Weight loss tips: ನಿಮ್ಮ ತೂಕ ಹೆಚ್ಚಾಗುತ್ತಿದೆಯೇ? ಹಾಗಾದರೆ 10 ನಿಮಿಷ ಈ ಹೋಮ್ ವರ್ಕೌಟ್ ಮಾಡಿ

ಒಂದು ದಿನದಲ್ಲಿ ಸಣ್ಣ ದೈಹಿಕ ಚಟುವಟಿಕೆಯು ಆತಂಕ, ತೂಕ ಹೆಚ್ಚಾಗುವುದು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಉಪಯುಕ್ತವಾದ ಅನೇಕ ಪ್ರಯೋಜನಗಳನ್ನು ಉಂಟು ಮಾಡುತ್ತದೆ. ಜೊತೆಗೆ ನರ ಮಂಡಲದ ರಕ್ತ ಪರಿಚಲನೆ ಸುಧಾರಿಸುತ್ತದೆ, ಉತ್ತಮ ನಿದ್ರೆಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂಬುವುದನ್ನು ಕಂಡು ಹಿಡಿದಿದೆ.

Weight loss tips: ನಿಮ್ಮ ತೂಕ ಹೆಚ್ಚಾಗುತ್ತಿದೆಯೇ? ಹಾಗಾದರೆ 10 ನಿಮಿಷ ಈ ಹೋಮ್ ವರ್ಕೌಟ್ ಮಾಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2022 | 7:52 AM

ವರ್ಕೌಟ್ ಅವಧಿಗಳಿಗಾಗಿ ಸಮಯವನ್ನು ವಿನಿಯೋಗಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ಚುರುಕಾದ ನಡಿಗೆ, ಮೆಟ್ಟಿಲು ಹತ್ತುವುದು, ಜಂಪಿಂಗ್ ಮತ್ತು 8 ರಿಂದ 10 ನಿಮಿಷಗಳ ವ್ಯಾಯಮ ಮತ್ತು ಇತರ ಚಟುವಟಿಕೆಗಳಿಂದ ಧನಾತ್ಮಕ ಫಲಿತಾಂಶಗಳನ್ನು ಅನುಭವಿಸಬಹುದು. ವಯಸ್ಕರರಲ್ಲಿ ಹೆಚ್ಚುತ್ತಿರುವ ಜಡ ಜೀವನ ಶೈಲಿಯಿಂದ ಹರಡುವ ಹಾನಿಕಾರಕ ಪರಿಣಾಮಗಳು ಪ್ರಪಂಚದಾದ್ಯಂತ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ. ದೈಹಿಕ ಚಟುವಟಿಕೆಯ ಅಗತ್ಯವನ್ನು ನವೀಕೃತ ಪ್ರಾಮುಖ್ಯತೆಗಳೊಂದಿಗೆ ಗುರುತಿಸಲಾಗಿದೆ ಹಾಗೂ ಜಾಗತಿಕವಾಗಿ ಒತ್ತಿ ಹೇಳಲಾಗುತ್ತಿದೆ. ಇತ್ತೀಚಿನ ಸಂಶೋಧನೆಯು ಒಂದು ದಿನದಲ್ಲಿ ಸಣ್ಣ ದೈಹಿಕ ಚಟುವಟಿಕೆಯು ಆತಂಕ, ತೂಕ ಹೆಚ್ಚಾಗುವುದು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಉಪಯುಕ್ತವಾದ ಅನೇಕ ಪ್ರಯೋಜನಗಳನ್ನು ಉಂಟು ಮಾಡುತ್ತದೆ. ಜೊತೆಗೆ ನರ ಮಂಡಲದ ರಕ್ತ ಪರಿಚಲನೆ ಸುಧಾರಿಸುತ್ತದೆ, ಉತ್ತಮ ನಿದ್ರೆಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂಬುವುದನ್ನು ಕಂಡು ಹಿಡಿದಿದೆ. ಚುರುಕಾದ ನಡಿಗೆ, ಮೆಟ್ಟಿಲು ಹತ್ತುವುದು, ಸ್ಕಿಪ್ಪಿಂಗ್ ಮತ್ತು 8-10 ನಿಮಿಷಗಳ ಇತರ ವ್ಯಾಯಾಮವು ದೇಹಕ್ಕೆ ಧನಾತಕ ಫಲಿತಾಂಶವನ್ನು ಒದಗಿಸುತ್ತದೆ.

ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯ ಮತ್ತು ದಿನಕ್ಕೆ ಮೂರರಿಂದ ಎಂಟು ನಿಮಿಷಗಳ ವ್ಯಾಯಾಮವು ಹೃದಯನಾಳಗಳ ಆರೋಗ್ಯ, ರಕ್ತದಲ್ಲಿ ಸಕ್ಕರೆ ಮಟ್ಟ ಹಾಗೂ ಒತ್ತಡವನ್ನು ಸುಧಾರಿಸುತ್ತದೆ ಎಂದು ಒಂಟಾರಿಯೊದ ಮ್ಯಾಕ್‌ಮಾಸ್ಟರ್ ವಿಶ್ವವಿದ್ಯಾನಿಲಯದ ಕಿನಿಸಿಯಾಲಜಿ ಪ್ರಾಧ್ಯಪಕ ಮಾರ್ಟಿನ್ ಗಿಬಾಲಾ 2022ರಲ್ಲಿ ನಡೆಸಿದ ಅಧ್ಯಯನದಲ್ಲಿ ಹೇಳಿದ್ದಾರೆ. ಅದೇ ರೀತಿ ವಯಸ್ಕರರು ಅರೋಗ್ಯವಾಗಿರಲು ವಾರಕ್ಕೆ 150 ನಿಮಿಷಗಳ ಮಧ್ಯಮ ವ್ಯಾಯಮ ಅಥವಾ 75 ನಿಮಿಷಗಳ ತೀವ್ರವಾದ ಏರೋಬಿಕ್ಸ್ ಚಟುವಟಿಕೆಗಳನ್ನು ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸುತ್ತದೆ.

ಇದಲ್ಲದೆ ಅಕ್ಟೋಬರ್‌ನಲ್ಲಿ ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಒಂದು ಮಾರದಲ್ಲಿ 15 ರಿಂದ 20 ನಿಮಿಷಗಳ ವ್ಯಾಯಮವನ್ನು ಅಳವಡಿಸಿಕೊಳ್ಳುವುದು ವಯಸ್ಕರರಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಇದು ದೀರ್ಘ ಹಾಗೂ ಆರೋಗ್ಯಕರ ಜೀವಿತಾವಧಿಗೆ ಕಾರಣವಾಗುತ್ತದೆ ಎಂದು ಹೇಳಿದೆ.

ಇದನ್ನು ಓದಿ:ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ

ದಿನಕ್ಕೆ 10 ನಿಮಿಷಗಳ ಕಾಲ ನಡೆಯುವ ಸರಳ ಕ್ರಿಯೆಯು ವ್ಯಕ್ತಿಗೆ ಸಾಕಷ್ಟು ಶಕ್ತಿಯನ್ನು ಪೂರೈಸುತ್ತದೆ. ಮತ್ತು ಅವರು ತಮಗಾಗಿ ಸಮಯ ಕಳೆಯಲು ಅನುವು ಮಾಡಿ ಕೊಡುತ್ತದೆ. ಅರಿವಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ನೈಸರ್ಗಿ ಬೆಳಕನ್ನು ಸಂಗ್ರಹಿಸುತ್ತದೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ. ವಾಕಿಂಗ್ ಜನರು ತಮ್ಮ ಆರೋಗ್ಯವನ್ನು ಸುಧಾರಿಸಲು ತೆಗೆದುಕೊಳ್ಳಬಹುದಾದ ಸುಲಭ, ಸರಳ ಹಾಗೂ ಹೆಚ್ಚು ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಿದೆ.

ಹೆಚ್ಚಿನ ಫಿಟ್ನೆಸ್ ಆಪ್ಲಿಕೇಶನ್‌ಗಳು ಜನರಿಗೆ ತಮ್ಮ ಮನೆಯಿಂದಲೇ ಆರೋಗ್ಯಕರ ವ್ಯಾಯಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಿದೆ. ಯಾರು ಬೇಕಾದರೂ ಪ್ರಯತ್ನಿಸಬಹುದಾದ 10 ನಿಮಿಷಗಳ ಎರಡು ವ್ಯಾಯಮ ಕ್ರಮ ಇಲ್ಲಿವೆ. ಮತ್ತು ಅದಕ್ಕೆ ಯಾವುದೇ ಸಲಕರಣೆಯ ಅಗತ್ಯವಿಲ್ಲ.

ಸರ್ಕ್ಯೂಟ್ 1: 1, 3, 5, 7, ಮತ್ತು 9 ನಿಮಿಷಗಳಲ್ಲಿ ಮಾಡಲಾಗುತ್ತದೆ

1. 20 ಜಂಪಿಂಗ್ ಜ್ಯಾಕ್‌ಗಳು

2. 10 ಜಂಪ್

3. ಜಂಪ್ ಸ್ಕ್ವಾಟ್​ಗಳು

4. ಬರ್ಪಿಸ್ ವ್ಯಾಯಮ

ಸರ್ಕ್ಯೂಟ್ 2: 2, 4, 6, 8 ಮತ್ತು 10 ನಿಮಿಷಗಳಲ್ಲಿ ಮಾಡಲಾಗುತ್ತದೆ

1. 10 ಸುಮೊ ಸ್ಕ್ವಾಟ್​ಗಳು

2. ಆಲ್ಟರ್ನೇಟಿವ್ ರಿವರ್ಸ್ ಲಂಗ್ಸ್

3. ಭುಜದ ಟ್ಯಾಪ್ಸ್​ಗಳೊಂದಿಗೆ 10 ಪುಷ್‌ಅಪ್‌ಗಳು

ಈ ಸಂಕ್ಷಿಪ್ತ ದಿನಚರಿಗಳು ಹಲವಾರು ಜನರಿಗೆ ತಮ್ಮ ಸಮಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ದೈನಂದಿನ ಜೀವನದಲ್ಲಿ ಸಮತೋಲನವನ್ನು ಕಾಪಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ