- Kannada News Photo gallery Chief of Defense Forces of the Indian Army General Bipin Rawat Exclusive photos
ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಎಕ್ಸ್ಕ್ಲೂಸಿವ್ ಫೋಟೋಗಳು ಇಲ್ಲಿವೆ
Bipin Rawat: ದೇಶಕ್ಕಾಗಿ ತನ್ನ ಜೀವವನ್ನು ಮುಡಿಪಿಟ್ಟ ಬಿಪಿನ್ ರಾವತ್ 1978ರಲ್ಲಿ ದ್ವಿತೀಯ ಲೆಫ್ಟಿನಿಂಟ್ ಆಗಿ ಮೊದಲು ಭಾರತೀಯ ಸೇನೆಯಲ್ಲಿ ಸೇವೆ ಆರಂಭಿಸುತ್ತಾರೆ.
Updated on: Dec 09, 2021 | 9:47 AM

ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನಿನ್ನೆ (ಡಿಸೆಂಬರ್ 8) ಸಂಭವಿಸಿದ ಭೀಕರ ಅಪಘಾತದಲ್ಲಿ ಅಸುನೀಗಿದ್ದಾರೆ. ಇವರ ಸಾವು ಇಡೀ ರಾಷ್ಟ್ರಕ್ಕೆ ತುಂಬಲಾರದ ನಷ್ಟ.

ದೇಶಕ್ಕಾಗಿ ತನ್ನ ಜೀವವನ್ನು ಮುಡಿಪಿಟ್ಟ ಬಿಪಿನ್ ರಾವತ್ 1978ರಲ್ಲಿ ದ್ವಿತೀಯ ಲೆಫ್ಟಿನಿಂಟ್ ಆಗಿ ಮೊದಲು ಭಾರತೀಯ ಸೇನೆಯಲ್ಲಿ ಸೇವೆ ಆರಂಭಿಸುತ್ತಾರೆ.

1980ರಲ್ಲಿ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿದ್ದ ಬಿಪಿನ್ ರಾವತ್, 1984ರಲ್ಲಿ ಸೇನೆಯ ಕ್ಯಾಪ್ಟನ್ ಆಗುತ್ತಾರೆ.

ಉತ್ತರಾಖಂಡ ರಾಜ್ಯದ ಪೌರಿ ಗರ್ವಾಲ್ ಜಿಲ್ಲೆಯ ಪೌರಿಯಲ್ಲಿ ಬಿಪಿನ್ ರಾವತ್ ಜನಿಸುತ್ತಾರೆ. ಮಧುಲಿಕಾ ರಾವತ್ ಜೊತೆ ದಾಂಪತ್ಯ ಜೀವತಕ್ಕೆ ಜೀವನಕ್ಕೆ ಕಾಲಿಡುತ್ತಾರೆ.

ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕವಾದಾಗಿನಿಂದ ಕೇಂದ್ರ ಸರ್ಕಾರದ ಜೊತೆ ಹೆಚ್ಚು ಬಾಂಧವ್ಯ ಹೊಂದಿದ್ದರು.

2003ರಲ್ಲಿ ಕರ್ನಲ್ ಹುದ್ದೆ ಅಲಂಕರಿಸಿದ ಬಿಪಿನ್ ರಾವತ್, 2007ರಲ್ಲಿ ಬ್ರಿಗೇಡಿಯರ್ ಸ್ಥಾನ ಪಡೆಯುತ್ತಾರೆ.

ಬಿಪಿನ್ ರಾವತ್ ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದರು. ಅಲ್ಲದೇ ಮಕ್ಕಳಿಗೆ ಒಳ್ಳೆ ಒಳ್ಳೆ ವಿಚಾರಗಳನ್ನು ಹೇಳುತ್ತಿದ್ದರು.




