AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಿಪ್ಸ್ ತಿಂದ ಪ್ಯಾಕೆಟ್​ಗೆ ಉಗುಳಿ ಮತ್ತೆ ಅಂಗಡಿಯಲ್ಲಿಟ್ಟ ಯುವತಿ; ವಿಡಿಯೋ ಕಂಡು ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು

ಲಿಬ್ಬಿ ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್‌ಗಳಿಗೆ ಉಗುಳುವುದನ್ನು ಸ್ವತಃ ತಾನೇ ಸೆರೆಹಿಡಿದು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾಳೆ. ಆದರೆ ನಂತರ ತೀವ್ರ ಟೀಕೆ ಎದುರಾಗಿದ್ದರಿಂದ ಆ ವಿಡಿಯೋವನ್ನು ಡಿಲಿಟ್ ಮಾಟಿದ್ದಾಳೆ. ಆದರೆ ಅಷ್ಟೋತ್ತಿಗಾಗಲೇ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ ಮೂಲಕ ಟೀಕಿಸಿದ್ದಾರೆ.

Viral Video: ಚಿಪ್ಸ್ ತಿಂದ ಪ್ಯಾಕೆಟ್​ಗೆ ಉಗುಳಿ ಮತ್ತೆ ಅಂಗಡಿಯಲ್ಲಿಟ್ಟ ಯುವತಿ; ವಿಡಿಯೋ ಕಂಡು ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು
ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್​ಗೆ ಉಗುಳುತ್ತಿರುವುದು
TV9 Web
| Edited By: |

Updated on: Dec 08, 2021 | 12:07 PM

Share

ಯುಎಸ್‌ನ ನ್ಯಾಶ್‌ವಿಲ್ಲೆಯಲ್ಲಿರುವ ಅಂಗಡಿಯಲ್ಲಿ ಯುವತಿಯೊಬ್ಬಳು ಆಲೂಗೆಡ್ಡೆ ಚಿಪ್ಸ್ ತಿಂದು ಅದೇ ಪ್ಯಾಕೆಟ್‌ಗೆ ಉಗುಳಿದ್ದಾಳೆ. ಅಷ್ಟೇ ಅಲ್ಲದೇ ಮತ್ತೆ ಅದನ್ನು ಪ್ಯಾಕ್ ಮಾಡಿ ಅಂಗಡಿಯಲ್ಲಿ ಇತರ ತಿಂಡಿಗಳ ಮಧ್ಯೆ ಇಟ್ಟಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿನ ಯುವತಿಯನ್ನು ಸಂಗೀತಗಾರ ಹಂಟರ್ ಹೇಯ್ಸ್ ಅವರ ಮಾಜಿ ಗೆಳತಿ ಮೇಕಪ್ ಆರ್ಟಿಸ್ಟ್ ಲಿಬ್ಬಿ ಬಾರ್ನ್ಸ್ ಎಂದು ಗುರುತಿಸಲಾಗಿದೆ.

ಲಿಬ್ಬಿ ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್‌ಗಳಿಗೆ ಉಗುಳುವುದನ್ನು ಸ್ವತಃ ತಾನೇ ಸೆರೆಹಿಡಿದು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾಳೆ. ಆದರೆ ನಂತರ ತೀವ್ರ ಟೀಕೆ ಎದುರಾಗಿದ್ದರಿಂದ ಆ ವಿಡಿಯೋವನ್ನು ಡಿಲಿಟ್ ಮಾಟಿದ್ದಾಳೆ. ಆದರೆ ಅಷ್ಟೋತ್ತಿಗಾಗಲೇ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ ಮೂಲಕ ಟೀಕಿಸಿದ್ದಾರೆ. ಈ ವಿಟಿಯೋದಲ್ಲಿ ಲಿಬ್ಬಿ ಆಲೂಗೆಡ್ಡೆ ಚಿಪ್ಸ್ ಪ್ಯಾಕ್ ಅನ್ನು ತೆರೆದು ಅದರ ರುಚಿ ನೋಡಿ ನಂತರ ಅದಕ್ಕೆ ಉಗುಳಿದ್ದಾಳೆ. ಅಷ್ಟೇ ಅಲ್ಲದೇ ಪೋರ್ಟಬಲ್ ಫ್ಲಾಟ್ ಐರನ್‌ನೊಂದಿಗೆ ಪ್ಯಾಕೆಟ್ ಅನ್ನು ಮರು ಸೀಲ್ ಮಾಡುವ ಪ್ರಯತ್ನವನ್ನು ಮಾಡಿದ್ದಾಳೆ.

ಜತೆಗೆ ಸೀಲ್ ಮಾಡಿದ ನೀರಿನ ಬಾಟಲಿಯಿಂದ ಒಂದು ಸಿಪ್ ನೀರು ಕುಡಿದು ಮತ್ತೆ ಅದನ್ನು ಇಟ್ಟಿದ್ದಾಳೆ. ಇನ್ನು ಅಂಗಡಿಯಲ್ಲಿನ ಟಿಶೂ ಪೆಪರ್​ನಿಂದ ನಾಲಿಗೆ ವರೆಸಿ ಮತ್ತೆ ಅದನ್ನು ಹಾಗೆಯೇ ಇಟ್ಟಿದ್ದಾಳೆ. ಈ ಕಾರಣಕ್ಕೆ ನೆಟ್ಟಿಗರು ಈ ವಿಡಿಯೋ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಸದ್ಯ ಈ ವಿಡಿಯೋವನ್ನು ಸೆರೆ ಹಿಡಿದ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ವಿಡಿಯೋದಲ್ಲಿರುವ ಯುವತಿಯನ್ನು ಮಾತ್ರ ಲಿಬ್ಬಿ ಎಂದು ಗುರುತಿಸಲಾಗಿದೆ.

ಇನ್ನು ಈ ವಿಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿಯೂ ಇದ್ದು, ಲಿಬ್ಬಿ ವರ್ತನೆಯನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಲಿಬ್ಬಿ ಆತನನ್ನು ತರಾಟೆಗೆ ತೆಗೆದುಕೊಂಡು ನಿನ್ನ ಕೆಲಸವಷ್ಟೇ ನೀನು ಮಾಡು ಎಂದು ಉತ್ತರಿಸಿದ್ದಾಳೆ. ನೆಟ್ಟಿಗರು ಈ ವೀಡಿಯೊವನ್ನು ನೋಡಿದ ನಂತರ ಕೋಪಗೊಂಡಿದ್ದು, ಲಿಬ್ಬಿ ವರ್ತನೆಯನ್ನು ಖಂಡಿಸಿದ್ದಾರೆ. ಮನರಂಜನೆಗಾಗಿ ಇನ್ನಿತರ ವ್ಯಕ್ತಿಗಳ ಆರೋಗ್ಯದ ಜತೆ ಆಟವಾಡುತ್ತಿದ್ದಾಳೆ ಎಂದು ಕಮೆಂಟ್ ಮೂಲಕ ಅನೇಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದ ಕುರಿತು ಅಂಗಡಿ ಮಾಲೀಕರು ಸ್ಪಷ್ಟನೆ ನೀಡಿದ್ದು, ಅವರು ಬಳಸಿದ ವಸ್ತುಗಳನ್ನು ಖರೀದಿಸಿ ತೆಗೆದುಕೊಂಡು ಹೋಗಿದ್ದಾರೆ. ಇದು ತಮಾಷೆಗಾಗಿ ಮಾಡಿದ ವಿಡಿಯೋ. ನಾವು ನಮ್ಮ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಗಮನಹರಿಸುತ್ತೇವೆ ಎಂದು ತಿಳಿಸಿದ್ದಾರೆ.

Viral Video: ಸಲೂನ್​ಗೆ ಬಂದ ಕೋತಿ ಟ್ರಿಮ್ಮರ್​ಗೆ ಮುಖವೊಡ್ಡಿದ ವೈರಲ್​ ವಿಡಿಯೋ ನೋಡಿ

Viral Video: ಮದುವೆಗೆ ತಂದ ಕೇಕ್​ ಕಣ್ಣ ಮುಂದೆಯೇ ನೆಲದ ಪಾಲಾಯ್ತು; ವಧು-ವರರ ರಿಯಾಕ್ಷನ್​ ಹೇಗಿತ್ತು ಗೊತ್ತಾ?

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್