1.400 ಕ್ಕೂ ಹೆಚ್ಚು ಮರುಬಳಕೆ ವಾಷಿಂಗ್​ ಮಷಿನ್​ಗಳನ್ನು ಬಳಸಿ 44 ಅಡಿ ಎತ್ತರದ ಪಿರಾಮಿಡ್​ ನಿರ್ಮಿಸಿದ ಕಂಪನಿ

ಇಲೆಕ್ಟ್ರಾನಿಕ್​ ವಸ್ತುಗಳ ತಯಾರಿಕಾ ಕಂಪನಿಯೊಂದು ಎಲೆಕ್ಟ್ರಾನಿಕ್​ ತ್ಯಾಜ್ಯಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಳೆಯ ವಾಷಿಂಗ್​ ಮಷಿನ್​ ಗಳನ್ನು ಬಳಸಿ 44 ಅಡಿ 7 ಇಂಚಿನ ಪಿರಾಮಿಡ್​ ಅನ್ನು ರಚಿಸಿದೆ. ಈ ಮೂಲಕ ಜಗತ್ತಿನ ಅತೀ ಎತ್ತರದ ಎಲೆಕ್ಟ್ರಾನಿಕ್ ತ್ಯಾಜ್ಯಗಳ ಪಿರಾಮಡ್ ತಯಾರಿಸಿ ಗಿನ್ನಿಸ್​ ವಲ್ರ್ಡ್ ರೆಕಾರ್ಡ್​ ಮಾಡಿದೆ.

1.400 ಕ್ಕೂ ಹೆಚ್ಚು ಮರುಬಳಕೆ ವಾಷಿಂಗ್​ ಮಷಿನ್​ಗಳನ್ನು ಬಳಸಿ 44 ಅಡಿ ಎತ್ತರದ ಪಿರಾಮಿಡ್​ ನಿರ್ಮಿಸಿದ ಕಂಪನಿ
ವಾಷಿಂಗ್​ ಮಷನ್​ನಿಂದ ತಯಾರಿಸಿದ ಪಿರಾಮಿಡ್​
Follow us
TV9 Web
| Updated By: Pavitra Bhat Jigalemane

Updated on: Dec 10, 2021 | 11:55 AM

ಜಗತ್ತಿನಲ್ಲಿ ಇಲೆಕ್ಟ್ರಾನಿಕ್ ತ್ಯಾಜ್ಯಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಟೆಕ್ನಾಲಜಿ ಬೆಳೆದಂತೆ ಇಲೆಕ್ಟ್ರಾನಿಕ್​ ವಸ್ತುಗಳ ಬಳಕೆ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲಿನ್ಯವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಇವೇಸ್ಟ್​ಗಳ ಮರುಬಳಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಯುಕೆಯ ಇಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಕಂಪನಿಯೊಂದು ಇವೇಸ್ಟ್ ವಸ್ತುಗಳನ್ನು ಬಳಸಿ ಗಿನ್ನಿಸ್ ದಾಖಲೆ ಮಾಡಿದೆ. ಇಲೆಕ್ಟ್ರಾನಿಕ್​ ವಸ್ತುಗಳ ತಯಾರಿಕಾ ಕಂಪನಿಯೊಂದು ಎಲೆಕ್ಟ್ರಾನಿಕ್​ ತ್ಯಾಜ್ಯಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಳೆಯ ವಾಷಿಂಗ್​ ಮಷಿನ್​ ಗಳನ್ನು ಬಳಸಿ 44 ಅಡಿ 7 ಇಂಚಿನ ಪಿರಾಮಿಡ್​ ಅನ್ನು ರಚಿಸಿದೆ. ಈ ಮೂಲಕ ಜಗತ್ತಿನ ಅತೀ ಎತ್ತರದ ಎಲೆಕ್ಟ್ರಾನಿಕ್ ತ್ಯಾಜ್ಯಗಳ ಪಿರಾಮಡ್ ತಯಾರಿಸಿ ಗಿನ್ನಿಸ್​ ವಲ್ರ್ಡ್ ರೆಕಾರ್ಡ್​ ಮಾಡಿದೆ. ಯುಕೆ ಮೂಲದ currys pc world ಎನ್ನುವ ಇಲೆಕ್ಟ್ರಾನಿಕ್​ ಉಪಕರಣಗಳ ತಯಾರಿಕಾ ಕಂಪನಿ ಈ ಪಿರಾಮಿಡ್​ ಅನ್ನು ರಚಿಸಿದೆ. ಈ ಪಿರಾಮಿಡ್​ ರಚನೆಗ ಕಂಪನಿಯು 1,496 ಹಳೆಯ ವಾಷಿಂಗ್​ ಮಷಿನ್​ಗಳನ್ನು ಬಳಸಿಕೊಂಡಿದೆ.

1,469 ವಾಷಿಂಗ್​ ಮಷಿನ್​ಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಈ ಪಿರಾಮಿಡ್​ ಅನ್ನು ರಚಿಸಿದೆ. ರಾಷ್ಟ್ರೀಯ ಮರುಬಳಕೆ ವಸ್ತಗಳ ವಾರದಲ್ಲಿ ಗಿನ್ನಿಸ್​ ದಾಖಲೆ ಮಾಡುವ ಸಲುವಾಗಿ ಸೆಪ್ಟೆಂಬರ್​ತಿಂಗಳಿನಲ್ಲಿ ಕಂಪನಿ ಈ ಪಿರಾಮಿಡ್​ ಅನ್ನು ನಿರ್ಮಿಸಿದೆ. ಇದು ಜಗತ್ತಿನ ಅತೀ ಎತ್ತರದ ಎಲೆಕ್ಟ್ರಾನಿಕ್​ ಪಿರಾಮಿಡ್​ ಆಗಿದೆ. ಇಲೆಕ್ಟ್ರಾನಿಕ್ ತ್ಯಾಜ್ಯಗಳ ಮರುಬಳಕೆ ಮತ್ತು ನಿರ್ವಹಣೆಯ ಉದ್ದೇಶದಿಂದ ನ್ಯೂ ಲೈಫ್​ ನಾಟ್​ ಲ್ಯಾಂಡ್​ ಫಿಲ್​ ಎಂಬ ಯೋಜನೆಯ ಅಡಿಯಲ್ಲಿ ಈ ಕ್ರಮವನ್ನು ಕೈಗೊಂಡಿದೆ.

ಪ್ರತೀ ವರ್ಷ ಯುನೈಟೆಡ್​ ಕಿಂಗ್​ಡಮ್​ನಲ್ಲಿ 1.45 ಮಿಲಿಯನ್​ ಟನ್​ನಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯಗಳು ಉತ್ಪಾದನೆಯಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಕೇವಲ ಯುಕೆ ಮಾತ್ರವಲ್ಲ ಜಾಗತಿಕವಾಗಿಯೂ ಇಲೆಕ್ಟ್ರಾನಿಕ್ ತ್ಯಾಜ್ಯಗಳ ಉತ್ಪಾದನೆ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇವೇಸ್ಟ್​ ಗಳ ಮರುಉಪಯೋಗ ಹಾಗೂ ನಿರ್ಹವಣೆಯ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕಿದೆ. ಗಿನ್ನಿಸ್​ ದಾಖಲೆಗಾಗಿ ನಿರ್ಮಿಸಿದ ಎಲೆಕ್ಟ್ರಾನಿಕ್ ಪಿರಾಮಿಡ್​ ಈಗ ಪ್ರವಾಸಿಗರನ್ನು ಆಕರ್ಷಿಸಿದೆ. ಪಿರಾಮಿಡ್​ನ ವೀಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಇಲೆಕ್ಟ್ರಾನಿಕ್ ತ್ಯಾಜ್ಯಗಳಾದ ವಾಷಿಂಗ್​ ಮಷಿನ್​, ಕಂಪ್ಯೂಟರ್​, ಟಿವಿ ಇತ್ಯಾದಿಗಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಮನೆಯ ಅಲಂಕಾರಿಕ ವಸ್ತುಗಳಾಗಿ ಮರುಬಳಕೆ ಮಾಡಿಕೊಳ್ಳಬಹದು.

ಇದನ್ನೂ ಓದಿ:

ತೆಲಂಗಾಣ ಸರ್ಕಾರಿ ಬಸ್​​ನಲ್ಲಿ ಜನಿಸಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಭರ್ಜರಿ ಗಿಫ್ಟ್​ ನೀಡಿದ ಸಾರಿಗೆ ಸಂಸ್ಥೆ; ಜೀವನ ಪರ್ಯಂತ ಉಪಯೋಗವಾಗುವಂಥದ್ದು ಇದು !

ಹೊಸ ಸೋಫಾದ ಒಳಗೆ ಹೆಬ್ಬಾವು ಪ್ರತ್ಯಕ್ಷ; ಹಾವನ್ನು ರಕ್ಷಿಸಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು