Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್​ ಆಗುವುದಕ್ಕೂ ಮೊದಲು ವಿಜಯ ದಿವಸ್​ ಆಚರಣೆ

ದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಅಧಿಕ ಕಾಲದಿಂದ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೀಗ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಗಡಿಗಳಲ್ಲಿ ಹಾಕಿದ್ದ ಟೆಂಟ್​​ಗಳನ್ನು ತೆಗೆಯುತ್ತಿದ್ದಾರೆ. ರೈತರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಕೇಂದ್ರ ಸರ್ಕಾರದಿಂದ ಅಧಿಕೃತ ಪತ್ರ ನೀಡಲಾದ ಬೆನ್ನಲ್ಲೇ  ರೈತರು ತಮ್ಮ ಆಂದೋಲನವನ್ನು ಹಿಂಪಡೆದಿದ್ದಾರೆ.  ಹಾಗೆ ಇಂದು ಸಂಜೆಯ ಒಳಗೆ ಎಲ್ಲರೂ ಗಡಿಗಳಿಂದ ಸಂಪೂರ್ಣವಾಗಿ ವಾಪಸ್​ ಆಗಲಿದ್ದಾರೆ. ಆದರೆ ಹೀಗೆ ಹೋಗುವ ಮೊದಲು ದೆಹಲಿಯ ಗಡಿಯಲ್ಲಿ ರೈತರು ಇಂದು ವಿಜಯ್​ ದಿವಸ್​ […]

Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್​ ಆಗುವುದಕ್ಕೂ ಮೊದಲು ವಿಜಯ ದಿವಸ್​ ಆಚರಣೆ
ರೈತ ಪ್ರತಿಭಟನೆಯ ಚಿತ್ರ
Follow us
TV9 Web
| Updated By: Lakshmi Hegde

Updated on:Dec 11, 2021 | 8:53 AM

ದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಅಧಿಕ ಕಾಲದಿಂದ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೀಗ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಗಡಿಗಳಲ್ಲಿ ಹಾಕಿದ್ದ ಟೆಂಟ್​​ಗಳನ್ನು ತೆಗೆಯುತ್ತಿದ್ದಾರೆ. ರೈತರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಕೇಂದ್ರ ಸರ್ಕಾರದಿಂದ ಅಧಿಕೃತ ಪತ್ರ ನೀಡಲಾದ ಬೆನ್ನಲ್ಲೇ  ರೈತರು ತಮ್ಮ ಆಂದೋಲನವನ್ನು ಹಿಂಪಡೆದಿದ್ದಾರೆ.  ಹಾಗೆ ಇಂದು ಸಂಜೆಯ ಒಳಗೆ ಎಲ್ಲರೂ ಗಡಿಗಳಿಂದ ಸಂಪೂರ್ಣವಾಗಿ ವಾಪಸ್​ ಆಗಲಿದ್ದಾರೆ.

ಆದರೆ ಹೀಗೆ ಹೋಗುವ ಮೊದಲು ದೆಹಲಿಯ ಗಡಿಯಲ್ಲಿ ರೈತರು ಇಂದು ವಿಜಯ್​ ದಿವಸ್​ ಆಚರಣೆ ಮಾಡುವರು. ವಿವಾದಿತ ಕೃಷಿ ಕಾಯ್ದೆಗಳ ಆಂದೋಲನದಲ್ಲಿ ತಮಗೆ ಕೇಂದ್ರದ ವಿರುದ್ಧ ಜಯ ಸಿಕ್ಕಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ವಿಜಯ್​ ದಿವಸ್ ಆಚರಣೆ ಮಾಡಿ, ತಮ್ಮ ಊರಿಗೆ ಹೋಗಲಿದ್ದಾರೆ.  ಶನಿವಾರ ದೆಹಲಿ ಗಡಿಯಲ್ಲಿ, ಎಲ್ಲ ಟೋಲ್ ಪ್ಲಾಜಾಗಳಲ್ಲಿ ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ರೈತರು ವಿಜಯ ಮೆರವಣಿಗೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್​ ಮೋರ್ಚಾ ಹೇಳಿದೆ.

ರೈತ ಸಂಘಟನೆಗಳು ಡಿ.10ರಂದೇ ವಿಜಯ್​ ದಿವಸ್​ ಆಚರಣೆ ಮಾಡಲು ನಿರ್ಧರಿಸಿದ್ದರು. ಆದರೆ ನಿನ್ನೆ ಭಾರತದ ಪ್ರಥಮ ಸಿಡಿಎಸ್​​ ಜನರಲ್​ ಬಿಪಿನ್​ ರಾವತ್​ ಅಂತ್ಯಕ್ರಿಯೆ ಇದ್ದ ಕಾರಣ ಒಂದು ದಿನಕ್ಕೆ ಮುಂದೂಡಿದ್ದರು. ಸದ್ಯಕ್ಕಂತೂ ರಾಷ್ಟ್ರರಾಜಧಾನಿಯ ಸಿಂಘು ಮತ್ತು ಗಾಝಿಪುರ ಗಡಿಗಳಲ್ಲಿ ರೈತರ ಚಟುವಟಿಕೆಗಳು ಹೆಚ್ಚಿವೆ. ಅಲ್ಲೀಗ ಟೆಂಟ್​​ಗಳನ್ನು ತೆಗೆಯಲಾಗುತ್ತಿದೆ. ಅದನ್ನೆಲ್ಲ ಹೊತ್ತುಕೊಂಡು ಹೋಗಲು ಟ್ರ್ಯಾಕ್ಟರ್​​ಗಳು ಬಂದು ನಿಂತಿವೆ. ಇನ್ನೊಂದೆಡೆ ಉತ್ತರ ಪ್ರದೇಶದ ಗಡ

ಏತನ್ಮಧ್ಯೆ, ರಾಷ್ಟ್ರ ರಾಜಧಾನಿಯ ಸಿಂಘು ಮತ್ತು ಗಾಜಿಪುರ ಗಡಿ ಬಿಂದುಗಳು-ಕಳೆದ 14 ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದ ಎರಡು ಸೈಟ್‌ಗಳಲ್ಲಿ ತೆರವು ಚಟುವಟಿಕೆಗಳು ಶುರುವಾಗಿವೆ. ರೈತರು ಟ್ರಕ್‌ಗಳು ಮತ್ತು ಟ್ರ್ಯಾಕ್ಟರ್‌ಗಳಲ್ಲಿ ತಮ್ಮ ಮನೆಗಳಿಗೆ ತೆರಳಲು ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದಾರೆ. ಟ್ರಾಲಿಗಳು. ಮತ್ತೊಂದೆಡೆ ಯುಪಿ ಗೇಟ್ ಪ್ರತಿಭಟನಾ ಸ್ಥಳವನ್ನು ಡಿಸೆಂಬರ್ 15 ರೊಳಗೆ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ರೈತರು ಹೇಳಿದ್ದಾರೆ. ಇನ್ನು ಯುಪಿ ಗೇಟ್​​ ಬಳಿ ನಡೆಯುತ್ತಿರುವ ಪ್ರತಿಭಟನೆನ್ನು ಡಿ.15ರೊಳಗೆ ತೆರವುಗೊಳಿಸಲಾಗುವುದು ಎಂದು ರೈತರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಡ್​​ ರೂಮ್​ನಿಂದ ಗೃಹ ಕಚೇರಿಗೆ ತೆರಳುವಾಗ ಬಿದ್ದು ಗಾಯಗೊಂಡ ವ್ಯಕ್ತಿ; ಅದು ಕೆಲಸದ ಸ್ಥಳದಲ್ಲಿ ನಡೆದ ಘಟನೆ ಎಂದ ಕೋರ್ಟ್!

Published On - 8:38 am, Sat, 11 December 21

ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು