ಬಿಪಿನ್​ ರಾವತ್ ನಿಧನದಿಂದ ತೆರವಾದ ಸಿಡಿಎಸ್​ ಹುದ್ದೆ ಮುಂದೆ ಯಾರಿಗೆ?-ಬಲವಾಗಿ ಕೇಳಿಬರುತ್ತಿರುವುದು ಇವರ ಹೆಸರು

ಈ ಮಧ್ಯೆ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್​  ಚಂಡಿ ಪ್ರಸಾದ್ ಮೊಹಾಂತಿ ಅವರು ತಮ್ಮ ಎರಡು ದಿನಗಳ ಕತಾರ್​ ಭೇಟಿಯನ್ನು ಮೊಟಕುಗೊಳಿಸಿ, ದೆಹಲಿಗೆ ಹಿಂತಿರುಗುತ್ತಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಬಿಪಿನ್​ ರಾವತ್ ನಿಧನದಿಂದ ತೆರವಾದ ಸಿಡಿಎಸ್​ ಹುದ್ದೆ ಮುಂದೆ ಯಾರಿಗೆ?-ಬಲವಾಗಿ ಕೇಳಿಬರುತ್ತಿರುವುದು ಇವರ ಹೆಸರು
ಬಿಪಿನ್​ ರಾವತ್​ ಮತ್ತು ಎಂ.ಎಂ.ನರವಾಣೆ

ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಸಿಡಿಎಸ್​ (Chief Of Defence Staff) ಬಿಪಿನ್ ರಾವತ್​ ಮೃತಪಟ್ಟ ಬೆನ್ನಲ್ಲೇ, ಮುಂದಿನ ಸಿಡಿಎಸ್​ ಯಾರಾಗಬಹುದು ಎಂಬ ಪ್ರಶ್ನೆ ಎದ್ದಿದೆ. ಬಿಪಿನ್​ ರಾವತ್​ ನಮ್ಮ ಭಾರತೀಯ ಸೇನೆಯ ಮೊದಲ ಸಿಡಿಎಸ್​ ಆದವರು. ಈಗ ಅವರಿಲ್ಲದ ಕಾರಣ ಇನ್ನೊಬ್ಬರನ್ನು ಆ ಸ್ಥಾನಕ್ಕೆ ನೇಮಕ ಮಾಡಬೇಕಾಗಿದೆ. ಶೀಘ್ರದಲ್ಲಿಯೇ ಒಬ್ಬರ ಹೆಸರನ್ನು ಕೇಂದ್ರ ಸರ್ಕಾರ ಘೋಷಿಸಲಿದೆ. ಈ ಮಧ್ಯೆ ಮುಂದಿನ ಸಿಡಿಎಸ್​ ಜನರಲ್​ ಮನೋಜ್​ ಮುಕುಂದ್​ ನರವಾಣೆಯವರೇ ಆಗಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.  

ಬಿಪಿನ್​ ರಾವತ್​, ಅವರ ಪತ್ನಿ ಮತ್ತು ಇತರ 11 ಸೇನಾಧಿಕಾರಿಗಳು ಮೃತಪಟ್ಟ ಬೆನ್ನಲ್ಲೇ ನಿನ್ನೆ (ಬುಧವಾರ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಮಿತಿ ಸಭೆ ನಡೆದಿದೆ. ಹಾಗಂತ ಮುಂದಿನ ಸಿಡಿಎಸ್​ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆದ ಮಾಹಿತಿ ಇಲ್ಲ. ಹಾಗಂತ ಸಿಡಿಎಸ್​ನಂತ ನಿರ್ಣಾಯಕ ಹುದ್ದೆಯನ್ನು ಬಹುದಿನಗಳವರೆಗೆ ಸರ್ಕಾರ ಖಾಲಿ ಬಿಡುವುದೂ ಇಲ್ಲ.  ಸದ್ಯ ನಮ್ಮ ಭೂಸೇನೆ ಮುಖ್ಯಸ್ಥರಾಗಿ ಎಂ.ಎಂ.ನರವಾಣೆ ಇದ್ದಾರೆ. ನೌಕಾಪಡೆ ಮುಖ್ಯಸ್ಥರಾಗಿ ಅಡ್ಮಿರಲ್​ ಹರಿಕುಮಾರ್​, ಏರ್​ಪೋರ್ಸ್​ ಚೀಫ್​ ಆಗಿ ಮಾರ್ಷಲ್​ ವಿ.ಆರ್​.ಚೌಧರಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂರು ವಿಭಾಗಗಳ ಮುಖ್ಯಸ್ಥರು 62ನೇ ವರ್ಷದವರೆಗೆ ಮಾತ್ರ ಸೇವೆ ಸಲ್ಲಿಸಬಹುದು. ಆದರೆ ಸಿಡಿಎಸ್​ ಹುದ್ದೆಗೆ ಏರುವವರಿಗೆ 65ನೇ ವರ್ಷದವರೆಗೂ ಕಾರ್ಯನಿರ್ವಹಿಸಲು ಅವಕಾಶ ಇದೆ. ಇನ್ನು ಮೂರು ವಿಭಾಗದ ಮುಖ್ಯಸ್ಥರಲ್ಲಿ ಹೋಲಿಕೆ ಮಾಡಿದರೆ, ಹಿರಿಯ ಅಧಿಕಾರಿ ಎಂ.ಎಂ.ನರವಾಣೆಯವರೇ ಆಗಿದ್ದು, ಅವರೇ ಮುಂದಿನ ಸಿಡಿಎಸ್​ ಆಗಬಹುದು ಎಂಬುದು ಮೂಲಗಳ ಮಾಹಿತಿ.

ಈ ಮಧ್ಯೆ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್​  ಚಂಡಿ ಪ್ರಸಾದ್ ಮೊಹಾಂತಿ ಅವರು ತಮ್ಮ ಎರಡು ದಿನಗಳ ಕತಾರ್​ ಭೇಟಿಯನ್ನು ಮೊಟಕುಗೊಳಿಸಿ, ದೆಹಲಿಗೆ ಹಿಂತಿರುಗುತ್ತಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ. ಒಂದೊಮ್ಮೆ ನರವಾಣೆಯವರು ಸಿಡಿಎಸ್​ ಸ್ಥಾನಕ್ಕೆ ಏರಿದರೆ, ಚಂಡಿಪ್ರಸಾದ್​ ಭೂಸೇನಾ ಮುಖ್ಯಸ್ಥರಾಗಿ ಬಡ್ತಿ ಪಡೆಯಲಿದ್ದಾರೆ ಎಂಬುದು ಒಂದು ಅಂದಾಜು. ಇನ್ನು ನರವಾಣೆಯವರು 2019ರ ಡಿಸೆಂಬರ್​ 30ರಂದು, 27ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅದಕ್ಕೂ ಮೊದಲು ಸೇನೆಯ ಉಪ ಮುಖ್ಯಸ್ಥರಾಗಿದ್ದುಕೊಂಡು, ಚೀನಾದೊಂದಿಗೆ ಸುಮಾರು 4000 ಕಿಮೀ ದೂರದ ಗಡಿ ಹಂಚಿಕೊಂಡಿರುವ ಪೂರ್ವ ವಲಯದ ಕಮಾಂಡೋ ಆಗಿದ್ದರು. ನಾಲ್ಕು ದಶಕಗಳ ಕಾಲದ ಅವರ ವೃತ್ತಿ ಜೀವನದಲ್ಲಿ ಹಲವು ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Army Chopper Crash: ಸೇನಾ ಮುಖ್ಯಸ್ಥರ ಹೆಲಿಕಾಪ್ಟರ್​​ ದುರಂತ, ಈಗ ಪರಿಸ್ಥಿತಿ ಅಲ್ಲಿ ಹೇಗಿದೆ?

Click on your DTH Provider to Add TV9 Kannada