ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾದ ಅಧಿಕಾರಿ ಕೇರಳದಲ್ಲಿ 2018ರ ಪ್ರವಾಹ ವೇಳೆ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
Army Chopper Crash: ಪ್ರದೀಪ್ ಒಂದು ವಾರದ ಹಿಂದೆ ತನ್ನ ಸ್ನೇಹಿತ ಮತ್ತು ನೆರೆಮನೆಯ ಶಿವಪ್ರಸಾದ್ ಅವರನ್ನು ಬೀಳ್ಕೊಟ್ಟು ಮರಳಿದ್ದರು. ಮನೆ ಕಟ್ಟಲು ಪೊನ್ನುಕ್ಕರ ಎಂಬಲ್ಲಿ ಪುಟ್ಟ ಜಮೀನು ಖರೀದಿಸಿದ್ದರು. ಇನ್ನೆರಡು ವರ್ಷಗಳ ನಂತರ ನಿವೃತ್ತಿ. ಸೈನ್ಯದಲ್ಲಿ ಮುಂದುವರಿಯುವ ಬಗ್ಗೆಯೂ ಅವರು ತನ್ನ ಸ್ನೇಹಿತರಿಗೆ ಹೇಳಿದ್ದರು.
ತ್ರಿಶೂರ್: ತಮಿಳುನಾಡಿನ ಕುನೂರ್ (Coonoor) ಬಳಿ ಬುಧವಾರ ನಡೆದ ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ (IAF chopper crash) ಸಾವಿಗೀಡಾದವರಲ್ಲಿ 37 ವರ್ಷದ ಜೂನಿಯರ್ ವಾರಂಟ್ ಅಧಿಕಾರಿ (Junior warrant officer) ಎ ಪ್ರದೀಪ್ (A Pradeep) ಕೂಡಾ ಒಬ್ಬರು. ನಾಲ್ಕು ದಿನಗಳ ಹಿಂದೆಯಷ್ಟೇ ಕೇರಳದಲ್ಲಿ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದರು. ತ್ರಿಶೂರ್ ಜಿಲ್ಲೆಯ ಪೊನ್ನುಕ್ಕರ ಮೂಲದ ಪ್ರದೀಪ್ ಕೊಯಮತ್ತೂರು ಬಳಿಯ ಸೂಲೂರಿನ ಐಎಎಫ್ ನಿಲ್ದಾಣದಲ್ಲಿ ನಿಯೋಜನೆಗೊಂಡಿದ್ದರು. ಪ್ರದೀಪ್ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಲು ಮನೆಗೆ ಬಂದಿದ್ದರು. ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದಾಗಿ ವೆಂಟಿಲೇಟರ್ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಅಪ್ಪ ಅರಕ್ಕಲ್ ರಾಧಾಕೃಷ್ಣರ ಜತೆ ಕೆಲವು ದಿನ ಇದ್ದು ಪ್ರದೀಪ್ ಕರ್ತವ್ಯಕ್ಕೆ ಮರಳಿದ್ದರು. ಪ್ರದೀಪ್ ಮಂಗಳವಾರ ತನ್ನ ತಾಯಿ ಕುಮಾರಿ ಅವರಿಗೆ ಕರೆ ಮಾಡಿ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜಿಗೆ ವಿಐಪಿ ಚಾಪರ್ ರೈಡ್ ಕುರಿತು ಮಾತನಾಡಿದ್ದಾರೆ. “ಅವರು ನಾಲ್ಕು ದಿನಗಳ ಹಿಂದೆ ತಮ್ಮ ಮಗನ ಹುಟ್ಟುಹಬ್ಬದ ಆಚರಣೆಗಳಿಗಾಗಿ ಮತ್ತು ಹಾಸಿಗೆ ಹಿಡಿದ ತಂದೆಯೊಂದಿಗೆ ಸಮಯ ಕಳೆಯಲು ಇಲ್ಲಿಗೆ ಬಂದಿದ್ದರು” ಎಂದು ಪುತೂರ್ ಪಂಚಾಯತ್ ಅಧ್ಯಕ್ಷೆ ಮಿನಿ ಉನ್ನಿಕೃಷ್ಣನ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಪ್ರದೀಪ್ ಕೂಡ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬುಧವಾರ ಸಂಜೆ 7.30ರ ಸುಮಾರಿಗೆ ಪೊನ್ನುಕ್ಕರ ತಲುಪಿತ್ತು. ಇದರ ಬೆನ್ನಲ್ಲೇ ರಾತ್ರಿ 9 ಗಂಟೆಗೆ ಪೊನ್ನುಕ್ಕರ ಮೈಂಪಿಳ್ಳಿ ದೇವಸ್ಥಾನದ ಬಳಿಯಿರುವ ಮನೆ ಬಳಿ ಜನಪ್ರತಿನಿಧಿಗಳು ಸೇರಿದಂತೆ ಜನರು ಬರಲಾರಂಭಿಸಿದರು. ಆದರೆ, ಎಲ್ಲರೂ ಪ್ರದೀಪ್ ಮನೆಯವರಿಗೆ ತಿಳಿಸದಿರಲು ಪ್ರಯತ್ನಿಸಿದರು. ಪ್ರದೀಪ್ 2002 ರಲ್ಲಿ ವಾಯುಪಡೆಗೆ ಸೇರಿದ್ದು ಪತ್ನಿ ಶ್ರೀಲಕ್ಷ್ಮಿ ಮತ್ತು ಇಬ್ಬರು ಮಕ್ಕಳೊಂದಿಗೆ ಸೂಲೂರಿನ ಐಎಎಫ್ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು.
ಪ್ರದೀಪ್ ಒಂದು ವಾರದ ಹಿಂದೆ ತನ್ನ ಸ್ನೇಹಿತ ಮತ್ತು ನೆರೆಮನೆಯವರಾದ ಶಿವಪ್ರಸಾದ್ ಅವರನ್ನು ಬೀಳ್ಕೊಟ್ಟು ಮರಳಿದ್ದರು. ಮನೆ ಕಟ್ಟಲು ಪೊನ್ನುಕ್ಕರ ಎಂಬಲ್ಲಿ ಪುಟ್ಟ ಜಮೀನು ಖರೀದಿಸಿದ್ದರು. ಇನ್ನೆರಡು ವರ್ಷಗಳ ನಂತರ ನಿವೃತ್ತಿ. ಸೈನ್ಯದಲ್ಲಿ ಮುಂದುವರಿಯುವ ಬಗ್ಗೆಯೂ ಅವರು ತನ್ನ ಸ್ನೇಹಿತರಿಗೆ ಹೇಳಿದ್ದರು. ಆದರೆ, ಪ್ರದೀಪ್ ಹುಟ್ಟೂರಿನಲ್ಲಿ ನೆಲೆಯೂರಲು ಆಸಕ್ತಿ ತೋರಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ.
ಪ್ರದೀಪ್ 2002 ರಲ್ಲಿ ವಾಯುಪಡೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ವಿಮಾನ ಸಿಬ್ಬಂದಿಯಾದರು. ಅವರು ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಮತ್ತು ಉತ್ತರಾಖಂಡ ಮತ್ತು ಕೇರಳದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇವರು ರಾಧಾಕೃಷ್ಣನ್ ಮತ್ತು ಕುಮಾರಿ ದಂಪತಿಯ ಪುತ್ರ. ಶ್ರೀಲಕ್ಷ್ಮಿ ಅವರ ಪತ್ನಿ. ದಕ್ಷಿಣದೇವ್ ಮತ್ತು ದೇವಪ್ರಯಾಗ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ತ್ರಿಶೂರ್‌ನ ಪುತೂರ್ ಪೊನ್ನುಕ್ಕರ ಮೈಂಪಿಲ್ಲಿ ದೇವಸ್ಥಾನದ ಬಳಿ ಮನೆ ಇದೆ. ಪುತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಟು ಮುಗಿಸಿ ವಾಯುಸೇನೆಗೆ ಸೇರಿದ್ದರು. ಅವರ ಮೊದಲ ಹುದ್ದೆ ಪೆಪನ್ ಫಿಟ್ಟರ್ ಆಗಿತ್ತು. ನಂತರ ಅವರನ್ನು ವಿಮಾನ ಸಿಬ್ಬಂದಿಯಾಗಿ ಆಯ್ಕೆ ಮಾಡಲಾಯಿತು.
ಕೇರಳದಲ್ಲಿ 2018ರ ಪ್ರವಾಹದ ವೇಳೆ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಾಯುಪಡೆಯ ತಂಡದ ಭಾಗವಾಗಿದ್ದರು ಪ್ರದೀಪ್. ಪ್ರವಾಹದ ಸಂದರ್ಭದಲ್ಲಿ ಸಾವಿರಾರು ಜನರನ್ನು ವಿಮಾನದಲ್ಲಿ ಕರೆದೊಯ್ದ ಮಿಷನ್‌ಗಳ ಭಾಗವಾಗಿದ್ದಕ್ಕಾಗಿ ರಾಜ್ಯ ಸರ್ಕಾರ ಅವರನ್ನು ಗೌರವಿಸಿದೆ. ಅದಕ್ಕೂ ಮೊದಲು ಅವರು ಉತ್ತರ ಭಾರತದಲ್ಲಿ ಹಲವಾರು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Army Chopper Crash: ಸೇನಾ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ, ಈಗ ಪರಿಸ್ಥಿತಿ ಅಲ್ಲಿ ಹೇಗಿದೆ?
Published On - 10:55 am, Thu, 9 December 21