lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ
ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನಿಮ್ಮ ಗಮನ ಇಲ್ಲದಿರುವಾಗ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಮಾನಸಿಕ ಆರೋಗ್ಯದ ಮೇಲೆ ಗಮನ ನೀಡಲು ಈ ಕ್ರಮಗಳನ್ನು ಅನುಸರಿಸಿ.
Updated on: Jul 15, 2022 | 7:33 PM

lifestyle

lifestyle

ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸವನ್ನು ಖಂಡಿತವಾಗಿ ಮಾಡಿ ಏಕೆಂದರೆ ನಿಮ್ಮ ಸ್ವಯಂ ಆರೋಗ್ಯವನ್ನು ಕಾಪಾಡಲು ಇದು ಉತ್ತಮವಾಗಿರುತ್ತದೆ. ನಿಮ್ಮ ನಿತ್ಯದ ಕೆಲಸದ ನಂತರ ಕಾಫಿ ಕುಡಿಯುವ ಅಭ್ಯಾಸವನ್ನು ಖಂಡಿತವಾಗಿ ಮಾಡಬೇಕು. ಇದು ನಿಮಗೆ ತುಂಬಾ ಶಕ್ತಿಯುತವಾದ ಮಾನಸಿಕ ಆರೋಗ್ಯವನ್ನು ನೀಡುತ್ತದೆ.

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದರಿಂದ ನಿಮ್ಮ ಮಾನಸಿಕ ಆರೋಗ್ಯದ ಜೊತೆಗೆ ನಿಮ್ಮನ್ನು ನೀವು ಸಂಬಂಧದಲ್ಲಿ ಅಭಿವೃದ್ಧಿ ಮಾಡಿಕೊಳ್ಳಬಹುದು. ಅವರ ಜೊತೆಗೆ ಭಾವನೆಗಳನ್ನು ಮತ್ತು ಯೋಗಕ್ಷೇಮವನ್ನು ಹಂಚಿಕೊಳ್ಳಿ. ನಾವು ವಯಸ್ಸಾದಂತೆ, ವಿಭಕ್ತ ಕುಟುಂಬದ ಹೊರಗಿನ ಸ್ನೇಹ ಮತ್ತು ಸಂಬಂಧಗಳು ಮರೆಯಾಗುತ್ತವೆ. ಹಾಗಾಗಿ ನಿಮ್ಮ ಮನೆಯವರ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿರಬೇಕು.

ಉತ್ತಮ ಮನಸ್ಥಿತಿಯನ್ನು ಹೆಚ್ಚಿಸಲು ಮತ್ತು ಮೆದುಳಿನ ದೇಹದ ಸಂಪರ್ಕವನ್ನು ಸಕ್ರಿಯಗೊಳಿಸಲು ಸ್ಟ್ರೆಚಿಂಗ್ ಉಪಯುಕ್ತವಾಗಿರುತ್ತದೆ. ನಾವು ಪ್ರೌಢಾವಸ್ಥೆಯಲ್ಲಿ ಇರುವ ಕಾರಣ ಆರೋಗ್ಯ, ಶಕ್ತಿ ಮತ್ತು ನಮ್ಯತೆಗಾಗಿ, ವ್ಯಾಯಮ ಅತೀ ಮುಖ್ಯವಾಗಿರುತ್ತದೆ.

ಪೌಷ್ಟಿಕಾಂಶಯುತ ಆಹಾರವನ್ನು ಸೇವನೆ ಮಾಡುವುದು ಉತ್ತಮ. ಇದು ನಿಮಗೆ ತೃಪ್ತಿಯನ್ನು ಉಂಟು ಮಾಡುತ್ತದೆ. ನಿಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತದೆ. ಒಟ್ಟಾರೆ ಇದು ನಿಮ್ಮ ದೇಹದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ನಿಮ್ಮ ಮೆದುಳು 73% ನೀರನ್ನು ಒಳಗೊಂಡಿದೆ. ನಿಮ್ಮ ದೇಹದ ಪರಿಚಲನೆಯನ್ನು ಉತ್ತಮಗೊಳಿಸಲು ಸರಿಯಾಗಿ ನೀರನ್ನು ಸೇವನೆ ಮಾಡಬೇಕು. ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ಇದು ಉತ್ತಮ ಸಲಹೆ. ಪುರುಷರು ದಿನಕ್ಕೆ 15.5 ಕಪ್ (3.7 ಲೀಟರ್) ನೀರನ್ನು ಮತ್ತು ಮಹಿಳೆಯರಿಗೆ ದಿನಕ್ಕೆ 11.5 ಕಪ್ (2.7 ಲೀಟರ್) ನೀರನ್ನು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ.
























