ಕೊಳಕು ಮಂಡಲ ಹಾವಿನ ಆರ್ಭಟದೆದುರು ತನ್ನ ಮರಿಗಳ ರಕ್ಷಿಸಲು ಹೋಗಿ ಪ್ರಾಣ ಬಿಟ್ಟ ತಾಯಿ ನಾಯಿ

ತಾಯಿ ನಾಯಿ ತನ್ನ ಮರಿಗಳನ್ನ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಕೊಳಕು ಮಂಡಲ ಹಾವನ್ನು ತಾಯಿ ನಾಯಿ ಕಚ್ಚಿಬಿಟ್ಟಿದೆ. ನಾಯಿ ಮತ್ತು ಹಾವಿನ ಕಾದಾಟ ತಿಳಿದು ವಾರಂಗಲ್ ವನ್ಯ ಜೀವಿ ಸಂಸ್ಥೆಯ ದಿಲೀಪ್ ಮತ್ತು ತಂಡದವರು ಸ್ಥಳಕ್ಕೆ ಬಂದಿದ್ದಾರೆ. ಹಾವನ್ನು ಹಿಡಿಯುವಾಗ ನಾಯಿಯು ಅಚಾನಕ್ಕಾಗಿ ಹಾವನ್ನ ಕಚ್ಚಿದೆ.

ಕೊಳಕು ಮಂಡಲ ಹಾವಿನ ಆರ್ಭಟದೆದುರು ತನ್ನ ಮರಿಗಳ ರಕ್ಷಿಸಲು ಹೋಗಿ ಪ್ರಾಣ ಬಿಟ್ಟ ತಾಯಿ ನಾಯಿ
ಕೊಳಕು ಮಂಡಲ ಹಾವಿನ ಆರ್ಭಟದೆದುರು ತನ್ನ ಮರಿಗಳ ರಕ್ಷಿಸಲು ಹೋಗಿ ಪ್ರಾಣ ಬಿಟ್ಟ ತಾಯಿ ನಾಯಿ

ತುಮಕೂರು: ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಹೋಗಿ ಕೊಳಕು ಮಂಡಲ ಹಾವನ್ನು ಕಚ್ಚಿ ತಾಯಿ ನಾಯಿಯೊಂದು ಪ್ರಾಣ ಬಿಟ್ಟ ಮನಕಲಕುವ ಘಟನೆ ತುಮಕೂರು ನಗರದ ಅಗ್ರಹಾರದ ಬಳಿ ನಡೆದಿದೆ. ತಾಯಿ ನಾಯಿ ಸಮೀಪದ ಹುಲ್ಲಿನ ಬಣವೆ ಬಳಿ ನಾಲ್ಕು ಮರಿಗಳಿಗೆ ಜನ್ಮ ನೀಡಿ, ಪಾಲನೆ ಮಾಡುತ್ತಿತ್ತು. ಆದರೆ ಅಲ್ಲೊಂದು ಧೂರ್ತ ಕೊಳಕು ಮಂಡಲ ಹಾವು ಪ್ರತ್ಯಕ್ಷವಾಗಿತ್ತು. ನಾಯಿ ಮರಿಗಳನ್ನು ತಿನ್ನಲು ಹಾವು ಬಂದಿದ್ದು, ನಾಯಿಯು ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ತೀವ್ರ ಪ್ರತಿರೋಧವೊಡ್ಡಿದೆ.

ತುಮಕೂರಿನಲ್ಲಿ ಹೃದಯ ಕಲಕುವ ಘಟನೆ: ತಾಯಿ ನಾಯಿ ತನ್ನ ಮರಿಗಳನ್ನ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಕೊಳಕು ಮಂಡಲ ಹಾವನ್ನು ತಾಯಿ ನಾಯಿ ಕಚ್ಚಿಬಿಟ್ಟಿದೆ. ನಾಯಿ ಮತ್ತು ಹಾವಿನ ಕಾದಾಟ ತಿಳಿದು ವಾರಂಗಲ್ ವನ್ಯ ಜೀವಿ ಸಂಸ್ಥೆಯ ದಿಲೀಪ್ ಮತ್ತು ತಂಡದವರು ಸ್ಥಳಕ್ಕೆ ಬಂದಿದ್ದಾರೆ. ಹಾವನ್ನು ಹಿಡಿಯುವಾಗ ನಾಯಿಯು ಅಚಾನಕ್ಕಾಗಿ ಹಾವನ್ನ ಕಚ್ಚಿದೆ. ಆಗ ಹಾವು ಕೂಡ ತಕ್ಷಣ ತಪ್ಪಿಸಿಕೊಂಡು ಹುಲ್ಲಿನ ಬಳಿ ಅವಿತುಕೊಂಡಿದೆ. ಸುಮಾರು ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಆದ್ರೆ ಕೊಳಕುಮಂಡಲ ಹಾವನ್ನು ಕಚ್ಚಿದ ಪರಿಣಾಮ ನಾಯಿ ಸಾವನ್ನಪ್ಪಿದೆ.

-ಮಹೇಶ್, ಟಿವಿ9 ತುಮಕೂರು

Click on your DTH Provider to Add TV9 Kannada