- Kannada News Photo gallery Cricket photos Virat Kohli and Anushka Sharma celebrate their fourth wedding anniversary today 11th December
Virat Kohli and Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ
Virat Kohli and Anushka Sharma's wedding anniversary: ಜಾಹೀರಾತಿನ ಚಿತ್ರೀಕರಣವೊಂದರಲ್ಲಿ ಭೇಟಿಯಾಗಿ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿ ಮುಳುಗಿದ್ದ ವಿರುಷ್ಕಾ ಜೋಡಿ 2017 ಡಿಸೆಂಬರ್ 11ರಂದು ಇಟಲಿಯಲ್ಲಿ ಮದುವೆಯಾದರು. ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹ ಜೀವನಕ್ಕೆ ಕಾಲಿರಿಸಿ ಇಂದಿಗೆ ನಾಲ್ಕು ವರುಷದ ಸಂಭ್ರಮ.
Updated on:Dec 11, 2021 | 8:38 AM

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹ ಜೀವನಕ್ಕೆ ಕಾಲಿರಿಸಿ ಇಂದಿಗೆ ನಾಲ್ಕು ವರುಷದ ಸಂಭ್ರಮ. ದೇಶದಲ್ಲೇ ಅತಿ ಹೆಚ್ಚು ಚರ್ಚಿತ ಸೆಲೆಬ್ರಿಯಾಗಿರುವ ವಿರುಷ್ಕಾ ಜೋಡಿಯು 2017 ಡಿಸೆಂಬರ್ 11ರಂದು ಇಟಲಿಯಲ್ಲಿ ವಿವಾಹ ಬಾಂಧವ್ಯಕ್ಕೆ ಕಾಲಿರಿಸಿದ್ದರು.

ಜಾಹೀರಾತಿನ ಚಿತ್ರೀಕರಣವೊಂದರಲ್ಲಿ ಭೇಟಿಯಾಗಿ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿ ಮುಳುಗಿದ್ದ ಜೋಡಿ 2017 ಡಿಸೆಂಬರ್ 11ರಂದು ಇಟಲಿಯಲ್ಲಿ ಮದುವೆಯಾದರು. ಬಳಿಕ ನವದೆಹಲಿ ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸಿದ್ದರು. ಪ್ರಧಾನಿ ಮೋದಿ, ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ದೆಹಲಿ ಮೂಲದವರಾದ ಇವರಿಬ್ಬರ ಪರಿಚಯವಾಗಿದ್ದು 2013ರ ಜಾಹೀರಾತು ಚಿತ್ರೀಕರಣವೊಂದರಲ್ಲಿ. ಕ್ಲಿಯರ್ ಹೇರ್ ಶಾಂಪುನಲ್ಲಿ ಬ್ಲಾಕ್ ಡ್ರೆಸ್ನಲ್ಲಿ ಹಾಟ್ ಜೋಡಿ ಆಗಿ ಕಾಣಿಸಿಕೊಂಡ ಇವರು ನೋಡುಗರ ಹುಬ್ಬೇರುವಂತೆ ಮಾಡಿತ್ತು.

ಮೊದಲ ಪರಿಚಯದಿಂದಲೇ ಇಬ್ಬರು ಮನಸೋತರು. ಪರಿಚಯ ಸ್ನೇಹವಾಗಿ.. ಸದ್ದಿಲ್ಲದೇ ಡೇಟಿಂಗ್ ಕೂಡ ಆರಂಭಿಸಿದರು. ಅದು ಎಷ್ಟರ ಮಟ್ಟಿಗೆ ಅಂದರೆ ಕೊಹ್ಲಿ ವಿದೇಶಕ್ಕೆ ಟೂರ್ನಮೆಂಟ್ಗೆ ತೆರಳಿದರೆ ಅನುಷ್ಕಾ ಸಹ ಕದ್ದು ಮುಚ್ಚಿ ವಿಮಾನ ಏರುತ್ತಿದ್ದರು.

ಇಷ್ಟೆಲ್ಲಾ ಕದ್ದು ಮುಚ್ಚಿ ಓಡಾಡುತ್ತಿದ್ದ ಜೋಡಿ ಅಂತೂ ಒಂದು ದಿನ ಎಲ್ಲರ ಕಣ್ಣಿಗೆ ಕಂಡರು. ಅದು ಸ್ವರ್ಗವೇ ಧರಗಿಳಿದಿರುವಂತೆ ಕಾಣುವ ನ್ಯೂಜಿಲೆಂಡ್ನಲ್ಲಿ. ಅಷ್ಟು ದಿನ ಹೇಗೋ ಅರಾಮಾಗಿ ಸುತ್ತುತ್ತಿದ್ದ ಜೋಡಿಗೆ ಅಯ್ಯೋ ಸಿಕ್ಕಿ ಬಿದ್ದವಲ್ಲ ಎಂಬ ಮುಜುಗರ ಒಂದು ಕಡೆ ಆದರೆ, ಮತ್ತೊಂದೆಡೆ ಇನ್ನೇನು ಗೊತ್ತಾಯಿತಲ್ಲ.. ಅರಾಮಾಗಿ ಓಡಾಡೋಣ ಎಂಬ ಧೈರ್ಯ.

ಈ ಮೂಲಕ ಗಪ್ಚುಪ್ ಆಗಿದ್ದ ವಿರುಷ್ಕಾ ಪ್ರೀತಿ ಬಹಿರಂಗವಾಗಿದ್ದೇ ತಡ. ಇಬ್ಬರೂ ಪ್ರೀತಿಯನ್ನ ಒಪ್ಪಿಕೊಂಡು ಕಳೆದ ವರ್ಷ ಡಿಸೆಂಬರ್ 11ರಂದು ಅದ್ಧೂರಿಯಾಗಿ ಇಟಲಿಯಲ್ಲಿ ಮದುವೆಯಾದರು. ಇವರು ಮದುವೆಯಾಗಿ ಇಂದಿಗೆ ಒಂದು ವರ್ಷವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿವೆ.

ಜನವರಿ 11ರಂದು ವಿರುಷ್ಕಾ ದಂಪತಿ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ಖಚಿತಪಡಿಸಿದ್ದರು. ತಮ್ಮ ಮಗುವಿಗೆ ವಾಮಿಕಾ ಎಂದು ವಿರುಷ್ಕಾ ದಂಪತಿ ಹೆಸರಿಟ್ಟಿದ್ದಾರೆ.

ವಿರುಷ್ಕಾ ಜೋಡಿ

ವಿರುಷ್ಕಾ ಜೋಡಿ

ವಿರುಷ್ಕಾ ಜೋಡಿ
Published On - 8:38 am, Sat, 11 December 21




