viral video: ಬಾಯಿ ಚಪ್ಪರಿಸಿಕೊಂಡು ಚಿಕನ್ ತುಂಡುಗಳನ್ನು ತಿಂದ 11 ತಿಂಗಳ ಮಗು: ವೀಡಿಯೋ ವೈರಲ್
ಇಲ್ಲೊಂದು 11 ತಿಂಗಳ ಮಗುವಿನ ವಿಡಿಯೋ ಸಖತ್ ವೈರಲ್ ಆಗಿದೆ. ಬಾಯಿಚಪ್ಪರಿಸಿಕೊಂಡು ಚಿಕನ್ ಪೀಸ್ವೊಂದನ್ನು ಒಂದೇ ಸಲಕ್ಕೆ ಪೂರ್ತಿಯಾಗಿ ತಿಂದ ವೀಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಡಿಯೋಗಳು ಆಗಾಗ ಕಣ್ಣರಳಿಸಿ ನೋಡುವಂತೆ ಮಾಡುತ್ತವೆ. ಕೆಲವು ಪ್ರಾಣಿಗಳದ್ದಾಗಿದ್ದರೆ, ಇನ್ನು ಕೆಲವು ಪುಟ್ಟಮಕ್ಕಳ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೋಗಳು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಇಲ್ಲೊಂದು 11 ತಿಂಗಳ ಮಗುವಿನ ವಿಡಿಯೋ ಸಖತ್ ವೈರಲ್ ಆಗಿದೆ. 11ತಿಂಗಳ ಮಗುವೊಂದು ಚಿಕನ್ ಪೀಸ್ವೊಂದನ್ನು ಒಂದೇ ಸಲಕ್ಕೆ ಪೂರ್ತಿಯಾಗಿ ತಿಂದ ವೀಡಿಯೋ ವೈರಲ್ ಆಗಿದೆ.18 ಸೆಕೆಂಡ್ಗಳ ಈ ವೀಡಿಯೋವು ಟ್ವಿಟರ್ನಲ್ಲಿ ಭಾರಿ ವೈರಲ್ ಅಗಿದೆ. ಜನಪ್ರಿಯ ಲೈಫ್ಸ್ಟೈಲ್ ಬ್ಲಾಗರ್ ಒಬ್ಬರು ಈ ವೀಡಿಯೋವನ್ನು ಹಂಚಿಕೊಂಡಿದ್ದರು. ಸದ್ಯ ಈ ವೀಡಿಯೋ 2.5 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ.
18 ಸೆಕೆಂಡ್ಗಳ ವೀಡಿಯೋದಲ್ಲಿ ಮಗುವೊಂದು ಕುರ್ಚಿಯ ಮೇಲೆ ಕುಳಿತು ತನ್ನ ಎದುರು ಬಟ್ಟಲಿನಲ್ಲಿರುವ ಚಿಕನ್ ತುಂಡುಗಳನ್ನು ಒಂದೇ ಏಟಿಗೆ ತಿಂದು ಮುಗಿಸುವುದನ್ನು ಕಾಣಬಹುದು. ಇದಕ್ಕೆ ಹಿನ್ನಲೆ ಧ್ವನಿಯಲ್ಲಿ ನಿನ್ನೆ ರಾತ್ರಿ ಈತ ನನಗಿಂತ ಹೆಚ್ಚು ಸ್ವಚ್ಛವಾಗಿ ಚಿಕನ್ ತಿಂದು ಮುಗಿಸಿದ್ದಾನೆ. ಜತೆಗೆ ಇನ್ನು ಹೆಚ್ಚಿನ ಚಿಕನ್ ತುಂಡುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ ಎಂದು ಕೇಳಿಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ಗಳನ್ನು ಹಾಕಿದ್ದಾರೆ. ಹಲವು ವಿಧದ ಟ್ರೋಲ್ ಫೋಟೋಗಳನ್ನು ಮಾಡಿ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಮಗುವಿನ ಮುಗ್ಧತೆ ಹಾಗೂ ಅದು ರುಚಿಯಾದ ಚಿಕನ್ ತುಂಡುಗಳನ್ನು ತಿನ್ನುವುದನ್ನು ನೋಡಿ ಖುಷಿಯ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
Not him cleaning the chicken wing better than me last night. I’m shook ? pic.twitter.com/LlbdjYtijx
— Knight (@knightsglow) December 4, 2021
ಇದನ್ನೂಓದಿ:
ಹೊಸ ಸೋಫಾದ ಒಳಗೆ ಹೆಬ್ಬಾವು ಪ್ರತ್ಯಕ್ಷ; ಹಾವನ್ನು ರಕ್ಷಿಸಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು