ಕ್ಯಾನ್ಸರ್​ನ ಲಕ್ಷಣವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ, ಹೀಗಾಗಿ ಇಂತಹ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೂ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ