Virat Kohli: 48 ಗಂಟೆ ಕಾಲಾವಕಾಶ ನೀಡಿದ್ದರೂ ನಾಯಕತ್ವದಿಂದ ಕೆಳಗಿಳಿಯಲಿಲ್ಲ ಕೊಹ್ಲಿ: ನಂತರ ನಡೆದಿದ್ದೇನು ಗೊತ್ತೇ?

India ODI Captaincy, Rohit Sharma: ಟೀಮ್ ಇಂಡಿಯಾ ಆಯ್ಕೆ ಸಮಿತಿ ಬುಧವಾರ ಸಭೆ ನಡೆಸಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಯುಗ ಮುಕ್ತಾಯವಾಗುತ್ತಾ ಬರುತ್ತಿದ್ದು, ಇದೀಗ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ. ಹೀಗಿರುವಾಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ.

TV9 Web
| Updated By: Vinay Bhat

Updated on: Dec 09, 2021 | 8:44 AM

ಗಂಗೂಲಿ, ವಿರಾಟ್

ಗಂಗೂಲಿ, ವಿರಾಟ್

1 / 8
ಟೀಮ್ ಇಂಡಿಯಾ ಆಯ್ಕೆ ಸಮಿತಿ ಬುಧವಾರ ಸಭೆ ನಡೆಸಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಯುಗ ಮುಕ್ತಾಯವಾಗುತ್ತಾ ಬರುತ್ತಿದ್ದು, ಇದೀಗ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ.

2 / 8
ಹೀಗಿರುವಾಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿರಾಟ್ ಕೊಹ್ಲಿ ಅವರಿಗೆ ಸ್ವಯಂ ಪ್ರೇರಿತವಾಗಿ ಏಕದಿನ ನಾಯಕತ್ವದಿಂದ ಕೆಳಗಿಳಿಯಲು 48 ಗಂಟೆಗಳ ಕಾಲಾವಕಾಶ ನೀಡಿತ್ತಂತೆ.

3 / 8
ಹೌದು, ಪಿಟಿಐ ಮಾಡಿರುವ ವರದಿಯ ಪ್ರಕಾರ, ಕೊಹ್ಲಿ ಅವರ ಬಳಿ 48 ಗಂಟೆಗಳ ಒಳಗೆ ಏಕದಿನ ನಾಯಕತ್ವದಿಂದ ನೀವಾಗಿಯೇ ಕೆಳಗಿಳಿಯಿರಿ ಎಂದು ಬಿಸಿಸಿಐ ಕೇಳಿತ್ತು. ಆದರೆ, ಕೊಹ್ಲಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದಾದ 49ನೇ ಗಂಟೆಗೆ ಬಿಸಿಸಿಐ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನೂತಕ ಏಕದಿನ ನಾಯಕ ಎಂದು ಘೋಷಣೆ ಮಾಡಿದೆಯಂತೆ.

4 / 8
ವಿರಾಟ್ ಕೊಹ್ಲಿ ಬಹಳ ಅಗ್ರೆಸಿವ್ ಆಟಗಾರ. ನಾಯಕನಾಗಿಯೂ ಬಹಳ ಅಗ್ರೆಸಿವ್. ಎಂಎಸ್ ಧೋನಿ ನಂತರ ಅವರು ಮೂರೂ ಮಾದರಿ ಕ್ರಿಕೆಟ್​ನ ತಂಡಗಳಿಗೆ ನಾಯಕರಾಗಿ ಬಹಳ ಪಂದ್ಯಗಳನ್ನ ಆಡಿದ್ದಾರೆ. ತಂಡಕ್ಕೆ ಹೊಸ ರೂಪ ಕೊಟ್ಟಿದ್ಧಾರೆ. ತಂಡದ ಬಾಡಿ ಲಾಂಗ್ವೇಜ್ ಬದಲಿಸಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ಭಾರತ ಯಾವ ಐಸಿಸಿ ಟೂರ್ನಿಯನ್ನೂ ಜಯಿಸಲಾಗಲಿಲ್ಲ ಎಂಬುದು ಕಪ್ಪು ಚುಕ್ಕೆಯಾಗಿದೆ.

5 / 8
ವಿರಾಟ್ ಕೊಹ್ಲಿ ನಾಯಕರಾಗಿ ಆಡಿದ ಏಕದಿನ ಪಂದ್ಯಗಳಲ್ಲಿ ರನ್​ಗಳ ಹೊಳೆಯ್ನೂ ಹರಿಸಿದ್ದಾರೆ. 72.65 ಸರಾಸರಿಯಲ್ಲಿ 5,449 ರನ್ ಗಳಿಸಿದ್ದಾರೆ. 21 ಶತಕ ಭಾರಿಸಿದ್ದಾರೆ. ಶತಕದ ವಿಚಾರದಲ್ಲಿ ರಿಕಿ ಪಾಂಟಿಂಗ್ ಬಿಟ್ಟರೆ ಎರಡನೇ ಸ್ಥಾನ ವಿರಾಟ್ ಕೊಹ್ಲಿಯದ್ದು. ಕೊಹ್ಲಿ ನಾಯಕರಾಗಿ ಐಸಿಸಿ ಟೂರ್ನಿಗಳನ್ನ ಜಯಿಸಿದೇ ಇದ್ದರೂ ತಂಡ ಆ ಟೂರ್ನಿಗಳಲ್ಲಿ ಉತ್ತಮ ಸಾಧನೆಯನ್ನಂತೂ ಮಾಡಿದೆ. ಅವರ ನಾಯಕತ್ವದಲ್ಲಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿತು. 2019ರ ಓಡಿಐ ವಿಶ್ವಕಪ್​ನ ಸೆಮಿಫೈನಲ್ ಹಂತ ತಲುಪಿತ್ತು.

6 / 8
ಭಾರತ ತಂಡದ ನಾಯಕತ್ವ ಹಂಚಿಕೆ ಆಗಬೇಕು ಎಂದು ಕಳೆದ 2-3 ವರ್ಷಗಳಿಂದ ಭಾರಿ ಚರ್ಚೆಯಾಗುತ್ತಿತ್ತು. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ಗೆ 5 ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಅವರಿಗೆ ಸೀಮಿತ ಓವರ್​ಗಳ ಕ್ರಿಕೆಟ್ ತಂಡದ ನಾಯಕತ್ವ ನೀಡಿ ಟೆಸ್ಟ್ ಕ್ಯಾಪ್ಟನ್ಸಿಯನ್ನು ಕೊಹ್ಲಿಗೆ ವಹಿಸಬೇಕು ಎಂದು ದನಿ ಎದ್ದಿತ್ತು. ಇದೀಗ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕಗೊಂಡ ಬಳಿಕ ಇದು ಸಾಕಾರವಾಗಿದೆ.

7 / 8
ಕಳೆದ ತಿಂಗಳು ನಡೆದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ರೋಹಿತ್ ಭಾರತ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕಿಳಿದಿದ್ದರು. ಇದೀಗ ಜನವರಿಯಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯೊಂದಿಗೆ ಭಾರತ ಒಡಿಐ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

8 / 8
Follow us
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ