AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Re-Use Pomegranate Peels: ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡಬಹುದೇ? ವೈರಲ್ ವಿಡಿಯೋ ಇಲ್ಲಿದೆ

ಹಣ್ಣು ತಿಂದು ಉಳಿದಿರುವಂತಹ ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇನ್‌ಸ್ಟಾಗ್ರಾಂನಲ್ಲಿ ಅಮೇರಿಕಾ ಮೂಲದ ಜನಪ್ರಿಯ ಕಂಟೆಂಟ್ ಕ್ರಿಯೆಟರ್ ಕಾರ್ಲೀಯವರು ದಾಳಿಂಬೆಯ ಸಿಪ್ಪೆಯನ್ನು ಯಾವ ರೀತಿ ಮರುಬಳಕೆ ಮಾಡಬಹುದು ಎಂಬ ವಿಡಿಯೋ ಹರಿ ಬಿಟ್ಟಿದ್ದಾರೆ.

Re-Use Pomegranate Peels: ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡಬಹುದೇ? ವೈರಲ್ ವಿಡಿಯೋ ಇಲ್ಲಿದೆ
ದಾಳಿಂಬೆ ಸಿಪ್ಪೆಗಳ ಮರುಬಳಕೆ Image Credit source: iStock
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 28, 2022 | 2:36 PM

ಇತ್ತೀಚಿಗೆ ಅಮೇರಿಕಾದ ಕಂಟೆಂಟ್ ಕ್ರಿಯೇಟರ್ ದಾಳಿಂಬೆಯ ಸಿಪ್ಪೆ(Pomegranate Peels)ಯನ್ನು ಸಹ ಅಡುಗೆ ಮನೆಯಲ್ಲಿ ಪರಿಣಾಮಕಾರಿಯಾಗಿ ಮರುಬಳಕೆ(Re-Use) ಮಾಡಬಹುದು ಎಂದು ಬಹಿರಂಗ ಪಡಿಸಿದ್ದಾರೆ. ದಾಳಿಂಬೆ ಅನೇಕ ಪ್ರಯೋಜನಗಳನ್ನು ಹೊಂದಿರುವ ಅದ್ಭುತ ಹಣ್ಣು. ಈ ಹಣ್ಣಿನ ಸಿಪ್ಪೆಯನ್ನು ಅನೇಕ ವಸ್ತುಗಳನ್ನು ತಯಾರಿಸಲು ಮರುಬಳಕೆ ಮಾಡಬಹುದು. ಉಳಿದ ದಾಳಿಂಬೆ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ಎಂಬ ಮಾಹಿತಿ ಇಲ್ಲಿದೆ.ಅಡುಗೆ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಅಡುಗೆಮನೆಯಲ್ಲಿ ಪ್ರತಿಯೊಂದು ಪದಾರ್ಥಗಳನ್ನು ಬಳಸಲು ಇಷ್ಟಪಡುತ್ತಾರೆ. ತರಕಾರಿಯ ಕಾಂಡ, ಹೂವು ಮತ್ತು ಎಲೆಗಳವರೆಗೆ ಯಾವುದೇ ಭಾಗವು ವ್ಯರ್ಥವಾಗದಂತೆ ಸಂಪೂರ್ಣವಾಗಿ ಬಳಕೆ ಮಾಡಲಾಗುತ್ತದೆ.

ಅಮೇರಿಕನ್ ಕಂಟೆಂಟ್ ಕ್ರಿಯೇಟರ್ ದಾಳಿಂಬೆಯ ಸಿಪ್ಪೆಯನ್ನು ಸಹ ಅಡುಗೆ ಮನೆಯಲ್ಲಿ ಪರಿಣಾಮಕಾರಿಯಾಗಿ ಮರುಬಳಕೆ ಮಾಡಬಹುದು ಎಂದು ಬಹಿರಂಗಪಡಿಸಿದ್ದಾರೆ. ದಾಳಿಂಬೆ ಸಿಪ್ಪೆಯನ್ನು ಸುವಾಸನೆಯುಕ್ತ ಮತ್ತು ಆರೋಗ್ಯಕರ ಚಹಾವನ್ನಾಗಿ ಮಾಡಲು ಅವರು ಸರಳವಾದ ಹ್ಯಾಕ್ ಅಥವಾ ಟ್ರಿಕ್ ಒಂದನ್ನು ಹಂಚಿಕೊಂಡಿದ್ದಾರೆ.

ದಾಳಿಂಬೆ ಸಿಪ್ಪೆಯನ್ನು ಏಕೆ ಮರುಬಳಕೆ ಮಾಡಬೇಕು?- ದಾಳಿಂಬೆಯ ಆರೋಗ್ಯ ಪ್ರಯೋಜನಗಳು:

ದಾಳಿಂಬೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ಹಣ್ಣು ಎಂದು ತಿಳಿದುಬಂದಿದೆ. ‘ಏಕ್ ಅನಾರ್, ಸೌ ಬಿಮಾರ್’ (ಒಂದು ದಾಳಿಂಬೆಯು ನೂರು ರೋಗಗಳನ್ನು ಗುಣಪಡಿಸುತ್ತದೆ) ಎಂಬ ಮಾತಿದೆ. ಪ್ರಕಾಶಮಾನವಾದ ಕೆಂಪು ಬಣ್ಣದ ಈ ಹಣ್ಣು ವಿಟಮಿನ್ ಸಿ, ಪೊಟ್ಯಾಷಿಯಮ್, ಆ್ಯಂಟಿಆಕ್ಸಿಡೆಂಟ್ ಪೈಬರ್‌ನ ಅತ್ಯುತ್ತಮ ಮೂಲವಾಗಿದೆ. ದಾಳಿಂಬೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಯಾವುದೇ ಕೊಲೆಸ್ಟಾಲ್ ಅಂಶವನ್ನು ಹೊಂದಿರುವುದಿಲ್ಲ ಮತ್ತು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ.ನಂಬಲು ಕಷ್ಟವಾಗಿದ್ದರೂ, ದಾಳಿಂಬೆಯ ಸಿಪ್ಪೆಗಳು ಅದರ ಹಣ್ಣಿಗಿಂತ ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ಸಮೃದ್ಧವಾಗಿದೆ. ಹಾಗಾಗಿ ಇದು ದಾಳಿಂಬೆಯ ಸಿಪ್ಪೆಗಳನ್ನು ಮರುಬಳಕೆ ಮಾಡುವ ಪರವಾಗಿ ಉತ್ತಮ ವಾದವನ್ನು ಮಾಡುತ್ತದೆ.

ಇದನ್ನೂ ಓದಿ: ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಸೂಪ್ ಪ್ರಯತ್ನಿಸಿ

ಉಳಿದ ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡುವುದು ಹೇಗೆ ವೈರಲ್ ವಿಡಿಯೋ

ಹಣ್ಣು ತಿಂದು ಉಳಿದಿರುವಂತಹ ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇನ್‌ಸ್ಟಾಗ್ರಾಂನಲ್ಲಿ ಅಮೇರಿಕಾ ಮೂಲದ ಜನಪ್ರಿಯ ಕಂಟೆಂಟ್ ಕ್ರಿಯೆಟರ್ ಕಾರ್ಲೀಯವರು ದಾಳಿಂಬೆಯ ಸಿಪ್ಪೆಯನ್ನು ಯಾವ ರೀತಿ ಮರುಬಳಕೆ ಮಾಡಬಹುದು ಎಂಬ ವಿಡಿಯೋ ಹರಿ ಬಿಟ್ಟಿದ್ದಾರೆ. ಈ ವಿಡಿಯೋ 9.9 ಮಿಲಿಯನ್ ವೀಕ್ಷಣೆಗಳು ಮತ್ತು 463,07 ಲೈಕ್ಸ್ ಪಡೆಯುವ ಮೂಲಕ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ.

View this post on Instagram

A post shared by Carleigh Bodrug (@plantyou)

ಇದನ್ನೂ ಓದಿ: ಪಾರ್ಸ್ಲಿ ಟೀ ಮಾಡುವ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಈ ವಿಡಿಯೋ ಕ್ಲಿಪ್‌ನಲ್ಲಿ ದಾಳಿಂಬೆ ಸಿಪ್ಪೆಯನ್ನು ಎಸೆಯಬಾರದು. ಅದರ ಬದಲಿಗೆ ಅದನ್ನು ಬಹಳ ಉಪಯುಕ್ತವಾದ ಪುಡಿಯಾಗಿ ಮಾಡಬಹುದು ಎಂದು ಕಾರ್ಲೀ ವಿವರಿಸಿದರು. ಸಿಪ್ಪೆಗಳನ್ನು ಬೇಕಿಂಗ್ ಟ್ರೇನಲ್ಲಿ ಇರಿಸಿ ಮತ್ತು ಅವುಗಳನ್ನು ಗರಿಗರಿಯಾಗಿ ನಿರ್ಜಲೀಕರಣಗೊಳಿಸಬೇಕು. ನಂತರ ಆ ದಾಳಿಂಬೆ ಸಿಪ್ಪೆಗಳನ್ನು ಒಂದು ಬ್ಲೆಂಡರ್‌ನ ಸಹಾಯದಿಂದ ಚೆನ್ನಾಡಿ ಪುಡಿ ಮಾಡಬೇಕು. ಈಗ ಆಂಟಿಆಕ್ಸಿಂಟ್‌ನಿಂದ ಸಮೃದ್ಧವಾದ ಚಹಾವನ್ನು ತಯಾರಿಸಲು ಈ ಪುಡಿಯನ್ನು ಬಳಸಬಹುದು ಅಥವಾ ಸಲಾಡ್‌ಗಳ ಮೇಲೂ ಆ ಪುಡಿಯನ್ನು ಸಿಂಪಡಿಸಬಹುದು ಅಥವಾ ಸ್ಮೂದಿ ಮತ್ತು ಪಾನೀಯಗಳೊಂದಿಗೂ ಬೆರೆಸಿ ಕುಡಿಯಬಹುದು ಎಂಬುವುದರ ಕುರಿತು ತಮ್ಮ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 2:36 pm, Wed, 28 December 22

ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ