ತೆಲಂಗಾಣ ಸರ್ಕಾರಿ ಬಸ್​​ನಲ್ಲಿ ಜನಿಸಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಭರ್ಜರಿ ಗಿಫ್ಟ್​ ನೀಡಿದ ಸಾರಿಗೆ ಸಂಸ್ಥೆ; ಜೀವನ ಪರ್ಯಂತ ಉಪಯೋಗವಾಗುವಂಥದ್ದು ಇದು !

ನಾಗರಕರ್ನೂಲು ಡೀಪೋಗೆ ಸೇರಿದ ಬಸ್​ವೊಂದರಲ್ಲಿ ತೆಲಂಗಾಣದ ಪೆದ್ದಕೋತಪಲ್ಲಿ ಗ್ರಾಮದ ಬಳಿ ನವೆಂಬರ್ 30ರಂದು ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜತೆಗೆ ಆಸಿಫಾಬಾದ್ ಡಿಪೋಗೆ ಸೇರಿದ ಬಸ್​ನಲ್ಲಿ ಡಿಸೆಂಬರ್​ 7ರಂದು ಸಿದ್ದಿಪೇಟೆ ಬಳಿ ಇನ್ನೋರ್ವ ಮಹಿಳೆ ಬಸ್​ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು

ತೆಲಂಗಾಣ ಸರ್ಕಾರಿ ಬಸ್​​ನಲ್ಲಿ ಜನಿಸಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಭರ್ಜರಿ ಗಿಫ್ಟ್​ ನೀಡಿದ ಸಾರಿಗೆ ಸಂಸ್ಥೆ; ಜೀವನ ಪರ್ಯಂತ ಉಪಯೋಗವಾಗುವಂಥದ್ದು ಇದು !
ಟಿಎಸ್​ಆರ್​ಟಿಸಿ ಬಸ್
Follow us
TV9 Web
| Updated By: Pavitra Bhat Jigalemane

Updated on:Dec 09, 2021 | 11:08 AM

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕೆಲವು ದಿನಗಳ ಹಿಂದೆ ಇಬ್ಬರು ಮಹಿಳೆಯರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಸ್ಸಿನಲ್ಲಿ ಜನಸಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಜೀವನ ಪರ್ಯಂತ ಉಚಿತ ಪಾಸ್​ ನೀಡುವುದಾಗಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘೋಷಿಸಿದೆ. ಕೆಲವು ದಿನಗಳ ಹಿಂದೆ ಸರ್ಕಾರಿ ಬಸ್​ನಲ್ಲಿ ತೆರಳುವ ವೇಳೆ ಇಬ್ಬರು ಪ್ರತ್ಯೇಕ ಮಹಿಳೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಬಸ್​​ನಲ್ಲಿದ್ದ ಸಹಪ್ರಯಾಣಿಕರು ಹಾಗೂ ಸಿಬ್ಬಂದಿ ನೆರವು ನೀಡಿದ್ದರಿಂದ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರೂ ಮಹಿಳೆಯರಿಗೂ ಹೆಣ್ಣು ಮಗು ಜನಿಸಿತ್ತು. ಇದೀಗ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯು ಜೀವನ ಪರ್ಯಂತ ಉಚಿತ ಪಾಸ್​ ನೀಡುತ್ತಿದೆ.

ನಾಗರಕರ್ನೂಲು ಡೀಪೋಗೆ ಸೇರಿದ ಬಸ್​ವೊಂದರಲ್ಲಿ ತೆಲಂಗಾಣದ ಪೆದ್ದಕೋತಪಲ್ಲಿ ಗ್ರಾಮದ ಬಳಿ ನವೆಂಬರ್ 30ರಂದು ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜತೆಗೆ ಆಸಿಫಾಬಾದ್ ಡಿಪೋಗೆ ಸೇರಿದ ಬಸ್​ನಲ್ಲಿ ಡಿಸೆಂಬರ್​ 7ರಂದು ಸಿದ್ದಿಪೇಟೆ ಬಳಿ ಇನ್ನೋರ್ವ ಮಹಿಳೆ ಬಸ್​ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಬಸ್​ನಲ್ಲಿ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಸ್​ ಸಿಬ್ಬಂದಿ ಹಾಗೂ ಸಹಪ್ರಯಾಣಿಕರು ಮಹಿಳೆಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದರು. ನಂತರ 108 ಆಂಬ್ಯಲೆನ್ಸ್​ ಮೂಲಕ ಹತ್ತಿರದ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಕಳುಹಿಸಿದ್ದರು.

ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಸಹಪ್ರಯಾಣಿಕರ ಕಾರ್ಯವನ್ನು ಶ್ಲಾಘಿಸಿದ ಟಿಎಸ್​ಆರ್​ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ಇಬ್ಬರೂ ಹೆಣ್ಣು ಮಕ್ಕಳಿಗೆ ಜೀವಮಾನದ ಉಚಿತ ಪಾಸ್​ ನೀಡಲು ಸಂತಸವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ:

ಬಿಪಿನ್​ ರಾವತ್ ನಿಧನದಿಂದ ತೆರವಾದ ಸಿಡಿಎಸ್​ ಹುದ್ದೆ ಮುಂದೆ ಯಾರಿಗೆ?-ಬಲವಾಗಿ ಕೇಳಿಬರುತ್ತಿರುವುದು ಇವರ ಹೆಸರು

ಕೊಳಕು ಮಂಡಲ ಹಾವಿನ ಆರ್ಭಟದೆದುರು ತನ್ನ ಮರಿಗಳ ರಕ್ಷಿಸಲು ಹೋಗಿ ಪ್ರಾಣ ಬಿಟ್ಟ ತಾಯಿ ನಾಯಿ

Published On - 10:55 am, Thu, 9 December 21