ಬೆಡ್​​ ರೂಮ್​ನಿಂದ ಗೃಹ ಕಚೇರಿಗೆ ತೆರಳುವಾಗ ಬಿದ್ದು ಗಾಯಗೊಂಡ ವ್ಯಕ್ತಿ; ಅದು ಕೆಲಸದ ಸ್ಥಳದಲ್ಲಿ ನಡೆದ ಘಟನೆ ಎಂದ ಕೋರ್ಟ್!

German Court: ಜರ್ಮನಿಯ ಫೆಡರಲ್ ನ್ಯಾಯಾಲಯವೊಂದು ಕುತೂಹಲಕರ ತೀರ್ಪು ನೀಡಿದೆ. ಉದ್ಯೋಗಿಯೊಬ್ಬ ಗೃಹ ಕಚೇರಿಗೆ ತೆರಳುವಾಗ ಸಂಭವಿಸಿದ ಗಾಯಕ್ಕೆ ವಿಮೆ ರಕ್ಷಣೆ ನೀಡಲಿದೆ ಎಂದು ಅದು ಹೇಳಿದೆ.

ಬೆಡ್​​ ರೂಮ್​ನಿಂದ ಗೃಹ ಕಚೇರಿಗೆ ತೆರಳುವಾಗ ಬಿದ್ದು ಗಾಯಗೊಂಡ ವ್ಯಕ್ತಿ; ಅದು ಕೆಲಸದ ಸ್ಥಳದಲ್ಲಿ ನಡೆದ ಘಟನೆ ಎಂದ ಕೋರ್ಟ್!
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on: Dec 11, 2021 | 8:52 AM

ಜರ್ಮನಿ: ಉದ್ಯೋಗಿಯೊಬ್ಬ ಕಚೇರಿಗೆ ತೆರಳುವಾಗ ಅಪಘಾತವಾದರೆ ಆತ ಅಪಘಾತ ವಿಮೆಯ ಪ್ರಯೋಜನ ಪಡೆಯಬಹುದು. ಆದರೆ ಪ್ರಸ್ತುತ ಕೆಲಸದ ವೈಖರಿ ವರ್ಕ್ ಫ್ರಮ್ ಹೋಮ್​ ಮಾದರಿಗೆ ಬದಲಾಗಿದ್ದರಿಂದ ಇಂತಹ ವಿಮೆಗಳ ಅಗತ್ಯ ಎಷ್ಟಿದೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಜರ್ಮನಿಯಲ್ಲಿ ಆಸಕ್ತಿದಾಯಕ ಪ್ರಕರಣವೊಂದು ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಉದ್ಯೋಗಿಯ ಪರ ತೀರ್ಪು ನೀಡಿದೆ. ಅಷ್ಟಕ್ಕೂ ಪ್ರಕರಣವೇನೆಂದರೆ, ಉದ್ಯೋಗಿಯೋರ್ವ ತನ್ನ ಬೆಡ್​​ರೂಮ್​ನಿಂದ ಗೃಹ ಕಚೇರಿಗೆ (ಮನೆಯಲ್ಲಿ ಕೆಲಸ  ಮಾಡುವ ಜಾಗ) ತೆರಳುವಾಗ ಬಿದ್ದು ಗಾಯಗೊಂಡಿದ್ದ. ಇದಕ್ಕೆ ಕಚೇರಿಗೆ ತೆರಳುವಾಗ ಸಂಭವಿಸಿದ ಅಪಘಾತ ಎಂಬ ನೆಲೆಯಲ್ಲಿ ವಿಮೆ ಕೇಳಲಾಗಿತ್ತು. ಈ ಪ್ರಕರಣ ಜರ್ಮನ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಲಯದ ತೀರ್ಪು ಬದಲಾದ ಕಾಲಘಟ್ಟಕ್ಕೆ ಆಸಕ್ತಿಕರ ದೃಷ್ಟಿಕೋನ ನೀಡಿದೆ.

ಡಿಸೆಂಬರ್ 8ರಂದು ನ್ಯಾಯಾಲಯವು ತೀರ್ಪು ನೀಡಿದ್ದನ್ನು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ನೌಕರನೊಬ್ಬ ನೌಕರನು ತನ್ನ ಮಲಗುವ ಕೋಣೆಯಿಂದ ಒಂದು ಮಹಡಿಯ ಕೆಳಗಿನ ಗೃಹ ಕಚೇರಿಗೆ ನಡೆದುಕೊಂಡು ಹೋಗುವಾಗ ಬೆನ್ನಿನ ಗಾಯಕ್ಕೆ ಒಳಗಾಗಿದ್ದ. ಆ ವ್ಯಕ್ತಿ ಕಚೇರಿಯನ್ನು ಸಂಪರ್ಕಿಸುವ ಸುರುಳಿಯಾಕಾರದ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಜಾರಿಬಿದ್ದು ಗಾಯಗೊಂಡಿದ್ದ. ಈ ಹಿನ್ನೆಲೆಯಲ್ಲಿ ಆತ ಕಚೇರಿಗೆ ತೆರಳುವಾಗ ಅಪಘಾತವಾದರೆ ರಕ್ಷಣೆ ಒದಗಿಸುವ ವಿಮೆಯ ಮೊರೆ ಹೋಗಿದ್ದ. ಅಂದರೆ ಈ ಪ್ರಕರಣವನ್ನು ಕಚೇರಿಯಲ್ಲಿ ನಡೆದ ಅಪಘಾತವಾಗಿ ಪರಿಗಣಿಸಬೇಕು ಎಂದು ಕೇಳಿಕೊಳ್ಳಲಾಗಿತ್ತು. ಆದರೆ ಕಂಪನೆಗೂ, ಉದ್ಯೋಗಿಗೂ ಈ ನಡುವೆ ಚರ್ಚೆ ನಡೆದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಕೋರ್ಟ್ ತನ್ನ ತೀರ್ಪಿನಲ್ಲಿ ‘‘ಉದ್ಯೋಗಿ ಮೊದಲು ಆಹಾರ ಸೇವಿಸದೇ ಕೆಲಸವನ್ನು ಮಾಡಲು ಆರಂಭಿಸುತ್ತಾನೆ’’ ಎಂದು ಉಲ್ಲೇಖಿಸಿತ್ತು. ಆದರೆ ಈ ಸಾಲಿನ ಕುರಿತು ಅದು ಸ್ಪಷ್ಟನೆ ನೀಡಿರಲಿಲ್ಲ. ಗಾರ್ಡಿಯನ್ ಈ ಕುರಿತು ವಿಶ್ಲೇಷಿಸಿ, ಸಾಮಾನ್ಯವಾಗಿ ಉದ್ಯೋಗಿಯೊಬ್ಬ ಕಚೇರಿಗೆ ದಿನವೊಂದರಲ್ಲಿ ಮೊದಲ ಬಾರಿಗೆ ತೆರಳುವಾಗ ಅಪಘಾತವಾದರೆ ಮಾತ್ರ ಶಾಸನಬದ್ಧ ವಿಮೆಯು ರಕ್ಷಣೆ ನೀಡಬಲ್ಲದು. ಈ ಹಿನ್ನೆಲೆಯಲ್ಲಿ ಉದ್ಯೋಗಿ ಗೃಹಕಚೇರಿಗೆ ತೆರಳುವುದು ಮೊದಲ ಪ್ರಯಾಣವೆಂದು ಕೋರ್ಟ್ ಪರಿಗಣಿಸಿದೆ ಎಂದು ಹೇಳಿದೆ.

ಅಲ್ಲದೇ ನ್ಯಾಯಾಲಯವು ಉದ್ಯೋಗಿ ಉಪಾಹಾರ ಮುಗಿಸಿ ಮತ್ತೆ ಕಚೇರಿಗೆ ತೆರಳುವುದನ್ನು ಎರಡನೇ ಪ್ರಯಾಣ ಎಂಬ ನೆಲೆಯಲ್ಲಿ ನೋಡಬಹುದು. ಅದು ವಿಮೆಗೆ ಅರ್ಹವಾಗಿರುವುದಿಲ್ಲ ಎಂಬ ವಾದದಲ್ಲಿ ಅರ್ಥವಿದೆ. ಆದರೆ ಈ ಪ್ರಕರಣದಲ್ಲಿ ವಿಮೆ ಅನ್ವಯವಾಗಲಿದೆ ಎಂದು ಹೇಳಿದೆ. ಅಲ್ಲದೇ ಈ ಪ್ರಕರಣದಲ್ಲಿ ನ್ಯಾಯಾಲಯವು ಉದ್ಯೋಗಿ ಕೆಲಸ ಮಾಡುತ್ತಿದ್ದ ಜಾಗ ಆತನ ಕಂಪನಿಯೇ ಸ್ಥಾಪಿಸಿದ ವರ್ಕ್ ಸ್ಟೇಷನ್ ಆಗಿದೆ. ಆದ್ದರಿಂದ ಅದು ಕಚೇರಿ ಎನ್ನಬಹುದು ಎಂದು ವ್ಯಾಖ್ಯಾನಿಸಿದೆ. ಈ ಮೂಲಕ ಉದ್ಯೋಗಿಯ ಹಿತಾಸಕ್ತಿಯನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಜರ್ಮನಿಯಲ್ಲಿನ ಫೆಡರಲ್ ಸಾಮಾಜಿಕ ನ್ಯಾಯಾಲಯವು ಮೇಲ್ಮನವಿ ನ್ಯಾಯಾಲಯವಾಗಿದ್ದು, ಔದ್ಯೋಗಿಕ ಅಪಘಾತ ವಿಮೆ ಸಮಸ್ಯೆಗಳಿಗೆ ಸಂಬಂಧಿಸಿದ ಸಾಮಾಜಿಕ ಭದ್ರತೆ ಪ್ರಕರಣಗಳನ್ನು ಆಲಿಸುತ್ತದೆ. ಈ ಪ್ರಕರಣ ವರ್ಕ್ ಫ್ರಮ್ ಉದ್ಯೋಗಿಗಳ ವಿಮೆ ಪರಿಕಲ್ಪನೆಗಳ ಕುರಿತು ಹೊಸ ಆಯಾಮವನ್ನು ಒದಗಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ:

Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್​ ಆಗುವುದಕ್ಕೂ ಮೊದಲು ವಿಜಯ ದಿವಸ್​ ಆಚರಣೆ

Virat Kohli and Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್